Latest

ಸನ್ನಿ ಲಿಯೋನ್ ವಿಡಿಯೋ ಸಾಂಗ್ ನಿಷೇಧಕ್ಕೆ ಆಗ್ರಹ

ಪ್ರಗತಿವಾಹಿನಿ ಸುದ್ದಿ; ಮುಂಬೈ: ಬಾಲಿವುಡ್ ನಟಿ ಸನ್ನಿ ಲಿಯೋನ್ ಳನ್ನು ಭಾರತದಿಂದ ಹೊರ ಹಾಕಬೇಕು ಎಂದು ಮಥುರಾ ವೃಂದಾವನ್ ಸಂತ ನವಲ್ ಗಿರಿ ಮಹಾಜನ್ ಆಗ್ರಹಿಸಿದ್ದಾರೆ.

ಸನ್ನಿ ಲಿಯೋನ್ ನಟಿಸಿರುವ ಮಧುಬನ್ ಮೇ ರಾಧಿಕಾ…ಹಾಡು ತೀವ್ರ ವಿವಾದಕ್ಕೀಡಾಗಿದ್ದು, ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆ ತಂದಿರುವ ಹಿನ್ನೆಲೆಯಲ್ಲಿ ಸನ್ನಿ ಲಿಯೋನ್ ಹಾಗೂ ಗಾಯಕಿ ಕನ್ನಿಕಾ ಕಪೂರ್ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

Home add -Advt

ಮಧುಬನ್ ಮೇ ರಾಧಿಕಾ ಹಿಂದೂ ಧಾರ್ಮಿಕ ಗೀತೆಯಾಗಿದ್ದು, ಈ ಹಾಡನ್ನು ಆಲ್ಬಂ ಸಾಂಗ್ ಮಾಡಿ ಇತ್ತೀಚೆಗೆ ಬಿಡುಗಡೆಗೊಳಿಸಲಾಗಿತ್ತು. ಹಾಡಿನಲ್ಲಿ ಬಾಲಿವುಡ್ ನಟಿ ಸನ್ನಿ ಲಿಯೋನ್ ಅಶ್ಲೀಲ ನೃತ್ಯ ವಿವಾದಕ್ಕೆ ಕಾರಣವಾಗಿದೆ. ಮಧುಬನ್ ಒಂದು ಪವಿತ್ರ ಸ್ಥಳವಾಗಿದೆ. ರಾಧೆ ನರ್ತಕಿಯಲ್ಲ, ಆಕೆ ಓರ್ವ ಭಕ್ತೆ. ಈ ವಿಡಿಯೋ ಸಾಂಗ್ ನಿಷೇಧಿಸಬೇಕು ಎಂದು ನೆಟ್ಟಿಗರು ಒತ್ತಾಯಿಸಿದ್ದರು.

ಇದರ ಬೆನ್ನಲ್ಲೇ ಇದೀಗ ಸಂತ ನವಲ್ ಗಿರಿ ಮಹಾಜನ್, ಮಧುಬನ್ ಮೇ ರಾಧಿಕಾ ಹಾಡಿನಲ್ಲಿ ಅಶ್ಲೀಲ ನೃತ್ಯ ಮಾಡುವ ಮೂಲಕ ಸನ್ನಿ ಲಿಯೋನ್ ಹಿಂದೂ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸಿದ್ದಾರೆ. ಸನ್ನಿ ಲಿಯೋನ್ ಕ್ಷಮೆಯಾಚನೆ ಮಾಡಬ್ಕು. ಇಲ್ಲವಾದಲ್ಲಿ ಆಕೆಯನ್ನು ಭಾರತದಿಂದ ಹೊರ ಹಾಕಬೇಕು. ಅಲ್ಲದೇ ಆಲ್ಬಂ ಸಾಂಗ್ ನಿಷೇಧಿಸಬೇಕು ಎಂದು ಆಗ್ರಹಿಸಿದ್ದಾರೆ. ಒಂದು ವೇಳೆ ಹಾಡು ಬ್ಯಾನ್ ಮಾಡದಿದ್ದಲ್ಲಿ ನ್ಯಾಯಾಲಯದ ಮೊರೆ ಹೋಗುವುದಾಗಿ ಎಚ್ಚರಿಸಿದ್ದಾರೆ.
ಆತ್ಮಹತ್ಯೆಗೆ ಶರಣಾದ ಎಂಜಿನಿಯರಿಂಗ್ ವಿದ್ಯಾರ್ಥಿ

Related Articles

Back to top button