Latest

ಏ.24 ರಿಂದ ಬೇಸಿಗೆ ವಿಜ್ಞಾನ ಶಿಬಿರ   

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ನಗರದ ಡಾ. ಸ.ಜ. ನಾಗಲೋಟಿಮಠ ವಿಜ್ಞಾನ ಕೇಂದ್ರ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಹಾಗೂ ಬೆಳಗಾವಿ ಅಸೋಶೀಯೇಷನ್ ಫಾರ್ ಸೈನ್ಸ ಎಜ್ಯುಕೇಶನ್‌ಗಳ ಸಹಯೋಗದಲ್ಲಿ ಶಿವಬಸವನಗರದ ಡಾ. ಸ.ಜ. ನಾಗಲೋಟಿಮಠ ವಿಜ್ಞಾನ ಕೇಂದ್ರದಲ್ಲಿ ಏ.೨೪ ರಿಂದ ೩೦ ರವರೆಗೆ ೬ ರಿಂದ ೯ ನೇ ತರಗತಿ ವಿದ್ಯಾರ್ಥಿಗಳಿಗಾಗಿ ಬೇಸಿಗೆ ವಿಜ್ಞಾನ ಶಿಬಿರ ಆಯೋಜಿಸಲಾಗಿದೆ. 
ಮೂಲ ವಿಜ್ಞಾನ ಕುರಿತು ಪ್ರಯೋಗ ಕೈಗೊಳ್ಳುವುದು, ವಿಜ್ಞಾನ ಮಾದರಿ ತಯಾರಿಸುವುದು ಹಾಗೂ ವಿಜ್ಞಾನ ಹವ್ಯಾಸಗಳನ್ನು ಬೆಳೆಸುವುದು ಶಿಬಿರದ ಮುಖ್ಯ ಉದ್ದೇಶಗಳಾಗಿವೆ. ಆಸಕ್ತ ವಿದ್ಯಾರ್ಥಿಗಳು ದೂ: ೦೮೩೧-೨೪೭೦೮೩೨, ಮೊ: ೯೦೦೮೪೪೨೫೫೭ ಗೆ ಸಂಪರ್ಕಿಸಿ ಹೆಸರು ನೋಂದಾಯಿಸಲು ಕೋರಲಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button