Latest

ಪ್ರತಿಕ್ಷಣವೂ ಜೀವನ ಆಸ್ವಾದಿಸುತ್ತ ಬದುಕಿ : ಡಾ. ಎಚ್.ಬಿ. ಕೋಲಕಾರ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ಬದುಕು ಎಂಬುದು ತುಂಬಿದ ರಸಪಾಕ. ಬದುಕನ್ನು ಪ್ರತಿ ಕ್ಷಣವೂ ಆಸ್ವಾದನೆ ಮಾಡುವುದರ ಮೂಲಕ ಮೌಲ್ಯಯುತವಾಗಿ ಬದುಕಬೇಕೆಂದು ಆರ್‌ಪಿಡಿ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಸಹಪ್ರಾಧ್ಯಾಪಕ ಡಾ. ಎಚ್.ಬಿ. ಕೋಲಕಾರ ಹೇಳಿದರು.
ತಾಲೂಕಿನ ಕೆಕೆ ಕೊಪ್ಪ ಗ್ರಾಮದ ಶ್ರೀಮತಿ ಸೋಮವ್ವ ಚ. ಅಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ೨೦೧೮-೧೯ನೇ ಶೈಕ್ಷಣಿಕ ವರ್ಷದ ಸಾಂಸ್ಕೃತಿಕ, ಕ್ರೀಡಾ ಹಾಗೂ ಎನ್ನೆಸ್ಸೆಸ್ ಘಟಕಗಳ ಚಟುವಟಿಕೆಗಳ ಸಮಾರೋಪ
ಸಮಾರಂಭ ಹಾಗೂ ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.
ಅತಿಥಿಗಳಾಗಿ ಆಗಮಿಸಿದ್ದ ಜಿಲ್ಲಾ ಖಜಾನೆಯ ಸಹಾಯಕ ಖಜಾನೆ ಅಧಿಕಾರಿ ವೀಣಾ ಸೊಲಬಣ್ಣವರ ಮಾತನಾಡಿ, ಇಂದಿನ ಯುವಕರೆ ನಾಳಿನ ನಾಗರಿಕರು. ನಾಳಿನ ನಾಗರಿಕರೆ ಮುಂದಿನ ನಾಯಕರು. ಸುಭದ್ರ ದೇಶ ನಿರ್ಮಾಣದಲ್ಲಿ ಯುವಕರ ಪಾತ್ರ ಅತಿ ಮುಖ್ಯವಾಗಿದೆ ಎಂದು ನುಡಿದರು.
ಮಹಾವಿದ್ಯಾಲಯದ ಪ್ರಾಚಾರ್ಯ ಎಂ.ಎಸ್. ಮಾಳಗೆ ವಿದ್ಯಾರ್ಥಿಗಳಿಗೆ ಶುಭ ಕೋರಿದರು. ವಿದ್ಯಾರ್ಥಿಗಳಾದ ವಿದ್ಯಾಶ್ರೀ ವಕ್ಕುಂದ, ಸಿದ್ಧಸೋಮಲಿಂಗ ಪಾಗಾದ, ಶಕುಂತಲಾ ಕುಂಬಾರ, ಸೋಮಪ್ಪ ಡೋಂಗರಗಾವಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಆರಂಭದಲ್ಲಿ ವಿದ್ಯಾರ್ಥಿನಿಯರಿಂದ ಪ್ರಾರ್ಥನಾ ಗೀತೆ ಜರುಗಿತು. 
ಅರ್ಥಶಾಸ್ತ್ರ ಸಹಾಯಕ ಪ್ರಾಧ್ಯಾಪಕ ಅಜಿತ ಕದಂ ಸ್ವಾಗತಿಸಿದರು. ಅತಿಥಿ ಉಪನ್ಯಾಸಕಿ ಪಿ.ಎಸ್. ಬೋಗಾರ ನಿರ್ವಹಿಸಿದರು. ಸಾಂಸ್ಕೃತಿಕ ವಿಭಾಗದ ಕಾರ್ಯಧ್ಯಕ್ಷ ಸುರೇಶ ಅಳಗುಂಡಿ, ಕ್ರೀಡಾ ವಿಭಾಗದ ಕಾರ್ಯಧ್ಯಕ್ಷ ರವಿ ಪಾಟೀಲ, ಎನ್ನೆಸೆಸ್ ಸಂಯೋಜಕ ಮೌನೇಶ್ವರ ಬಡಿಗೇರ ವರದಿ ಮಂಡಿಸಿದರು. ವಿದ್ಯಾರ್ಥಿಗಳು ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button