ಪ್ರಗತಿವಾಹಿನಿ ಸುದ್ದಿ; ಮಂಗಳೂರು: ಮಹಿಳೆಯೊಬ್ಬರು ತನ್ನ ಮಗಳು ಮಾದಕ ದ್ರವ್ಯ ದ್ರಗ್ಸ್ ಜಾಲದಲ್ಲಿ ಸಿಲುಕಿಕೊಂಡಿದ್ದು, ಆಕೆಯನ್ನು ರಕ್ಷಿಸಿ ಹೊರ ತರಲು ಸಹಾಯ ಮಾಡುವಂತೆ ವಿಶ್ವ ಹಿಂದೂ ಪರಿಷತ್ ಗೆ ಪತ್ರ ಬರೆದಿದ್ದಾರೆ.
ಮಂಗಳೂರಿನ ಬಿಜೈ ಬಳಿಯ ಗ್ರೇಸಿ ಪಿಂಟೋ ಎಂಬ ಮಹಿಳೆ ಸುದೀರ್ಘ ಪತ್ರ ಬರೆದಿದ್ದು, ತನ್ನ ಮಗಳು ಕೆಲ ವರ್ಷಗಳಿಂದ ಡ್ರಗ್ಸ್ ಜಾಲದಲ್ಲಿ ಸಿಲುಕಿಕೊಂಡಿದ್ದು, ಮೂರು ವರ್ಷಗಳಿಂದ ಡ್ರಗ್ಸ್ ಸೇವನೆಗೆ ಸಿಲುಕಿದ್ದಾಳೆ. ಆಕೆಗೆ ಡ್ರಗ್ಸ್ ನೀಡಿ ಹಲವು ಬಾರಿ ಲೈಂಗಿಕ ದೌರ್ಜನ್ಯವನ್ನೂ ಎಸಗಲಾಗಿದೆ. ನಿರಂತರ ಡ್ರಗ್ಸ್ ಸೇವನೆ, ಲೈಂಗಿಕ ದೌರ್ಜನ್ಯದಿಂದಾಗಿ ಮಗಳು ಮಾನಸಿಕವಾಗಿ ಕುಗ್ಗಿ ಹೋಗಿದ್ದು, ಅಸ್ವಸ್ಥಳಾಗಿದ್ದಾಳೆ. ಮಾದಕ ದ್ರವ್ಯ ಕೂಪದಿಂದ ತನ್ನ ಮಗಳನ್ನು ರಕ್ಷಿಸಿ ಹೊರತಂದು ಆಕೆಯನ್ನು ಗುಣಪಡಿಸಲು ಸಹಾಯ ಮಾಡುವಂತೆ ಮಹಿಳೆ ವಿ ಹೆಚ್ ಪಿ ಮುಖಂಡರಲ್ಲಿ ಮೊರೆಯಿಟ್ಟಿದ್ದಾಳೆ.
ಸುರತ್ಕಲ್ ನಿವಾಸಿ ಶರೀಫ್ ಸಿದ್ಧಕಿ ಎಂಬಾತ ಡ್ರಗ್ಸ್ ದಂಧೆಯ ಪ್ರಮುಖ ಆರೋಪಿಯಾಗಿದ್ದು, ಆತನ ಜಾಲದಲ್ಲಿ ಮಗಳು ಸಿಕ್ಕಿಹಾಕಿಕೊಂಡಿದ್ದಾಳೆ. ಸಿದ್ಧಕಿ ಹಾಗೂ ಆತನ ಸ್ನೇಹಿತರು ನನ್ನ ಮಗಳಿಗೆ ಡ್ರಗ್ಸ್ ನೀಡಿ, ಲೈಂಗಿಕದೌರ್ಜನ್ಯವೆಸಗಿದ್ದಾರೆ. ಮಗಳು ಅಸ್ವಸ್ಥಳಾಗುತ್ತಿದ್ದಾಳೆ. ಡ್ರಗ್ಸ್ ಜಾಲದ ವಿರುದ್ಧ ಕ್ರಮ ಕೈಗೊಳ್ಳುವಂತೆ ಹಲವುಬಾರಿ ಪೊಲೀಸರಿಗೆ ದೂರು ನೀಡಿದರೂ, ಸಮುದಾಯದ ಗುರುಗಳಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ, ನನಗೆ ನ್ಯಾಯ ಸಿಕ್ಕಿಲ್ಲ. ಡ್ರಗ್ಸ್ ದಾಸಳಾಗಿರುವ ಮಗಳನ್ನು ಅದರಿಂದ ಹೊರತಂದು ಆಕೆಯನ್ನು ಸರಿಪಡಿಸಿ ತನಗೆ ಒಪ್ಪಿಸುವಂತೆ ಮನವಿ ಮಾಡಿದ್ದಾರೆ.
ರೋಗಿ ಸಾವು; ಆಂಬುಲೆನ್ಸ್ ಚಾಲಕ ಅರೆಸ್ಟ್
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ