ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿರುವ ದೇವಸ್ಥಾನಗಳನ್ನು ಸರ್ಕಾರದ ಕಟ್ಟುಪಾಡುಗಳಿಂದ ಮುಕ್ತಗೊಳಿಸುವುದಾಗಿ ಹೇಳಿರುವ ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ದೇವಾಲಯದ ವಿಚಾರ ಕೈಹಾಕಿದರೆ ಸುಟ್ಟು ಹೋಗ್ತಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, ಬಿಜೆಪಿ ನಾಯಕರು ತಮ್ಮ ಮನಸ್ಸಿಗೆ ಬಂದ ಕಾನೂನು ಜಾರಿ ಮಾಡುತ್ತಿದ್ದಾರೆ. ಜನರಿಗೆ ಅನುಕೂಲವಾಗುವ ಕಾನೂನು ಜಾರಿಗೆ ತರುತ್ತಿಲ್ಲ, ಮತಾಂತರ ನಿಷೇಧ ಕಾಯ್ದೆ, ಗೋಹತ್ಯೆ ನಿಷೇಧ, ಈಗ ದೇವಾಲಯಗಳ ಹಸ್ತಾಂತರ ಕಾಯ್ದೆ ಜಾರಿಗೆ ತರಲು ಹೊರಟಿದ್ದಾರೆ. ಈ ಮೂಲಕ ಭಾವನಾತ್ಮಕ ವಿಚಾರಗಳ ಮೇಲೆ ರಾಜಕೀಯ ಮಾಡಿ ಚುನಾವಣೆಯಲ್ಲಿ ಗೆಲ್ಲುವ ದುರುದ್ದೇಶ ಅವರದ್ದಾಗಿದೆ ಎಂದು ಕಿಡಿಕಾರಿದರು.
ಮುಜರಾಯಿ ಇಲಾಖೆಯಲ್ಲಿ ಐಎ ಎಸ್, ಕೆ ಎ ಎಸ್ ಅಧಿಕಾರಿಗಳು ಇದ್ದಾರೆ. ದೇವಾಲಯಗಳಲ್ಲಿ ಕೊಟ್ಯಂತರ ಹಣವಿದೆ. ಈ ಹಣವನ್ನು ತಮ್ಮ ಕಾರ್ಯಕರ್ತರಿಗೆ ನೀಡುವ ಉದ್ದೇಶದಿಂದ ಈಗ ದೇವಾಲಯಗಳ ಹಸ್ತಾಂತರ ಮಾಡಲು ಹೊರಟಿದ್ದಾರೆ. ನಾವು ಕೂಡ ಹಿಂದುಗಳೇ, ನಮಗೂ ಸಂಸ್ಕೃತಿ ಇದೆ. ಜನ ಕಲ್ಯಾಣಕ್ಕೆ ಅಗತ್ಯ ಕಾನೂನು ಜಾರಿ ಬಿಟ್ಟು ಇಂತಹ ಕ್ರಮಗಳನ್ನು ಕೈಗೊಳ್ಳುವುದು ಸರಿಯಲ್ಲ ಎಂದು ವಾಗ್ದಾಳಿ ನಡೆಸಿದರು.
ಹೊಸ ವರ್ಷಚರಣೆಗೆ ನಿರ್ಬಧ : ಹುಷಾರ್ ಎಂದ ಗೃಹ ಸಚಿವ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ