Kannada NewsKarnataka NewsLatest
*ಸಮೀಕ್ಷೆ ಮಾಡುತ್ತಿದ್ದಾಗಲೇ ಹೃದಯಾಘಾತ: ಸ್ಥಳೀಯರ ಸಮಯಪ್ರಜ್ಞೆಯಿಂದ ಉಳಿಯಿತು ಶಿಕ್ಷಕನ ಜೀವ*

ಪ್ರಗತಿವಾಹಿನಿ ಸುದ್ದಿ: ಜಾತಿ ಗಣತಿ ಸಮೀಕ್ಷೆಗೆ ತೆರಳಿದ್ದ ಶಿಕ್ಷಕರೊಬ್ಬರು ಹೃದಯಾಘಾತಕ್ಕೀದಾಗಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ.
ಹಳೆಕಡ್ಲೆಬಾಳು ಶಾಲೆಯ ಶಿಕ್ಷಕ ಪ್ರಕಾಶ್ ನಾಯಕ್ (44) ಸಮೀಕ್ಷೆಗೆ ತೆರಳಿದ್ದರು. ಈ ವೇಳೆ ಇದ್ದಕ್ಕಿದ್ದಂತೆ ಹೃದಯಾಘಾತ ಸಂಭವಿಸಿದೆ. ತಕ್ಷಣ ಸ್ಥಳೀಯರ ಸಹಾಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಬಳಿಕ ಸ್ಟಂಟ್ ಅಳವಡಿಸಿ ವೈದ್ಯರು ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಸ್ಥಳೀಯರ ಸಮಯಪ್ರಜ್ಞೆಯಿಂದ ಶಿಕ್ಷಕರೊಬ್ಬರ ಜೀವ ಉಳಿದಿದೆ. ಸದ್ಯ ಪ್ರಕಾಶ್ ನಾಯಕ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ



