ಪ್ರಗತಿವಾಹಿನಿ ಸುದ್ದಿ; ಮಂಡ್ಯ: ಮಂಡ್ಯ ಜಿಲ್ಲೆಯಲ್ಲಿ ಕೊರೊನಾ ಸೋಂಕು ಸ್ಫೋಟಗೊಂದಿದ್ದು, ಒಂ ಶಕ್ತಿ ದೇವಸ್ಥಾನದಿಂದ ವಾಪಸ್ ಆದವರಿಲ್ಲಿ ಸೋಂಕು ಪತ್ತೆಯಾಗಿದೆ.
ತಮಿಳುನಾಡಿನ ಒಂ ಶಕ್ತಿ ದೇವಸ್ಥಾನಕ್ಕೆ ತೆರಳಿ ವಾಪಸ್ ಆದ 119 ಯಾತ್ರಿಗಳಲ್ಲಿ ಕೊರೊನಾ ಸೋಂಕು ದೃಡಪಟ್ಟಿದ್ದು, ಮಂಡ್ಯ ಜಿಲ್ಲಾಡಳಿತಕ್ಕೆ ಸೋಂಕು ನಿಯಂತ್ರಣ ತಲೆನೋವಾಗಿ ಪರಿಣಮಿಸಿದೆ.
ನಿನ್ನೆ 89 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿತ್ತು. ಇಂದು ಮತ್ತೆ 30 ಯಾತ್ರಿಕರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು, ಎಲ್ಲರನ್ನು ಕ್ವಾರಂಟೈನ್ ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಯಾತ್ರೆ ಮುಗಿಸಿಕೊಂಡು ಬಂದ ಪೋಷಕರ ಮಕ್ಕಳಲ್ಲೂ ಸೋಂಕು ಕಾಣಿಸಿಕೊಮ್ಡಿದ್ದು, ಮೂರು ಮಕ್ಕಳಿಗೂ ಸೋಂಕು ಹರಡಿದೆ.
ಓಂ ಶಕ್ತಿ ಯಾತ್ರೆಯಿಂದ ವಾಪಸ್ ಬಂದವರನ್ನು ಜಿಲ್ಲಾಡಳಿತದಿಂದ ಕೋವಿಡ್ ಟೆಸ್ಟ್ ಗೆ ಒಳಪಡಿಸಲಾಗುತ್ತಿದ್ದು, ನೆಗೆಟಿವ್ ವರದಿ ಬಂದವರಿಗೂ 7 ದಿನ ಕಡ್ಡಾಯ ಕ್ವಾರಂಟೈನ್ ಮಾಡಲಾಗುತ್ತಿದೆ.
ಇನ್ನೊಂದೆಡೆ ಶಿವಮುಗ್ಗದಲ್ಲಿಯೂ ಓ ಶಕ್ತಿ ಯಾತ್ರಾರ್ಥಿಗಳಲ್ಲಿ ಸೋಂಕು ಕಾಣಿಸಿಕೊಂಡಿದ್ದು, 6 ಯಾತ್ರಾರ್ಥಿಗಳಲ್ಲಿ ಕೊರೊನ ಅಪಾಸಿಟಿವ್ ಬಂದಿದೆ. ಈ ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿಯೂ ಆತಂಕ ಮನೆ ಮಾಡಿದೆ.
ಒಂದೇ ದಿನದಲ್ಲಿ 1,17,100 ಜನರಲ್ಲಿ ಕೊರೊನಾ ಸೋಂಕು ದೃಢ; ಮಹಾರಾಷ್ಟ್ರದಲ್ಲಿಯೇ 36,265 ಹೊಸ ಪ್ರಕರಣ ದಾಖಲು
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ