ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿಯಲ್ಲಿ ದಿನದಿಂದ ದಿನಕ್ಕೆ ಚಳಿ ಹೆಚ್ಚಾಗುತ್ತಿದೆ. ಸಂಜೆಯೇ ಆರಂಭವಾಗುವ ಚಳಿ ಮಧ್ಯಾಹ್ನವಾದರೂ ಬಿಡುತ್ತಿಲ್ಲ.
ಬುಧವಾರ ಬೆಳಗಾವಿಯಲ್ಲಿ 8.5 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಇದು ಕಳೆದ 10 ವರ್ಷದಲ್ಲೇ ಅತ್ಯಂತ ಕಡಿಮೆ ಎನ್ನಲಾಗುತ್ತಿದೆ. ಕಳೆದ 2 -3 ದಿನಗಳಿಂದ 10 ರಿಂದ 12 ಡಿಗ್ರಿ ಸೆಲ್ಸಿಯಸ್ ಇದ್ದಿದ್ದು ಇಂದು ದಿಢೀರ್ ಇಳಿಕೆಯಾಗಿದೆ.
ಚಳಿಯಿಂದಾಗಿ ಬೆಳಗ್ಗೆ ವಾಕಿಂಗ್ ಹೋಗುವವರ ಸಂಖ್ಯೆ ಕಡಿಮೆಯಾಗಿದೆ. ವೃದ್ದರು, ಹೃಹಯ ಸಂಬಂಧಿ ಖಾಯಿಲೆ ಇರುವವರು ಚಳಿಗೆ ಜಾಸ್ತಿ ಮೈ ಒಡ್ಡಬಾರದು ಎಂದು ವೈದ್ಯರು ಸಲಹೆ ನೀಡುತ್ತಾರೆ.
ವಾತಾವರಣದಿಂದಾಗಿ ನೆಗಡಿ, ಜ್ವರ, ಕೆಮ್ಮಿನಿಂದ ಬಳಲುವವರ ಸಂಖ್ಯೆ ಅಧಿಕವಾಗಿದೆ. ಆಸ್ಪತ್ರೆಗೆ ಹೋದರೆ ಕೋವಿಡ್ ಟೆಸ್ಟ್ ಮಾಡಿಸಬೇಕೆನ್ನುತ್ತಾರೆ ಎಂದು ಮನೆಯಲ್ಲೇ ಚಿಕಿತ್ಸೆ ಪಡೆಯುವವರ ಸಂಖ್ಯೆ ಹೆಚ್ಚಾಗಿದೆ. ಆಸ್ಪತ್ರೆಗಳ ಮುಂದೂ ಸಾಲು ಕಾಣಿಸುತ್ತಿದೆ.
ಇನ್ನೂ ಕೆಲವು ದಿನ ಚಳಿ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆಯ ಮೂಲಗಳು ತಿಳಿಸಿವೆ.
ಕೊರೋನಾ ಅಟ್ಟಹಾಸದ ಮಧ್ಯೆಯೇ ಧಾರವಾಡ ವಿವಿ ವಿದ್ಯಾರ್ಥಿ- ವಿದ್ಯಾರ್ಥಿನಿಯರ ಲುಂಗಿ ಡಾನ್ಸ್ (ವಿಡೀಯೋ ನೋಡಿ)
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ