​ಕ್ರಿಕೆಟ್ ಪಂದ್ಯಾವಳಿ ವೀಕ್ಷಿಸಿ, ಬಹುಮಾನ ವಿತರಿಸಿದ ಚನ್ನರಾಜ ಹಟ್ಟಿಹೊಳಿ

​​ಪ್ರಗತಿವಾಹಿನಿ ಸುದ್ದಿ, ಬೆಳಗಾವಿ -​ ಸಾಂಬ್ರಾ ಗ್ರಾಮದಲ್ಲಿ ಹತ್ತು ದಿನಗಳ ಕಾಲ ನಡೆದ ಟೆನಿಸ್ ಬಾಲ್ ಕ್ರಿಕೆಟ್ ಸ್ಪರ್ಧೆಯ ಕೊನೆಯ ದಿನವಾದ ಮಂಗಳವಾರ ಅಂತಿಮ ಪಂದ್ಯವನ್ನು (Final Match) ವೀಕ್ಷಿಸಿದ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ವಿಜೇತ ತಂಡಗಳಿಗೆ ಬಹುಮಾನಗಳನ್ನು ವಿತರಿಸಿದರು.
ಸಿದ್ದಕಲಾ ಸೋಶಿಯಲ್ ಮತ್ತು ಸ್ಪೋರ್ಟ್ಸ್ ಕ್ಲಬ್ ಸಾಂಬ್ರಾ ಇವರ ಸಹಯೋಗ​ದಲ್ಲಿ ನಡೆದ ಪಂದಯಾವಳಿಯನ್ನು​ ಲಕ್ಷ್ಮೀ ತಾಯಿ ಫೌಂಡೇಷನ್‌ ಪ್ರಾಯೋ​ಜಿಸಿತ್ತು.​​ 32 ತಂಡಗಳು ಭಾಗವಹಿಸಿದ್ದ ಪಂದ್ಯಾವಳಿಯ ಅಂತಿಮ ಪಂದ್ಯ  ಪಂತ ಬಾಳೇಕುಂದ್ರಿಯ ಸಲ್ಮಾನ್ ಹಾಗೂ ಯಳ್ಳೂರಿನ ಚಾಂಗಳೇಶ್ವರಿ ತಂಡಗಳ ನಡುವೆ​ ನಡೆಯಿತು.
 ​ ಅಂತಿಮವಾಗಿ ಪಂತ ಬಾಳೇಕುಂದ್ರಿಯ ಸಲ್ಮಾನ್ ತಂಡ ಜಯಬೇರಿಯಾಗಿ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿದೆ. ಯಳ್ಳೂರಿನ ಚಾಂಗಳೇಶ್ವರಿ ತಂಡ ರನ್ನರ್ ಅಪ್ ಆ​ಯಿತು.​ ಎರಡೂ ತಂಡಗಳಿಗೆ ಚನ್ನರಾಜ ಹಟ್ಟಿಹೊಳಿ ಬಹುಮಾನ ವಿತರಿಸಿದರು.
ಈ ಕ್ರಿಕೆಟ್ ಸ್ಪರ್ಧೆಯಲ್ಲಿ ಒಟ್ಟು ​32 ತಂಡಗಳು ಭಾಗವಹಿಸಿದ್ದು, ​ಎಲ್ಲ ತಂಡಗಳನ್ನೂ ಚನ್ನರಾಜ ಅಭಿನಂದಿಸಿದರು.​​ ಮುಂಬರುವ ದಿನಗಳಲ್ಲಿ ಗ್ರಾಮೀಣ ಭಾಗದ ಕ್ರೀಡೆಗಳಿಗೆ ಹೆಚ್ಚಿನ ​ಆದ್ಯತೆ ನೀಡಿ ಪ್ರೋತ್ಸಾಹಿಸಲಾಗುವುದು ಎಂದು ಅವರು ಭರವಸೆ ನೀಡಿದರು. 
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ನಾಗೇಶ ದೇಸಾಯಿ, ಸದಾಶಿವ ಪಾಟೀಲ, ಮಲ್ಲಪ್ಪ ಕಾಂಬಳೆ, ಅಪ್ಸರ್ ಜಮಾದಾರ, ದಿಲೀಪ್ ಕೊಂಡಸ್ಕರ್, ನಿಲೇಶ ಚಂದಗಡ್ಕರ್,​ ಆಯಾ ಕ್ರಿಕೆಟ್ ತಂಡಗಳ ಸದಸ್ಯರು, ಕ್ರೀಡಾ ಪ್ರೇಮಿಗಳು,  ಕಾರ್ಯಕರ್ತರು ಮುಂತಾದವರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button