ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಆನ್ ಲೈನ್ ಶಿಕ್ಷಣದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ, ಆನ್ ಲೈನ್ ತರಗತಿಗಳಿಂದ ಶ್ರೀಮಂತರ ಮಕ್ಕಳು ಮಾತ್ರ ಕಲಿಯುತ್ತಾರೆ. ಈ ವ್ಯವಸ್ಥೆ ಸರಿಯಲ್ಲ ಎಂದಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಹೊರಟ್ಟಿ, ಆನ್ ಲೈನ್ ಶಿಕ್ಷಣ ಸರಿಯಲ್ಲ, ಇದು ನಗರ ಪ್ರದೇಶಗಳಿಗೆ ಮಾತ್ರ ಸೂಕ್ತವಾಗಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಿದೆ ಎಂದರು.
ನೆಟ್ ವರ್ಕ್, ವಿದ್ಯುತ್, ಮೊಬೈಲ್ ಇಲ್ಲದಿರುವುದು ಹೀಗೆ ಗ್ರಾಮೀಣ ಭಾಗದ ಮಕ್ಕಳು ಹಲವು ಸಮಸ್ಯೆಯಿಂದಾಗಿ ಆನ್ ಲೈನ್ ಕ್ಲಾಸ್ ನಲ್ಲಿ ಕಲಿಯಲು ಸಾಧ್ಯವಾಗುತ್ತಿಲ್ಲ. ಆನ್ ಲೈನ್ ತರಗತಿಗಳಿಂದ ಶ್ರೀಮಂತರ ಮಕ್ಕಳು ಕಲಿಯುತ್ತಾರೆ. ಬಡವರ ಮಕ್ಕಳು ಕಲಿಕೆಯಿಂದ ದೂರ ಉಳಿಯುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಕೊರೊನಾ ಮೂರನೇ ಅಲೆ ಬಹಳ ಗಂಭೀರವಾಗಿಲ್ಲ. ಈಗ ಶಾಲೆಗಳಿಗೆ ರಜೆ ನೀಡಿದರೆ ಮಕ್ಕಳ ಬದುಕು ಹಾಳಾಗುತ್ತದೆ. ಅಂತರ ಕಾಪಾಡಿಕೊಂಡು ಶಾಲೆ ನಡೆಸುವುದು ಸೂಕ್ತ. ಅನಿವಾರ್ಯವೆಂದರೆ 1-5ನೇ ತರಗತಿವರೆಗೆ ಬಂದ್ ಮಾಡಲಿ. ಆದರೆ 6ನೇ ತರಗತಿಯಿಂದಲಾದರೂ ಶಾಲೆ ಆರಂಭಿಸುವುದು ಒಳಿತು ಎಂದು ಸಲಹೆ ನೀಡಿದ್ದಾರೆ.
ವಿಷಾಹಾರ ಸೇವನೆ; ಆಸ್ಪತ್ರೆಗೆ ದಾಖಲಾದ 50 ಮಕ್ಕಳು
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ