ಪ್ರಗತಿವಾಹಿನಿ ಸುದ್ದಿ, ಮಧ್ಯಪ್ರದೇಶ – ಮನೆಯಲ್ಲೇ ಬಾರ್ ತೆರೆಯಲು ಅನುಮತಿ, ಸೂಪರ್ ಮಾರ್ಕೇಟ್‌ನಲ್ಲೂ ಮದ್ಯ ಮಾರಾಟ.
ಮಧ್ಯಪ್ರದೇಶ ಸರಕಾರ ಮನೆಯಲ್ಲೇ ಮಿನಿ ಬಾರ್ ತೆರೆಯಲು ಅನುಮತಿ ನೀಡಿದೆ. ಅಲ್ಲದೆ ಆಯ್ದ ಸೂಪರ್ ಮಾರ್ಕೇಟ್‌ಗಳಲ್ಲೂ ಮದ್ಯ ಮರಾಟಕ್ಕೆ ಅನುಮತಿ ನೀಡಲು ನಿರ್ಧರಿಸಿದೆ. ಮದ್ಯ ಪ್ರಿಯರಿಗೆ ಇದು ಸಂತಸದ ಸುದ್ದಿಯಾದರೂ ಸರಕಾರದ ಈ ನಿರ್ಧಾರ ಸಂಪ್ರದಾಯವಾದಿಗಳ ಕೆಂಗಣ್ಣಿಗೂ ಗುರಿಯಾಗಿದೆ.
ಮಂಗಳವಾರ ನಡೆದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದ ಕ್ಯಾಬಿನೆಟ್ ಸಭೆಯಲ್ಲಿ ಅಬಕಾರಿ ನೀತಿಯಲ್ಲಿ ಹಲವು ಬದಲಾವಣೆಗಳಿಗೆ ಅನುಮೋದನೆ ನೀಡಲಾಗಿದೆ. ೨೦೨೨-೨೩ರ ಪ್ರಸ್ತಾವಿತ ಹೊಸ ಅಬಕಾರಿ ನೀತಿಗೆ ಅನುಮೋದನೆ ನೀಡಿದ್ದು, ವಿದೇಶಿ ಮದ್ಯದ ಮೇಲಿನ ಸುಂಕವನ್ನು ಶೇ.೧೦ರಿಂದ ೧೩ ರಷ್ಟು ಕಡಿತಗೊಳಿಸಿದೆ. ಇನ್ನು ವಾರ್ಷಿಕ ೧ ಕೋಟಿ ಆದಾಯ ಇರುವ ವ್ಯಕ್ತಿಗಳು ಮನೆಯಲ್ಲೇ ಮಿನಿ ಬಾರ್ ತೆರೆಯಲು ಹೊಸ ನಿಯಮ ಅನುಮತಿ ನೀಡಿದೆ.
ಮನೆಯಲ್ಲಿ ಬಾರ್ ತೆರೆಯುವವರು, ಒಂದು ಬಾಕ್ಸ್ ಬಿಯರ್, ೬ ಬಾಟಲಿ ವೈನ್ ಮತ್ತು ೪ ಬಾಟಲಿ ಸ್ಪಿರಿಟ್ ಇಟ್ಟುಕೊಳ್ಳಬಹುದು. ಮಿನಿ ಬಾರ್ ಹೊಂದಲು ವರ್ಷಕ್ಕೆ ೫೦ ಸಾವಿರ ರೂ. ಶುಲ್ಕ ಪಾವತಿಸಿ ಲೈಸನ್ಸ್ ಪಡೆಯಬೇಕು.
ವಿಮಾನ ನಿಲ್ದಾಣಗಳಲ್ಲೂ ಮದ್ಯ ಮಳಿಗೆ
ಕ್ಯಾಬಿನೇಟ್ ಮೀಟಿಂಗ್‌ನಲ್ಲಿ ಅಬಕಾರಿ ನೀತಿಯಲ್ಲಿ ಅಮೂಲಾಗ್ರ ಬದಲಾವಣೆ ತರಲು ನಿರ್ಣಯಿಸಲಾಗಿದ್ದು ಎಲ್ಲ ವಿಮಾನ ನಿಲ್ದಾಣಗಳುಮತ್ತು ನಾಲ್ಕು ದೊಡ್ಡ ನಗರಗಳ ಆಯ್ದ ಸೂಪರ್ ಮಾರ್ಕೆಟ್‌ಗಳಲ್ಲಿ ಮದ್ಯ ಮಳಿಗೆ ತೆರೆಯಲು ಅನುಮತಿ ನೀಡಲಾಗಿದೆ.
ನಿವೃತ್ತಿ ಘೋಷಿಸಿದ ಸಾನಿಯಾ ಮಿರ್ಜಾ; ಕಾರಣ ಬಿಚ್ಚಿಟ್ಟ ಮೂಗುತಿ ಸುಂದರಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ