ಪ್ರಗತಿವಾಹಿನಿ ಸುದ್ದಿ; ತುಮಕೂರು: ದಾಸೋಹ ದಿನಾಚರಣೆಗೆ ಚಾಲನೆ ನೀಡಲು ಸಿಎಂ ಬಸವರಾಜ್ ಬೊಮ್ಮಾಯಿ ತುಮಕೂರಿನ ಸಿದ್ದಗಂಗಾ ಮಠಕ್ಕೆ ಆಗಮಿಸುತಿದ್ದಂತೆ ಜನ ಗುಂಪು ಸೇರಿರುವುದನ್ನು ಕಂಡು ಸಿಎಂ, ಪೊಲೀಸ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.
ತ್ರಿವಿದ ದಾಸೋಹಿ ಡಾ.ಶಿವಕುಮಾರ ಸ್ವಾಮೀಜಿ ಅವರ ಮೂರನೇ ಸ್ಮರಣೆ ಹಿನ್ನೆಲೆಯಲ್ಲಿ ತುಮಕೂರಿನ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ ಸಿಎಂ ಬಸವರಾಜ್ ಬೊಮ್ಮಾಯಿ ದಾಸೋಹ ದಿನಾಚರಣೆಗೆ ಚಾಲನೆ ನೀಡಿದರು. ಸಿಎಂ ಸಿದ್ದಗಂಗಾ ಮಠದ ಬಳಿ ಕಾರಿನಿಂದ ಇಳಿಯುತ್ತಿದ್ದಂತೆ ಜನರು ಜಮಾವಣೆಗೊಂಡಿದ್ದಾರೆ. ಕೋವಿಡ್ ಸಂದರ್ಭ, ನಿಯಮ ಉಲ್ಲಂಘನೆ ಮಾಡಿ ಜನ ಆಗಮಿಸಿರುವುದನ್ನು ಕಂಡು ಗರಂ ಆದ ಸಿಎಂ ಬೊಮ್ಮಾಯಿ, ಐಜಿಪಿ ಚಂದ್ರ ಶೇಖರ್ ಹಾಗೂ ಡಿವೈಎಸ್ ಪಿ ಶ್ರೀನಿವಾಸ್ ಅವರನ್ನು ತರಾಟೆಗೆ ತೆಗೆದುಕೊಂಡರು.
ಜನ ಗುಂಪು ಸೇರುವಂತೆ ಯಾಕೆ ಮಾಡಿದ್ದೀರಿ, ಕೋವಿಡ್ ಕೇಸ್ ಹೆಚ್ಚಾಗುತ್ತಿದೆ, ಜ್ಞಾನವಿಲ್ಲವೇನು? ಎಲ್ಲರಿಗೂ ಅಂತರ ಕಾಯ್ದುಕೊಂಡು ನಿಲ್ಲಲು ಹೇಳಿ ಎಂದಿದ್ದಾರೆ. ಅಲ್ಲದೇ ಐಜಿ ಚಂದ್ರಶೇಖರ್ ಅವರಿಗೆ ಸೀನಿಯರ್ ಆಫೀಸರ್ ಆಗಿದ್ದೀಯಾ ಗೊತ್ತಾಗೋದಿಲ್ವಾ? ಎಂದು ಗದರಿದ್ದಾರೆ.
ವಾರಾಂತ್ಯದ ಕರ್ಫ್ಯೂ: ಮಹತ್ವದ ನಿರ್ಧಾರ: ಸಿಎಂ ಬೊಮ್ಮಾಯಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ