ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಸಚಿವ ಮುರುಗೇಶ್ ನಿರಾಣಿ ಸಮಾಜ ಒಡೆಯುವ ಕೆಲಸ ಮಾಡುತ್ತಿದ್ದಾರೆ. ಸ್ವಾರ್ಥಕ್ಕಾಗಿ ಪಂಚಮಸಾಲಿ ಪೀಠ ಬಳಸಿಕೊಳ್ಳುತ್ತಿದ್ದಾರೆ ಎಂದು ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಯಮೃತ್ಯುಂಜಯ ಸ್ವಾಮೀಜಿ, ಪಂಚಮಸಾಲಿ ಮೂರನೇ ಪೀಠಕ್ಕೆ ಬೆಂಬಲ ನೀಡುವುದಾಗಿ ಸಚಿವ ನಿರಾಣಿ ಹೇಳಿರುವುದು ಬೇಸರ ತಂದಿದೆ. ಸಚಿವರು ತಮ್ಮ ಸ್ವಾರ್ಥ ಸಾಧನೆಗಾಗಿ ಸಮಾಜ ಒಡೆಯುವ ಕೆಲಸಕ್ಕೆ ಕೈ ಹಾಕಿದ್ದಾರೆ. ಸಿಎಂ ಸ್ಥಾನದ ಆಸೆಗೆ ಪೀಠವನ್ನು ದುರ್ಬಳಕೆ ಮಾಡಿಕೊಂಡು ಸಮಾಜವನ್ನು ಒಡೆಯುವುದು ಸರಿಯಲ್ಲ ಎಂದು ಕೆಂಡಕಾರಿದರು.
ಸಮಾಜವನ್ನು ಒಗ್ಗೂಡಿಸಲು ಪಂಚಮಸಾಲಿ ಪಿಠ ಕಟ್ಟಿದ್ದು. ನಮಗೆ ಸಮುದಾಯದ ಮೀಸಲಾತಿ ಅಷ್ಟೇ ಗೊತ್ತಿದೆ. ಆದರೆ ಈಗ ಮೂರನೇ ಪೀಠಕ್ಕೆ ಸಚಿವರು ಬೆಂಬಲ ನೀಡಲು ಹೊರಟಿರುವುದು ನೋವುಂಟು ಮಾಡಿದೆ. ಮಂತ್ರಿ ಸ್ಥಾನಕ್ಕೆ, ಸಿಎಂ ಸ್ಥಾನಕ್ಕಾಗಿ ಸಮುದಾಯದ ಹೆಸರು ಬಳಕೆ ಮಾಡುವುದು, ವೈಯಕ್ತಿಕ ಕೆಲಸಕ್ಕಾಗಿ ಪೀಠವನ್ನು ಬಳಸಿಕೊಳ್ಳುವುದನ್ನು ಸಹಿಸಲಾಗದು. ನಿರಾಣಿಯವರು ಬೇಕಾದರೆ ಗ್ರಾಮಕ್ಕೊಂದು, ಹಳ್ಳಿಗೊಂದು, ಮನೆಗೊಂದು ಪೀಠ ಮಾಡಿಕೊಳ್ಳಲಿ. ಆದರೆ ಪಂಚಮಸಾಲಿ ಪೀಠದ ಹೆಸರಲ್ಲಿ ಗೊಂದಲ ಸೃಷ್ಟಿಸಿ ಒಡಕು ಮೂಡಿಸುವ ಕೆಲಸ ಮಾಡಿದರೆ ಸುಮ್ಮನಿರಲು ಸಾಧ್ಯವಿಲ್ಲ ಎಂದು ಕಿಡಿಕಾರಿದ್ದಾರೆ.
ದರ ಏರಿಕೆ ಆತಂಕದಲ್ಲಿದ್ದ ಜನತೆಗೆ ರಿಲೀಫ್
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ