Latest

ದರ ಏರಿಕೆ ಆತಂಕದಲ್ಲಿದ್ದ ಜನತೆಗೆ ರಿಲೀಫ್

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ವಿದ್ಯುತ್, ಹಾಲು, ನೀರು ಸೇರಿದಂತೆ ಮತ್ತೆ ದರ ಏರಿಕೆ ಬಿಸಿ ತಟ್ಟುವ ಆತಂಕದಲ್ಲಿದ್ದ ರಾಜ್ಯದ ಜನತೆಗೆ ಕೊಂಚ ನಿಟ್ಟುಸಿರು ಬಿಡುವಂತ ಸುದ್ದಿಯನ್ನು ರಾಜ್ಯ ಸರ್ಕಾರ ನೀಡಿದೆ.

ದರ ಏರಿಕೆ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬಸವರಾಜ್ ಬೊಮ್ಮಾಯಿ, ನೀರು, ಹಾಲು ಹಾಗೂ ವಿದ್ಯುತ್ ದರ ಏರಿಕೆಯ ಕುರಿತು ಸಲ್ಲಿಕೆಯಾಗಿರುವ ಪ್ರಸ್ತಾವನೆಗಳ ಬಗ್ಗೆ ಯಾವುದೇ ತರದ ಅವಸರದ ತೀರ್ಮಾನಗಳನ್ನು ತೆಗೆದುಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದರು.

Home add -Advt

ದರ ಏರಿಕೆ ಬಗ್ಗೆ ಆಡಳಿತದಲ್ಲಿ ಪ್ರಸ್ತಾವನೆ ಸಹಜ. ಎಲ್ಲಾ ಆಯಾಮಗಳಲ್ಲಿ ದರ ಏರಿಕೆ ಬಗ್ಗೆ ಪರಿಶೀಲಿಸಲಾಗುವುದು. ಅವಸರದ ನಿರ್ಧಾರ ತೆಗೆದುಕೊಳ್ಳುವುದಿಲ್ಲ. ಸಧ್ಯಕ್ಕೆ ದರ ಏರಿಕೆ ವಿಚಾರವಿಲ್ಲ ಎಂದು ತಿಳಿಸಿದರು.
ಲೋಕಾಯುಕ್ತ ಕಚೇರಿಗೂ ವಕ್ಕರಿಸಿದ ಕೊರೊನಾ; 52 ಸಿಬ್ಬಂದಿಗೆ ಸೋಂಕು

Related Articles

Back to top button