ಪ್ರಗತಿವಾಹಿನಿ ಸುದ್ದಿ; ಧರ್ಮಸ್ಥಳ: ಕರ್ನಾಟಕ ಯಕ್ಷಗಾನ ಅಕಾಡೆಮಿಯು ಹಿರಿಯರ, ಸಂಘ ಸಂಸ್ಥೆಗಳ ಹೆಸರಿನಲ್ಲಿ ದತ್ತಿನಿಧಿ ಸ್ಥಾಪಿಸಿ ಅದರ ಬಡ್ಡಿ ಹಣದಿಂದ ಪ್ರಶಸ್ತಿ ನೀಡಲು ಯೋಜಿಸಿದ್ದು, ಇದಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಸ್ಪಂದಿಸಿದ್ದಾರೆ.
ಭಾನುವಾರ ಯಕ್ಷಗಾನ ಅಕಾಡೆಮಿಯ ನೂತನ ಅಧ್ಯಕ್ಷ ಡಾ. ಜಿ.ಎಲ್.ಹೆಗಡೆ ಅವರನ್ನು ಶ್ರೀಕ್ಷೇತ್ರದಲ್ಲಿ ಅಭಿನಂದಿಸಿ ಮಾತನಾಡಿದ ಅವರು, ಅಕಾಡಮಿಯು ಅಕಾಡೆಮಿಕ್ ಕಾರ್ಯದ ಜೊತೆಗೆ ಸಾಧ್ಯ ಇರುವಷ್ಟೂ ಸಮಾಜಮುಖಿ ಮಾಡಬೇಕು. ಪ್ರಸ್ತಾಪಿಸಿದ ಯಕ್ಷಗಾನ ರಾಜ್ಯಮಟ್ಟದ ಸಮ್ಮೇಳನ ಹಾಗೂ ವಿಶ್ವಕೋಶ ಆಗಲೇಬೇಕಾದ ಕಾರ್ಯವಾಗಿದೆ. ಇದಕ್ಕೆ ಸರಕಾರಗಳೂ ಸ್ಪಂದಿಸಬೇಕು. ತಾವೂ ಸರಕಾರಕ್ಕೆ ಈ ಬಗ್ಗೆ ಒತ್ತಡ ಹಾಕುವದಾಗಿ ಹೇಳಿದರು.
ಧರ್ಮಸ್ಥಳದ ಹೆಗ್ಗಡೆ ಅವರ ಹಿರಿಯರ ಹೆಸರಿನಲ್ಲಿ ನಿಧಿ ಸ್ಥಾಪಿಸಿ ಅದರ ಬಡ್ಡಿ ಹಣದಿಂದ ಪ್ರಶಸ್ತಿ ನೀಡುವ ಇಂಗಿತವನ್ನು ಅಧ್ಯಕ್ಷ ಹೆಗಡೆ ವ್ಯಕ್ತಪಡಿಸಿದಾಗ ತಕ್ಷಣ ಸಕಾರಾತ್ಮಕವಾಗಿ ಸ್ಪಂದಿಸಿ ಅಕಾಡೆಮಿಯ ಕಾರ್ಯದ ಜೊತೆ ಸದಾ ಇರುವುದಾಗಿ ತಿಳಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ