ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಅಕ್ಕನ ಮದುವೆಯಾಗಿದ್ದ ಭಾವ ನಾದಿನಿ ಮೇಲೂ ಕಣ್ಣಿಟ್ಟು, ಆಕೆಯನ್ನು ವರಿಸಲು ಕಿಡ್ನ್ಯಾಪ್ ಮಾಡಿ ಸಿಕ್ಕಿಬಿದ್ದ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ.
ಪತ್ನಿಯ ತಂಗಿಯನ್ನೂ ಮದುವೆಯಾಗಲು ಬಯಸಿದ್ದ ಪಾಪಿ ಭಾವ, ನಾದಿಯನ್ನು ಕಿಡ್ನ್ಯಾಪ್ ಮಾಡಿದ್ದಾನೆ. ಆರೋಪಿ ದೇವರಾಜ್ ಸೇರಿದಂತೆ ಮೂವರನ್ನು ಕೋಡಿಗೆ ಹಳ್ಲಿ ಪೊಲೀಸರು ಬಂಧಿಸಿದ್ದಾರೆ.
ಕೋಡಿಗೆಹಳ್ಳಿ ರಾಯಲ್ ಮಾರ್ಟ್ ನಲ್ಲಿ ಕೆಲಸ ಮಾಡುತ್ತಿದ್ದ ಯುವತಿ, ರಾತ್ರಿ 10 ಗಂಟೆಗೆ ಕೆಲಸ ಮುಗಿಸಿ ಮನೆಗೆ ವಾಪಸ್ ಆಗುತ್ತಿದ್ದಾಗ ಕಾರ್ ನಲ್ಲಿ ಬಂದ ಆರೋಪಿಗಳು ಯುವತಿ ಅಪಹರಿಸಿದ್ದಾರೆ. ಬಳಿಕ ಹಾಸನದ ಸಕಲೇಶಪುರಕ್ಕೆ ಕರೆದೊಯ್ದಿದ್ದಾರೆ. ಯುವತಿ ಕಿಡ್ನ್ಯಾಪ್ ದೂರು ದಾಖಲಾಗಿತ್ತು. ಕಾರ್ಯಾಚರಣೆ ನಡೆಸಿದ ಪೊಲೀಸರು ಇದೀಗ ಸಕಲೇಶಪುರದಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ.
ನಾಲ್ಕು ವರ್ಷಗಳ ಹಿಂದೆ ದೇವರಾಜ್ ವಿವಾಹವಾಗಿದ್ದ. ಬರಬರುತ್ತಾ ಪತ್ನಿಯ ತಂಗಿಯ ಮೇಲೇಯೇ ಕಣ್ಣಿಟ್ಟಿದ್ದ. ತನ್ನನ್ನು ಮದುವೆಯಾಗುವಂತೆಯೂ ಕೇಳಿದ್ದ. ಆದರೆ ಯುವತಿ ಇದಕ್ಕೆ ನಿರಾಕರಿಸಿದ್ದಳು. ಮದುವೆಗೆ ಯುವತಿ ಒಪ್ಪದ ಕಾರಣಕ್ಕೆ ಆಕೆಯನ್ನು ಕಿಡ್ನ್ಯಾಪ್ ಮಾಡಿದ್ದ.
ಕಿರುತೆರೆ ನಟಿಯ ಹಾಟ್ ಫೋಟೋಶೂಟ್ ಗೆ ಫಿದಾ ಆದ ಅಭಿಮಾನಿಗಳು
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ