Kannada NewsKarnataka NewsLatest

ಅದಾಗದಿದ್ದರೆ ಮುಂದಿನ ಚುನಾವಣೆಗೆ ನಾನು ಸ್ಪರ್ಧಿಸುವುದಿಲ್ಲ – ರಮೇಶ ಜಾರಕಿಹೊಳಿ ಹೇಳಿಕೆ ; ಸ್ಥಳದಲ್ಲೇ ರಾಜಿನಾಮೆ – ಸತೀಶ್ ಜಾರಕಿಹೊಳಿಗೆ ಚಾಲೇಂಜ್

ಪ್ರಗತಿವಾಹಿನಿ ಸುದ್ದಿ, ಅಥಣಿ – ಬೆಳಗಾವಿ ಜಿಲ್ಲೆಯ ನಾಯಕರುಗಳ ಮಧ್ಯೆ ಉಂಟಾಗಿರುವ ಗೊಂದಲ ನಿವಾರಣೆ ಮಡುವ  ಜವಾಬ್ದಾರಿ ಬಾಲಚಂದ್ರ ಜಾರಕಿಹೊಳಿ ತಗೆದುಕೊಂಡಿದ್ದು ಅವರ ತಿರ್ಮಾನಕ್ಕೆ ನಾವು ಬದ್ದರಾಗಿರುತ್ತೆವೆ ಎಂದು ಮಾಜಿ ಸಚಿವ ರಮೇಶ ಜಾರಕಿಹೊಳಿ ಹೇಳಿದರು.
ಅವರು ತಾಲ್ಲೂಕಿನ ರಡ್ಡೆರಟ್ಟಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚೆಗೆ ಬೆಳಗಾವಿಯಲ್ಲಿ ನಡೆದ ಸಭೆಯ ಕುರಿತು ಉಮೇಶ ಕತ್ತಿಯವರೆ ಸ್ಪಷ್ಟವಾಗಿ ಹೇಳಿದ್ದಾರೆ. ಮುಂಬರುವ ಜಿಲ್ಲಾ ಪಂಚಾಯತ ಮತ್ತು ತಾಲ್ಲೂಕು ಪಂಚಾಯತ ಚುನಾವಣೆ ಕುರಿತು ಚರ್ಚೆ ಮಾಡಿದ್ದೇವೆ ಎಂದು. ಸುಮ್ಮನೇ ಜಾರಕಿಹೋಳಿ ಅವರನ್ನು ಬಿಟ್ಟು ಸಭೆ ನಡೆಸಿದರೆಂದು, ನಮ್ಮ ವಿರುದ್ಧ ಅಲ್ಲಿ ಚರ್ಚೆ ಆಯಿತೆಂದು ಹೇಳುವದಕ್ಕೆ ಬರಲ್ಲಾ. ಇವೆಲ್ಲವೂ ಮಾಧ್ಯಮದ ಸೃಷ್ಟಿ ಅಷ್ಟೇ, ಯಾವುದೇ ವಿಷಯಗಳ ಕುರಿತು ಮುಖ್ಯ ಮಂತ್ರಿಗಳು‌ ನನ್ನನ್ನು ಕೇಳಿದರೆ ಅವರ ಜೊತೆಗೆ ಮಾತನಾಡುವೆ ಎಂದರು.
ನಾನು ಮತ್ತು ಲಕ್ಷ್ಮಣ ಸವದಿ ಇಬ್ಬರೂ ಒಂದೇ ಪಕ್ಷದಲ್ಲಿ ಇರುವದರಿಂದ ಲಖನ ಜಾರಕಿಹೊಳಿ ಆರೋಪದ ಕುರಿತು ನಾನು ಮಾತನಾಡಲು ಬರುವದಿಲ್ಲ. ಆ ಕುರಿತು ಲಖನ್ ಜಾರಕಿಹೋಳಿ ಸ್ವತಂತ್ರವಾಗಿರುವದರಿಂದ ಅವರನ್ನೆ ವಿಚಾರಿಸಿ ಎಂದರು.
ಗೋಕಾಕ ರಸ್ತೆಗಳು ಹದಗೆಟ್ಟಿವೆ, ಕ್ಷೇತ್ರದ ಅಭಿವೃದ್ಧಿ ಶೂನ್ಯ ಎಂದು ಆರೋಪ‌ ಮಾಡಿರುವ ಸತೀಶ ಜಾರಕಿಹೋಳಿ ಅವರು ಗೋಕಾಕನಲ್ಲಿ ಹದಗೆಟ್ಟಿರುವ ರಸ್ತೆ ತೋರಿಸಿದರೆ ಇಂದೇ‌ ರಾಜೀನಾಮೆ ನೀಡುವೆ ಎಂದ ಅವರು, ಅಥಣಿ ತಾಲೂಕಿ ಸಮಗ್ರ ನೀರಾವರಿಯನ್ನು ಚುನಾವಣೆ ಸಮಯದಲ್ಲಿ ನೀಡಿದ್ದ ಭರವಸೆ ಕಾರ್ಯ ಮಾಡದೆ ಇದ್ದಲ್ಲಿ ಮುಂದಿನ ಚುನಾವಣೆಗೆ ನಾನು ಸ್ಪರ್ಧಿಸುವದಿಲ್ಲ ಎಂದು ಹೇಳಿದರು.
 ಈ ವೇಳೆ ಶಾಸಕ ಮಹೇಶ ಕುಮಟಳ್ಳಿ, ಸಿದರಾಯ ಎಲಡಗಿ, ಅಮೂಲ ನಾಯಕ, ರಮೇಶ ಪಾಟೀಲ್, ಸಿದಗೌಡ‌ ಪಾಟೀಲ ಸೇರಿದಂತೆ ಅನೇಕರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button