ಪ್ರಗತಿವಾಹಿನಿ ಸುದ್ದಿ; ನವದೆಹಲಿ: 2022-23ನೇ ಸಾನಿನ ಕೇಂದ್ರ ಬಜೆಟ್ ಮಂಡನೆಯಾಗಿದ್ದು, ಯಾವೆಲ್ಲ ವಸ್ತುಗಳ ದರ ಇಳಿಕೆಯಾಗಿದೆ? ಯಾವುದರ ದರ ಏರಿಕೆಯಾಗಿದೆ? ಇಲ್ಲಿದೆ ಮಾಹಿತಿ.
ಮುಂದಿನ 25 ವರ್ಷಗಳ ಅಭಿವೃದ್ಧಿ ಮಾರ್ಗದರ್ಶಿಯಾಗಿರುವ ಬಜೆಟ್ ಇದಾಗಿದೆ ಎಂದು ಬಜೆಟ್ ಭಾಷಣದಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ. ಕೇಂದ್ರ ಬಜೆಟ್ ಬಗ್ಗೆ ಸಾಕಷ್ಟು ಪರ-ವಿರೋಧ ವ್ಯಕ್ತವಾಗುತ್ತಿದೆ. ಆದರೆ ಜನಸಾಮಾನ್ಯರ ಗಮನ ಬಜೆಟ್ ನಲ್ಲಿ ಯಾವೆಲ್ಲ ವಸ್ತುಗಳ ಬೆಲೆ ಇಳಿಕೆಯಾಗಿದೆ? ಯಾವುದು ಏರಿಕೆಯಾಗಿದೆ? ಎಂಬುದರತ್ತ.
ಯಾವುದರ ದರ ಇಳಿಕೆ?
* ತೆರಿಗೆ ಪದ್ಧತಿಯಲ್ಲಿ ಯಾವುದೇ ಬದಲಾವಣೆ ಇಲ್ಲ
* ಡೀಸೆಲ್ ದರ ಇಳಿಕೆ
* ವಜ್ರಾಭರಣ, ಹರಳುಗಳ ದರ ಇಳಿಕೆ
* ಬಟ್ಟೆ, ಚಪ್ಪಲಿ, ಚರ್ಮದ ಉತ್ಪನ್ನಗಳ ದರ ಇಳಿಕೆ
* ಮೊಬೈಲ್, ಚಾರ್ಜರ್ ಗಳ ದರ ಇಳಿಕೆ
* ಎಲೆಕ್ಟ್ರಾನಿಕ್ ವಸ್ತುಗಳ ದರ ಕಡಿತ
* ವೈದ್ಯಕೀಯ ಉಪಕರಣ, ಔಷಧಗಳ ದರ ಕಡಿತ
* ರಾಜಾಯನಿಕ, ಕಾಸ್ಮೆಟಿಕ್ ವಸ್ತುಗಳ ದರ ಕಡಿತ
* ಕೃಷಿ ಉಪಕರಣಗಳ ದರ ಇಳಿಕೆ
* ಪೀಠೋಪಕರಣ, ಪ್ಯಾಕೇಜಿಂಗ್ ಬಾಕ್ಸ್ ದರ ಇಳಿಕೆ
* ಆರ್ಟಿಫಿಶಲ್ ಆಭರಣಗಳ ಮೇಲಿನ ಸುಂಕ ಕಡಿತ
* ತಾಳೆ ಎಣ್ಣೆ, ಕರಕುಶಲ ವಸ್ತುಗಳ ದರ ಇಳಿಕೆ
ಯಾವ ವಸ್ತುಗಳ ದರ ಏರಿಕೆ?
* ಚಿನ್ನಾಭರಣ
* ಪೆಟ್ರೋಲ್ ದರ ಏರಿಕೆ
* ಸಿಗರೇಟ್, ಡಿಜಿಟಲ್ ಸಿಗಾರ್ ದರ ಹೆಚ್ಚಳ
* ಛತ್ರಿ ಹಾಗೂ ಛತ್ರಿಗಳ ಮೇಲಿನ ಸುಂಕ ಶೇ.20ರಷ್ಟು ಹೆಚ್ಚಳ
* ಎಥೆನಾಲ್ ಮಿಶ್ರಿತ ತೈಲ ಆಮದು ಸುಂಕ ಹೆಚ್ಚಳ
ಬಡವರ ಏಳಿಗೆ ಬಜೆಟ್ ಮೂಲ ಉದ್ದೇಶ; ಅಭಿವೃದ್ಧಿಪರ ಜನಸ್ನೇಹಿ ಬಜೆಟ್ ಗೆ ಅಭಿನಂದನೆ ಎಂದ ಪ್ರಧಾನಿ ಮೋದಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ