
ಪ್ರಗತಿವಾಹಿನಿ ಸುದ್ದಿ; ವಾಷಿಂಗ್ಟನ್: ಅಮೇರಿಕಾದ ಭದ್ರತಾ ಪಡೆಗಳು ವಿಶ್ವದ ಬಹುತೇಕ ಭಾಗಗಳಲ್ಲಿ ಯುದ್ಧದಲ್ಲಿ ಪಾಲ್ಗೊಂಡು ಖ್ಯಾತಿ, ವಿಖ್ಯಾತಿ ಎರಡನ್ನೂ ಪಡೆದಿವೆ. ಇರಾಕ್, ವಿಯೇಟ್ನಾಂ, ಸಿರಿಯಾ, ಸೇರಿದಂತೆ ಯುಎಸ್‌ನ ಸೈನಿಕರು ಕಾಲಿಟ್ಟು ಹೋರಾಡದ ದೇಶವೇ ಇಲ್ಲ. ಜಗತ್ತಿನ ಅತ್ಯಂತ ಶಕ್ತಿಶಾಲಿ ಸೈನ್ಯ ಎಂಬ ಖ್ಯಾತಿ ಹೊಂದಿರುವ ಯುಎಸ್ ಮಿಲಿಟರಿ ಈಗ ವಿಭಿನ್ನ ಕಾರಣಕ್ಕೆ ಸುದ್ದಿಯಾಗಿದೆ.
ಹೌದು, ಇಷ್ಟೊಂದು ಬಲಿಷ್ಠವಾದ ಸೈನ್ಯ ಪ್ರಸ್ತುತ ಯಕ್ಕಶ್ಚಿತ್ ಕೋಳಿಯೊಂದನ್ನು ಬಂಧನದಲ್ಲಿಟ್ಟು ಸುದ್ದಿಯಾಗಿದೆ ! ಯುಎಸ್ ಡಿಫೆನ್ಸ್ ಮುಖ್ಯ ಕಚೇರಿಯಾಗಿರುವ ಪೆಂಟಗನ್ ಆವಾರದಲ್ಲಿ ಓಡಾಡುತ್ತಿದ್ದ ಕೋಳಿಯೊಂದನ್ನು ಬಂಧಿಸಿಡಲಾಗಿದೆ ಎಂದು ವರ್ಜಿನಿಯಾದ ಪ್ರಾಣಿ ದಯಾ ಸಂಘವು ಆರೋಪಿಸಿದೆ.
ಭದ್ರತಾ ನಿಯಮಗಳ ಕಾರಣಗಳಿಗಾಗಿ ಕೋಳಿಯನ್ನು ಬಂಧಿಸಿದ ಸ್ಥಳವನ್ನು ತೋರಿಸಲು ಸಾಧ್ಯವಿಲ್ಲ, ಆದರೆ ಪೆಂಟಗನ್ ಆವಾರದಲ್ಲಿ ಅಡ್ಡಾಡುತ್ತಿದ್ದ ಕೋಳಿಯನ್ನು ಅಲ್ಲಿನ ಸಿಬ್ಬಂದಿಯೊಬ್ಬರು ಬಂಧಿಸಿಟ್ಟಿರುವುದು ನಿಜ ಎಂದು ಸಂಘದ ಸದಸ್ಯೆ ಚೆಲ್ಸಿಯಾ ಜೋನ್ಸ್ ಎಂಬುವವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಕೋಳಿ ಎಲ್ಲಿಂದ ಬಂದಿತ್ತು, ಮತ್ತು ಪೆಂಟಗನ್ ಆವಾರದಲ್ಲಿ ಹೇಗೆ ನಸುಳಿತು ಗೊತ್ತಿಲ್ಲ, ಕಂದು ಬಣ್ಣದ ಕಂದು ಮಿಶ್ರಿತ ಕೆಂಪು ಬಣ್ಣದ ಕೋಳಿ ಇದಾಗಿದೆ ಎಂದು ಅವರು ಹೇಳಿದ್ದಾರೆ.
ದೇಶದಲ್ಲೇ ಅತಿ ದುಬಾರಿ ಕಾರ್ ಖರೀದಿಸಿದ ಮುಖೇಶ್ ಅಂಬಾನಿ; ದೇಶದಲ್ಲಿ ಕಾರ್ ಒಂದಕ್ಕೆ ಭರಿಸಲಾದ ಅತೀ ಹೆಚ್ಚಿನ ಮೊತ್ತದ ರಸ್ತೆ ತೆರಿಗೆ