Latest
ಮತ ಚಲಾಯಿಸಿದ ಮರುಕ್ಷಣವೇ ಹೆರಿಗೆ
ಪ್ರಗತಿವಾಹಿನಿ ಸುದ್ದಿ, ಮಂಡ್ಯ:
ಮತದಾನದ ಹಕ್ಕು ಚಲಾಯಿಸಿದ ಕೆಲವೇ ಗಂಟೆಗಳಲ್ಲಿ ತಾಪಂ ಸದಸ್ಯೆಯೊಬ್ಬರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
ಪಾಂಡವಪುರ ತಾಲ್ಲೂಕಿನ ಚಿಕ್ಕಮರಳಿ ಗ್ರಾಮದ ನಿವಾಸಿ ತಾಪಂ ಸದಸ್ಯೆ ಮಂಗಳಾ ನವೀನ್ ಕುಮಾರ್ ಮತದಾನ ಮಾಡಿ ಹೆಣ್ಣುಮಗುವಿಗೆ ಜನ್ಮನೀಡಿದವರು.
ಬೆಳಗ್ಗೆ 7.30ರ ಹೊತ್ತಿಗೆ ಮಂಗಳಾ ಪತಿಯೊಡನೆ ಮತಗಟ್ಟೆಗೆ ತೆರಳಿ ತಮ್ಮ ಹಕ್ಕು ಚಲಾಯಿಸಿದರು. ಅಲ್ಲಿಂದ ಮನೆಗೆ ಹೋದ ಬೆನ್ನಲ್ಲೇ ಹೆರಿಗೆ ನೋವು ಕಾಣಿಸಿಕೊಂಡಿದ್ದು, ತಕ್ಷಣ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ಆಸ್ಪತ್ರೆಯಲ್ಲಿ 11.15ರ ವೇಳೆಗೆ ಮಂಗಳಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ತಾಯಿ ಮಗು ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.




