ಪ್ರಗತಿವಾಹಿನಿ ಸುದ್ದಿ ಗ್ವಾಟೆಮಾಲಾ – ರಷ್ಯಾದಿಂದ ತಯಾರಾಗಿದ್ದ ೧ ಕೋಟಿ ಸ್ಪುಟ್ನಿಕ್ ಕೋವಿಡ್ ಲಸಿಕೆ ಯಾರೂ ಪಡೆಯಲು ಮುಂದಾಗಿಲ್ಲ. ಇದರಿಂದ ಲಸಿಕೆಯ ಅವಧಿ ಮುಗಿದು ಲಸಿಕೆ ವ್ಯರ್ಥವಾಗಿದೆ ಎಂದು ಗ್ವಾಟೆಮಾಲಾದ ಆರೋಗ್ಯ ಸಚಿವಾಲಯ ತಿಳಿಸಿದೆ.
ಈ ಕುರಿತು ಗ್ವಾಟೇಮಾಲಾದ ಆರೋಗ್ಯ ಸಚಿವ ಫ್ರಾನ್ಸಿಸ್ಕೊ ಕೊಮಾ, ದೇಶದ ಜನ ಕೋವಿಡ್ ಲಸಿಕೆಯನ್ನು ತಿರಸ್ಕರಿಸುತ್ತಿದ್ದಾರೆ. ಈವರೆಗೆ ದೇಶದ ಒಟ್ಟು ಜನಸಂಖ್ಯೆಯಲ್ಲಿ ಕೇವಲ ಶೇ.೪೩ರಷ್ಟು ಜನರಿಗೆ ಮಾತ್ರ ಕೋವಿಡ್ ಲಸಿಕೆ ನೀಡಲು ಸಾಧ್ಯವಾಗಿದೆ ಎಂದು ಮಾಧ್ಯಮಗಳಿಗೆ ವಿವರಿಸಿದ್ದಾರೆ.
ಜನ ರಷ್ಯಾ ಉತ್ಪಾದಿತ ಸ್ಪುಟ್ನಿಕ್ ಕೋವಿಡ್ ಲಸಿಕೆ ಮಾತ್ರ ತಿರಸ್ಕರಿಸುತ್ತಿದ್ದಾರೆಯೇ ? ಉಕ್ರೇನ್ ಮೇಲೆ ರಷ್ಯಾ ಯುದ್ಧ ಸಾರಿರುವ ಕಾರಣಕ್ಕೆ ದೇಶದ ಜನರಿಗೆ ರಷ್ಯಾ ಮೇಲೆ ತಿರಸ್ಕಾರದ ಭಾವನೆ ಮೂಡಿದೆಯೇ ? ಅಥವಾ ಎಲ್ಲ ಬಗೆಯ ಕೋವಿಡ್ ಲಸಿಕೆಯನ್ನು ಒಟ್ಟಾರೆ ತಿರಸ್ಕರಿಸುತ್ತಿದ್ದಾರೆಯೇ ಎಂಬ ಬಗ್ಗೆ ಮಾಹಿತಿ ಬಂದಿಲ್ಲ. ಒಟ್ಟನಲ್ಲಿ ರಷ್ಯಾ ನಿರ್ಮಿತ ೧ ಕೋಟಿ ಸ್ಪುಟ್ನಿಕ್ ಕೋವಿಡ್ ಲಸಿಕೆ ಅವಧಿ ಮುಗಿದು ವ್ಯರ್ಥವಾಗಿದೆ ಎಂದು ಅವರು ತಿಳಿಸಿದ್ದಾರೆ.
ರಷ್ಯಾ – ಉಕ್ರೇನ್ ಯುದ್ಧದಲ್ಲಿ x ಮತ್ತು z ಚಿಹ್ನೆಗಳ ರಹಸ್ಯವೇನು ?
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ