ಪ್ರಗತಿವಾಹಿನಿ ಸುದ್ದಿ; ಹುಬ್ಬಳ್ಳಿ: ಹಾವೇರಿ ಜಿಲ್ಲೆಯ ಸವಣೂರು-ಕರಜಗಿ ಮಾರ್ಗದಲ್ಲಿ ರೈಲ್ವೆ ಸಂಬಂಧಿತ ಕಾಮಗಾರಿ ನಡೆಯಲಿರುವ ಕಾರಣ ಹಲವು ರೈಲುಗಳ ಸಂಚಾರ ರದ್ದುಪಡಿಸಲಾಗಿದೆ.
ಮೈಸೂರು-ಬೆಳಗಾವಿ ನಡುವೆ ನಿತ್ಯ ಸಂಚರಿಸುವ ವಿಶ್ವಮಾನವ ಎಕ್ಸ್‌ಪ್ರೆಸ್ ರೈಲಿನ ಸಂಚಾರ 2ರಿಂದ 7ರ ತನಕ ಮೈಸೂರಿನಿಂದ, ಮಾ. 3ರಿಂದ 8ರ ತನಕ ಬೆಳಗಾವಿಯಿಂದ ರದ್ದು ಪಡಿಸಲಾಗಿದೆ.
ಕೊಚುವೆಲಿ-ಹುಬ್ಬಳ್ಳಿ ನಡುವೆ ವಾರಕ್ಕೆ ಒಂದು ದಿನ ಸಂಚರಿಸುವ ಸೂಪರ್‌ಫಾಸ್ಟ್ ಎಕ್ಸ್‌ಫ್ರೆಸ್ ರೈಲು ಮಾ. 3ರಂದು ಕೊಚುವೆಲಿಯಿಂದ ಹೊರಡುತ್ತಿದ್ದರೂ ಹಾವೇರಿ-ಹುಬ್ಬಳ್ಳಿ ನಡುವೆ ರದ್ದಾಗಲಿದೆ.
4ರಿಂದ 8ರ ತನಕ ಕೆಎಸ್‌ಆರ್ ಬೆಂಗಳೂರು-ಹುಬ್ಬಳ್ಳಿ ಜನಶತಾಬ್ದಿ ನಿತ್ಯ ಎಕ್ಸ್‌ಪ್ರೆಸ್ ರೈಲು ಎರಡೂ ಮಾರ್ಗದಿಂದ ಹಾವೇರಿ-ಹುಬ್ಬಳ್ಳಿ ನಡುವೆ ರದ್ದಾಗಿದೆ.
ಹುಬ್ಬಳ್ಳಿ-ಚಿತ್ರದುರ್ಗ ನಿತ್ಯ ಪ್ಯಾಸೆಂಜರ್ ಎಕ್ಸ್‌ಪ್ರೆಸ್ ರೈಲಿನ ಸಂಚಾರ ಮಾ. 4ರಿಂದ 8ರ ತನಕ ಎರಡೂ ಮಾರ್ಗದಿಂದ ರದ್ದು ಮಾಡಲಾಗಿದೆ.
ಕೆಎಸ್‌ಆರ್ ಬೆಂಗಳೂರು-ಹುಬ್ಬಳ್ಳಿ ನಡುವೆ ನಿತ್ಯ ಸಂಚರಿಸುವ ಎಕ್ಸ್‌ಪ್ರೆಸ್ ರೈಲನ್ನು ಮಾ. 2ರಿಂದ 7ರ ತನಕ ಬೆಂಗಳೂರಿನಿಂದ, 3ರಿಂದ 8ರ ತನಕ ಹುಬ್ಬಳ್ಳಿಯಿಂದ ರದ್ದಾಗಿದೆ.
ಅರಸೀಕೆರೆ-ಹುಬ್ಬಳ್ಳಿ ನಿತ್ಯ ಪ್ಯಾಸೆಂಜರ್ ವಿಶೇಷ ರೈಲಿನ ಸಂಚಾರ ಎರಡೂ ಮಾರ್ಗದಿಂದ ರಾಣೆಬೆನ್ನೂರು-ಹುಬ್ಬಳ್ಳಿ ನಡುವೆ ರದ್ದುಪಡಿಸಲಾಗಿದೆ.
ವಿದ್ಯಾರ್ಥಿಗಳ ಸಂಕಷ್ಟ ಕೇಂದ್ರ ಸರ್ಕಾರಕ್ಕೆ ಅರ್ಥವಾಗುತ್ತಿಲ್ಲವೇ?
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ