ಪ್ರಗತಿವಾಹಿನಿ ಸುದ್ದಿ, ಕೀವ್ – ಭಾರತ -ಪಾಕ್ ನಡುವೆ ವೈಮನಸ್ಸು ಎಷ್ಟು ಕಾವೇರಿರುತ್ತದೆ ಎಂದರೆ ಒಣ ಹುಲ್ಲು ಹಾಕಿದರೂ ಬೆಂಕಿ ಹೊತ್ತಿಕೊಳ್ಳುವಷ್ಟು ಉದ್ವಿಘ್ನವಾಗಿರುತ್ತದೆ. ಅಲ್ಲದೇ ಪಾಕಿಸ್ತಾನವು ಕಾಶ್ಮೀರ ಪ್ರತ್ಯೇಕತಾವಾದಿಗಳಿಗೆ ಕುಮ್ಮಕ್ಕು ನೀಡಿ ಕಾಶ್ಮೀರದಲ್ಲಿ ಭಾರತದ ತಿರಂಗಾವನ್ನು ಸುಟ್ಟು ಹಾಕುವ ಘಟನೆಗಳು ಆಗಾಗ ವರದಿಯಾಗುತ್ತವೆ. ಭಾರತದ ರಾಷ್ಟ್ರ ಧ್ವಜ ಕಂಡರೆ ಪಾಕಿಸ್ತಾನಿಯರಿಗೆ ಎಲ್ಲಿಲ್ಲದ ದ್ವೇಷ.
ಆದರೆ ಈಗ ಇದೇ ಭಾರತದ ತ್ರಿವರ್ಣ ಧ್ವಜ ಉಕ್ರೇನ್ನಲ್ಲಿ ಪಾಕಿಸ್ತಾನೀಯರ ಪ್ರಾಣ ಉಳಿಸುತ್ತಿದೆ. ಉಕ್ರೇನ್ನಿಂದ ಪಾರಾಗಿ ರೋಮೇನಿಯಾದ ಬುಚೆರಸ್ಟ್ ಗೆ ಬಂದಿರುವ ವಿದ್ಯಾರ್ಥಿಗಳು ಇದನ್ನು ಖಚಿತಪಡಿಸಿದ್ದಾರೆ.
ಭಾರತದ ರಾಷ್ಟ್ರ ಧ್ವಜ ಹಿಡಿದುಕೊಂಡು ಉಕ್ರೇನ್ನಿಂದ ರೋಮೇನಿಯದೆಡೆಗೆ ತೆರಳಬಹುದು ಎಂದು ನಮಗೆ ಭಾರತೀಯ ಧೂತಾವಾಸದಿಂದಲೂ ಸೂಚನೆ ನೀಡಲಾಗಿತ್ತು. ಅಲ್ಲದೇ ರಷ್ಯನ್ ಮಿಲಿಟಿರಿ ಅಧಿಕಾರಿಗಳ ಜೊತೆ ಮಾತಾಡಿದಾಗ ಅವರೂ ಸಹ ಇದಕ್ಕೆ ಸಹಮತಿ ವ್ಯಕ್ತಪಡಿಸಿದರು. ಹಾಗಾಗಿ ನಾವು ಕೆಲ ಭಾರತೀಯ ವಿದ್ಯಾರ್ಥಿಗಳು ಭಾರತದ ರಾಷ್ಟ್ರ ಧ್ವಜ ಹಿಡಿದು ಹೊರಟೆವು.
ನಮ್ಮ ಜೊತೆ ಇದ್ದ ಕೆಲ ಪಾಕ್ ಮತ್ತು ಟರ್ಕಿ ವಿದ್ಯಾರ್ಥಿಗಳು ಸಹ ತಮ್ಮ ಪ್ರಾಣ ಉಳಿಸಿಕೊಂಡು ಪಾರಾಗಲು ಭಾರತದ ರಾಷ್ಟ್ರ ಧ್ವಜ ಹಿಡಿದುಕೊಂಡು ರೋಮೇನಿಯಾ ಗಡಿಗೆ ಬಂದರು ಎಂದು ವಿದ್ಯಾರ್ಥಿಗಳು ರೋಮೆನಿಯಾದಲ್ಲಿ ಸುದ್ದಿ ಸಂಸ್ಥೆಯೊಂದಕ್ಕೆ ಸಂದರ್ಶನದಲ್ಲಿ ಮಾಹಿತಿ ನೀಡಿದರು.
ರಾಷ್ಟ್ರ ಧ್ವಜವಾದ ಕರ್ಟನ್
ಸುದ್ದಿ ಸಂಸ್ಥೆಯೊಂದಿಗೆ ಮಾನಾಡಿದ ಭಾರತೀಯ ವಿದ್ಯಾರ್ಥಿಯೊಬ್ಬ ರಾಷ್ಟ್ರ ಧ್ವಜವನ್ನು ಸಿದ್ಧಪಡಿಸಿದ ಬಗ್ಗೆ ಮಾಹಿತಿ ನೀಡಿದ್ದಾನೆ. ಯುದ್ಧಪೀಡಿತ ಉಕ್ರೇನ್ನಲ್ಲಿ ನಮಗೆ ತಕ್ಷಣಕ್ಕೆ ಭಾರತದ ರಾಷ್ಟ್ರ ಧ್ವಜ ಸಿಗುವುದು ದುರ್ಲಭವಾಗಿತ್ತು. ಹಾಗಾಗಿ ಬಿಳಿ ಬಣ್ಣದ ಕರ್ಟನ್ ಒಂದಕ್ಕೆ ಸಮೀಪದ ಅಂಗಡಿಯಿಂದ ಕೇಸರಿ ಮತ್ತು ಬಿಳಿ ಬಣ್ಣಗಳನ್ನು ತಂದು ಸ್ಪ್ರೇ ಮಾಡಿ ರಾಷ್ಟ್ರ ಧ್ವಜ ಸಿದ್ಧಪಡಿಸಿದೆವು. ಭಾರತದ ರಾಷ್ಟ್ರ ಧ್ವಜ ಹಿಡಿದ ನಮ್ಮ ಜೊತೆ ಪಾಕಿಸ್ತಾನ್ ಮತ್ತು ಟರ್ಕಿ ವಿದ್ಯಾರ್ಥಿಗಳು ಸಹ ಭಾರತದ ಹೆಜ್ಜೆ ಹಾಕಿದರು. ರಷ್ಯನ್ ಸೈನಿಕರು ನಮ್ಮನ್ನು ಎಲ್ಲಿಯೂ ತಡೆಯಲಿಲ್ಲ. ಗೌರವದಿಂದ ನಡೆದುಕೊಂಡರು. ಆ ಕ್ಷಣದಲ್ಲಿ ಉಕ್ರೇನ್ನಲ್ಲಿ ನಡೆದಿರುವ ಯುದ್ಧದ ಭೀತಿ ಕಳೆದು ಭಾರತೀಯನಾಗಿ ಜನಿಸಿದ್ದಕ್ಕೆ ಹೆಮ್ಮೆ ಎನಿಸಿತು ಎಂದು ವಿದ್ಯಾರ್ಥಿಗಳು ಹೇಳಿಕೊಂಡಿದ್ದಾರೆ.
ಯುದ್ಧದ ವೇಳೆ ನವೀನ್ ಮೃತದೇಹ ತರುವುದು ಕಷ್ಟ ಎಂದ ಸಿಎಂ ಬೊಮ್ಮಾಯಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ