ಪ್ರಗತಿವಾಹಿನಿ ಸುದ್ದಿ; ಕೀವ್: ಉಕ್ರೇನ್ ಮೇಲಿನ ರಷ್ಯಾ ಸಮರ 12ನೇ ದಿನಕ್ಕೆ ಕಾಲಿಟ್ಟಿದ್ದು, ಉಕ್ರೇನ್ ಸಂಪೂರ್ಣ ರಣರಂಗವಾಗಿದೆ, ಎಲ್ಲಿ ನೋಡಿದರಲ್ಲಿ ಗುಂಡಿನ ದಾಳಿ, ಬಾಂಬ್ ಸ್ಫೋಟ, ಕ್ಷಿಪಣಿ ದಾಳಿ, ಹೊತ್ತಿ ಉರಿಯುತ್ತಿರುವ ಕಟ್ಟಡಗಳು, ರಸ್ತೆ ರಸೆಗಳಲ್ಲಿ ಮೃತದೇಹ, ರಕ್ತಪಾತ…ದೃಶ್ಯಗಳು ರಣಭೀಕರವಾಗಿವೆ. ಉಕ್ರೇನ್ ನ ಸುಂದರ ನಗರಗಳು ಸ್ಮಶಾನ ಸದೃಶವಾಗಿವೆ. ದೇಶಾದ್ಯಂತ ಹಲವೆಡೆ ವಿದ್ಯುತ್, ನೀರು, ಗ್ಯಾಸ್, ಇಂಟರ್ ನೆಟ್ ಸೇವೆ ಸಂಪೂರ್ಣ ಸ್ಥಗಿತಗೊಂಡಿದೆ.
ಉಕ್ರೇನ್ ಹಾಗೂ ರಷ್ಯಾ ಯುದ್ಧದ ಬಗ್ಗೆ ಹೇಳಿಕೆ ನೀಡಿರುವ ಪೋಪ್ ಫ್ರಾನ್ಸಿಸ್, ಉಕ್ರೇನ್ ನಲ್ಲಿ ರಕ್ತ, ಕಣ್ಣೀರ ನದಿ ಹರಿಯುತ್ತಿದೆ. ಇದು ಸೇನಾ ಕಾರ್ಯಾಚರಣೆ ಅಲ್ಲ, ರಣಭೀಕರ ಯುದ್ಧ ಎಂದು ಹೇಳಿದ್ದಾರೆ.
ದಿನದಿಂದ ದಿನಕ್ಕೆ ಸಾವು-ನೋವು, ಸಂತ್ರಸ್ತರ ಸಂಖ್ಯೆ ಹೆಚ್ಚುತ್ತಿದೆ. ಯುದ್ಧ ಎನ್ನುವುದು ಹುಚ್ಚುತನ. ಸಮರ ನಿಲ್ಲಿಸಿ ಎಂದು ಉಕ್ರೇನ್ ಹಾಗೂ ರಷ್ಯಾ ಎರಡೂ ದೇಶಗಳಿಗೆ ಪೋಪ್ ಮನವಿ ಮಾಡಿದ್ದಾರೆ.
ಚಿತ್ರಾ ರಾಮಕೃಷ್ಣ ಬಂಧನ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ