ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಸವದತ್ತಿ ತಾಲೂಕಿನ ಮುರಗೋಡ ಡಿ.ಸಿ.ಸಿ ಬ್ಯಾಂಕ ಕಳ್ಳತನ ಮಾಡಿದ ಆರೋಪಿಗಳನ್ನು ಒಂದು ವಾರದಲ್ಲಿ ಹಣ ಮತ್ತು ಆಭರಣ ಸಹಿತ ಬಂಧಿಸುವಲ್ಲಿ ಬೆಳಗಾವಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಬ್ಯಾಂಕ್ ನ ಕ್ಲರ್ಕ್ ಬಸವರಾಜ ಸಿದ್ಧಿಂಗಪ್ಪ ಹುಣಶಿಕಟ್ಟಿ (ವಯಾ: 30 ವರ್ಷ, ಸಾ|| ತೋರಣಗಟ್ಟಿ ತಾ|| ರಾಮದುರ್ಗ) ಇಡೀ ಪ್ರಕರಣದ ಮುಖ್ಯ ವ್ಯಕ್ತಿಯಾಗಿದ್ದು, ಇವನೊಂದಿಗೆ ಕೃತ್ಯದಲ್ಲಿ ಭಾಗಿಯಾಗಿದ್ದ ಇನ್ನಿಬ್ಬರನ್ನೂ ಹೆಡೆಮುರಿ ಕಟ್ಟಲಾಗಿದೆ.
ಸಂತೋಷ ಕಾಳಪ್ಪ ಕಂಬಾರ (ವಯಾ: 31 ವರ್ಷ ಸಾ|| ಯರಗಟ್ಟಿ) ಹಾಗೂ ಗಿರೀಶ @ ಯಮನಪ್ಪ ತಂದೆ ಲಕ್ಷ್ಮಣ ಬೆಳವಲ (26 ವರ್ಷ ಸಾ|| ಜೀವಾಪೂರ ತಾ|| ಸವದತ್ತಿ) ಬಂಧಿತರು.
ಕಳುವಾದ 4,20,98,400/-ರೂ ಹಾಗೂ 1,63,72,220/-ರೂ ಕಿಮ್ಮತ್ತಿನ 3 ಕೆ ಜಿ 149.26 ಗ್ರಾಮ್ ಬಂಗಾರದ ಆಭರಣಗಳನ್ನು ಜಪ್ತ ಮಾಡಲಾಗಿದೆ.
ಕೃತ್ಯಕ್ಕೆ ಉಪಯೋಗಿಸಿದ ಕಾರು ಮತ್ತು ಮೋಟಾರ ಸೈಕಲ್ ನ್ನು ಜಪ್ತ ಮಾಡಲಾಗಿದೆ.
ದಿನಾಂಕ: 06/03/2022 ರಂದು 2 ಘಂಟೆಗೆ ಪ್ರಮೋದ ಕೃಷ್ಣಪ್ಪ ಯಲಿಗಾರ ಮ್ಯಾನೇಜರ ಡಿ.ಸಿ.ಸಿ ಬ್ಯಾಂಕ್ ಮುರಗೋಡ ಇವರು ಮುರಗೋಡ ಪೊಲೀಸ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದರು.
ದಿ: 05/03/2022 ರಂದು ಸಾಯಂಕಾಲ 7.15 ಘಂಟೆಯಿಂದ ದಿ: 06/03/2022 ರ ಬೆಳಗಿನ 0600 ಘಂಟೆಯ ನಡುವಿನ ಅವಧಿಯಲ್ಲಿ ನಕಲಿ ಕೀಲಿಗಳನ್ನು ಬಳಿಸಿ ಡಿ.ಸಿ.ಸಿ ಬ್ಯಾಂಕ್ ಮುರಗೋಡದ ಸ್ಟಾಂಗ್ ರೂಮ್ ಮತ್ತು ಲಾಕರ್ ಗಳನ್ನು ತೆಗೆದು 4,37,59,000/-ರೂ. ಹಣವನ್ನು ಮತ್ತು 1,63,72,220/-ರೂ ಕಿಮ್ಮತ್ತಿನ 3 ಕೆ. ಜಿ 148.504 ಗ್ರಾಮ್ ಬಂಗಾರದ ಆಭರಣಗಳನ್ನು ಕಳುವು ಮಾಡಿಕೊಂಡು ಹೋಗಿರುತ್ತಾರೆ ಎಂದು ದೂರು ನೀಡಿದ್ದರು.
ಮುರಗೋಡ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ರಾಮನಗೌಡ ಅ ಹಟ್ಟಿ (ಡಿ.ಎಸ್.ಪಿ ರಾಮದುರ್ಗ) ನೇತೃತ್ವದ ತಂಡ ತನಿಖೆಯನ್ನು ಕೈಕೊಂಡಿತ್ತು.
ಎಸ್ಪಿ ಲಕ್ಷ್ಮಣ ನಿಂಬರಗಿ ಮಾರ್ಗದರ್ಶನದಲ್ಲಿ ಮಹಾನಿಂಗ ನಂದಗಾಂವಿ, ಹೆಚ್ಚುವರಿ ಎಸ್.ಪಿ ಹಾಗೂ ರಾಮನಗೌಡ ಹಟ್ಟಿ ಡಿ.ಎಸ್.ಪಿ ರಾಮದುರ್ಗ ಉಪ ವಿಭಾಗ ರವರ ನೇತೃತ್ವದಲ್ಲಿ ಮೌನೇಶ್ವರ ಮಾಲಿ ಪಾಟೀಲ, ಪೊಲೀಸ್ ಇನ್ಸಪೆಕ್ಟರ ಮುರಗೋಡ ಪೊಲೀಸ್ ಠಾಣೆ, ಯು.ಎಚ್ ಸಾತೇನಹಳ್ಳಿ ಪೊಲೀಸ್ ಇನ್ಸಪೆಕ್ಟರ ಬೈಲಹೊಂಗಲ ಪೊಲೀಸ್ ಠಾಣೆ, ವಿರೇಶ ದೊಡಮನಿ, ಪೊಲೀಸ್ ಇನ್ಸಪೆಕ್ಟರ ಸಿ.ಇ.ಎನ್ ಪೊಲೀಸ್ ಠಾಣೆ ಬೆಳಗಾವಿ ಜಿಲ್ಲೆ, ಪ್ರವೀಣ ಗಂಗೋಳ ಪಿ.ಎಸ್.ಐ ಮುರಗೋಡ ಪೊಲೀಸ್ ಠಾಣೆ, ಶಿವಾನಂದ ಗುಡಗನಟ್ಟಿ, ಪಿ.ಎಸ್.ಐ ಸವದತ್ತಿ ಪೊಲೀಸ್ ಠಾಣೆ, ಶಿವಾನಂದ ಕಾರಜೋಳ, ಪಿ.ಎಸ್.ಐ ರಾಮದುರ್ಗ ಪೊಲೀಸ್ ಠಾಣೆ, ಶ್ರೀ ಬಸಗೌಡ ಎಸ್ ನೇರ್ಲಿ ಪ್ರೋ.ಪಿ.ಎಸ್.ಐ ಸವದತ್ತಿ ಪೊಲೀಸ ಠಾಣೆ, ಕು.ಚಾಂದಬೀ ಗಂಗಾವತಿ ಪ್ರೋ.ಪಿ.ಎಸ್.ಐ ಮುರಗೋಡ ಪೊಲೀಸ ಠಾಣೆ, ಮತ್ತು ಟೆಕ್ನಿಕಲ್ ಸೆಲ್ ಸಿಬ್ಬಂಧಿ ಜನರು ಹಾಗೂ ನುರಿತ ಅಪರಾಧ ವಿಭಾಗದ ಸಿಬ್ಬಂಧಿ, ಮುರಗೋಡ ಪೊಲೀಸ ಠಾಣೆಯ ಸಿಬ್ಬಂದಿ ಸೇರಿದಂತೆ 4 ತಂಡಗಳನ್ನು ರಚಿಸಿದ್ದು ಈ ತಂಡಗಳು ಪ್ರಕರಣವನ್ನು ಪತ್ತೆ ಮಾಡಿ ಪ್ರಕರಣದಲ್ಲಿ ಭಾಗಿಯಾದವರನ್ನು ಬಂಧಿಸಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ