Latest

ಪ್ರಧಾನಿ ಮೋದಿಗೆ ಕುರ್ತಾ ಆಯ್ಕೆ ಮಾಡಿ ಕಳುಹಿಸುವವರು ಯಾರು?

ಪ್ರಗತಿವಾಹಿನಿ ಸುದ್ದಿ, ನವದೆಹಲಿ:
ಪ್ರಧಾನಿ ನರೇಂದ್ರ ಮೋದಿ ಧರಿಸುವ ಕುರ್ತಾಗಳನ್ನು ಆಯ್ಕೆ ಮಾಡಿ ಕಳುಹಿಸಿಕೊಡುವವರು ಯಾರು ಗೊತ್ತೆ?
ಕೇಳಿದರೆ ಶಾಕ್ ಆಗ್ತೀರಿ. ಸ್ವತಃ ಮೋದಿ ಈ ಸಂಗತಿಯನ್ನು ಬಹಿರಂಗಪಡಿಸಿದ್ದಾರೆ. ಅವರು ಬೇರಾರು ಅಲ್ಲ,
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ.
 ಪ್ರತಿವರ್ಷ ತಮಗೆ ಬೇಕಾದ ಕುರ್ತಾಗಳನ್ನು ಮಮತಾ ದೀದಿ ಸ್ವತಃ ಆಯ್ಕೆ ಮಾಡಿ, ಕಳುಹಿಸಿಕೊಡುವುದಾಗಿ  ಮೋದಿ ತಿಳಿಸಿದ್ದಾರೆ.
ರಾಜಕೀಯದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಬದ್ಧ ವೈರಿ ಎಂದೇ ಗುರುತಿಸಿಕೊಂಡಿರುವ ಮಮತಾ ಬ್ಯಾನರ್ಜಿ ಕುರ್ತಾಗಳನ್ನು ಮಾತ್ರವಲ್ಲ, ಪಶ್ಚಿಮ ಬಂಗಾಳದ ಅತ್ಯಂತ ಜನಪ್ರಿಯವಾದ ಸಿಹಿ ಖಾದ್ಯಗಳನ್ನು ಕೂಡ ತಮಗೆ ಕಳುಹಿಸಿಕೊಡುವುದಾಗಿ ಹೇಳಿದ್ದಾರೆ.
ಬಾಲಿವುಡ್​ ನಟ ಅಕ್ಷಯ್​ ಕುಮಾರ್​ ಅವರಿಗೆ ನೀಡಿದ ಸಂದರ್ಶನದಲ್ಲಿ ಮೋದಿ ಇಂತಹ ಅನೇಕ ಸ್ವಾರಸ್ಯಕರ ಅಂಶಗಳನ್ನು ಬಹಿರಂಗಪಡಿಸಿದ್ದಾರೆ.
ನಾನು ಹಲವು ವಿಪಕ್ಷ ನಾಯಕರೊಂದಿಗೆ ಆತ್ಮೀಯವಾಗಿದ್ದೇನೆ. ಮಮತಾ ಬ್ಯಾನರ್ಜಿ ಅವರು ಪ್ರತಿ ವರ್ಷ ನನಗೆ ಎರಡು ಕುರ್ತಾ ಕಳಿಸಿಕೊಡುತ್ತಾರೆ. ರಾಜಕೀಯ ಬೇರೆ, ವೈಕ್ತಿಕ ಬದುಕು ಬೇರೆ. 
ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರೂ ನನಗೆ ಬಂಗಾಳಿ ಸ್ವೀಟ್ ಕಳಿಸಿಕೊಡುತ್ತಾರೆ ಎಂದು ಮೋದಿ ಹೇಳಿದರು.
ತಾವು ಕೇವಲ 24 ಗಂಟೆಗಳ ಪೈಕಿ ಕೇವಲ 3 ಗಂಟೆ ನಿದ್ರಿಸುವ ಕುರಿತು ಪ್ರಧಾನಿ ಮೋದಿ ಸ್ವಾರಸ್ಯಕರ ಮಾಹಿತಿ ಹಂಚಿಕೊಂಡಿದ್ದಾರೆ. ‘ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್​ ಒಬಾಮ ಅವರನ್ನು ಭೇಟಿ ಮಾಡಿದಾಗಲೆಲ್ಲ ಅವರು ಇದೇ ಪ್ರಶ್ನೆ ಕೇಳುತ್ತಾರೆ. ನಾನು ಕೇವಲ 3 ಗಂಟೆ ನಿದ್ದೆ ಮಾಡಿಯೂ, ದೈನಂದಿನ ಕೆಲಸದ ಒತ್ತಡವನ್ನು ಹೇಗೆ ನಿಭಾಯಿಸುತ್ತೇನೆ ಎಂದು ಕೇಳುವುದಾಗಿ ಹೇಳಿದ್ದಾರೆ.
ನಿಮ್ಮ ತಾಯಿಗೆ ನೀವು ಹಣ ಕೊಡುತ್ತೀರಾ ಎಂಬ ಅಕ್ಷಯ್​ ಕುಮಾರ್​ ಪ್ರಶ್ನೆಗೆ ಮೋದಿ, ‘ನನ್ನ ತಾಯಿಗೆ ನಾನು ಹಣ ಕಳುಹಿಸುವುದಿಲ್ಲ, ಅವರನ್ನು ನಾನು ಭೇಟಿ ಮಾಡಿದಾಗಲೆಲ್ಲಾ ಅವರೇ ನನಗೆ ಹಣ ನೀಡಿ ಆಶೀರ್ವದಿಸುತ್ತಾರೆ. ಜತೆಗೆ ಅವರು ದೆಹಲಿಯಲ್ಲಿ ನನ್ನೊಂದಿಗೆ ಇರಲು ಒಪ್ಪುವುದಿಲ್ಲ. ನಾನು ಅಲ್ಲಿ ಬಂದು ಏನು ಮಾಡಲಿ, ನಾನು ನಿನ್ನೊಂದಿಗೆ ಏನು ಮಾತನಾಡಲಿ ಎಂದು ಕೇಳುತ್ತಾರೆ. ಜತೆಗೆ ತಡರಾತ್ರಿ ನಾನು ಮನೆಗೆ ವಾಪಸ್​ ಬರುವುದನ್ನು ನೋಡಿ ತಾಯಿ ಬೇಸರಗೊಳ್ಳುತ್ತಾರೆ ಎಂದು ತಿಳಿಸಿದ್ದಾರೆ.
(ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಪರಿಚಿತರಿಗೆ ಮತ್ತು ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ)

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button