Latest

ಸಿಲಿಂಡರ್ ಸ್ಫೋಟದಲ್ಲಿ 15 ಜನರ ಸಾವು: ಪರಿಹಾರ ವಿತರಿಸಿದ CM

*ಗಾಯಾಳುಗಳ ಚಿಕಿತ್ಸೆಯ ವೆಚ್ಚವನ್ನು ಸರ್ಕಾರವೇ ಭರಿಸಲಿದೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ*

ಪ್ರಗತಿವಾಹಿನಿ ಸುದ್ದಿ, ಯಾದಗಿರಿ –
ಜಿಲ್ಲೆಯ ದೋರನಹಳ್ಳಿ ಗ್ರಾಮದಲ್ಲಿ ಫೆಬ್ರವರಿ 25ರಂದು ಸಿಲಿಂಡರ್ ಸ್ಪೋಟವಾಗಿ 15 ಜನರು ತೀರಿಹೋಗಿದ್ದು ದೊಡ್ಡ ದುರ್ಘಟನೆ. ಈ ಘಟನೆಯಲ್ಲಿ 10 ಜನ ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಚಿಕಿತ್ಸೆಯ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ಜಿಲ್ಲೆಯ ದೋರನಹಳ್ಳಿಯಲ್ಲಿ ನಡೆದ ಸಿಲಿಂಡರ್ ಸ್ಪೋಟದಲ್ಲಿ ಮೃತಪಟ್ಟ 15 ಜನರ ಕುಟುಂಬಗಳಿಗೆ ತಲಾ 5 ಲಕ್ಷ ರೂ.ಗಳಂತೆ ಒಟ್ಟು 75 ಲಕ್ಷ ರೂ.ಗಳ ಪರಿಹಾರವನ್ನು ವಿತರಿಸಿ ಮಾಧ್ಯಮದವರೊಂದಿಗೆ ಮಾತನಾಡಿದರು.

ಬಡವರು ಶುಭಕಾರ್ಯ ಮಾಡಿ ಸಂಭ್ರಮಿಸುವ ಸಂದರ್ಭದಲ್ಲಿ 15 ಜನ ತೀರಿಹೋಗಿರುವುದು ದೊಡ್ಡ ಅನಾಹುತ. ಅವರ ಕಟುಂಬದವರಿಗೆ ಕೇವಲ ಹಣ ಮಾತ್ರವಲ್ಲದೆ, ಎಲ್ಲಾ ರೀತಿಯ ಸಹಾಯವನ್ನು ಸರ್ಕಾರದ ವತಿಯಿಂದ ಮಾಡಲಾಗುವುದು ಎಂದರು.

ಇದು ತಿಳಿದ ತಕ್ಷಣವೇ ಜಿಲ್ಲಾಡಳಿತ, ಶಾಸಕರು ಎಲ್ಲಾ ಅಗತ್ಯ ನೆರವನ್ನು ನೀಡಿದ್ದಾರೆ. ಸೋಲ್ಹಾಪುರಕ್ಕೆ ಹೋದ ಗಾಯಾಳು ಒಬ್ಬರಿಗೆ ಸುಮಾರು 4 ಲಕ್ಷ ರೂ.ಗಳ ಚಿಕಿತ್ಸಾ ವೆಚ್ಚವನ್ನು ಭರಿಸಬೇಕಿದ್ದು, ಬೆಂಗಳೂರಿಗೆ ಹಿಂತಿರುಗಿದ ತಕ್ಷಣ ಚೆಕ್ ಗೆ ಸಹಿ ಮಾಡಿ ಮೊತ್ತವನ್ನು ಕಳುಹಿಸಲಾಗುವುದು ಎಂದರು.

*ವಿದ್ಯಾರ್ಹತೆಗೆ ತಕ್ಕ ಉದ್ಯೋಗಕ್ಕೆ ಕ್ರಮ:*
ಕೆಲವು ಕುಟುಂಬದವರಿಗೆ ಉದ್ಯೋಗವನ್ನು ನೀಡಬೇಕೆಂಬ ಬೇಡಿಕೆ ಇದ್ದು, ಅವರವರ ವಿದ್ಯಾಭ್ಯಾಸಕ್ಕೆ ತಕ್ಕಂತೆ ನೌಕರಿ ನೀಡಲು ಎಲ್ಲಾ ರೀತಿಯ ಪ್ರಯತ್ನವನ್ನು ಮಾಡಲಾಗುವುದು ಎಂದರು. ಕೆಲವರಿಗೆ ಸ್ಥಲೀಯವಾಗಿ ನೌಕರಿ ಹಾಗೂ ಇಂಜಿನಿಯರಿಂಗ್ ಮಾಡಿದವರಿಗೆ ಊರ ಹೊರಗಡೆಯೂ ಕೆಲಸ ನೀqಲು ವ್ಯವಸ್ಥೆ ಮಾಡಲಾಗುವುದು ಎಂದರು.

*ಐಒಸಿ ಸಹಾಯ ಒದಗಿಸಬೇಕು:*
ಇಂಡಿಯನ್ ಆಯಿಲ್ ಕಾರ್ಪೋರೇಷನ್ ಕಂಪನಿ ಸಂತ್ರಸ್ಥರಿಗೆ ಸಹಾಯವನ್ನು ಮಾಡಬೇಕು. ತಾಂತ್ರಿಕ ಕಾರಣಗಳನ್ನು ಹೇಳುತ್ತಿದ್ದಾರೆ. ಅದ್ಯಾವುದನ್ನು ಹೇಳದೆ ಸಂತ್ರಸ್ತರಿಗೆ ಮಾನವೀಯತೆಯ ದೃಷ್ಟಿಯಿಂದ ದೊಡ್ಡ ಸಹಾಯವನ್ನು ಮಾಡಲೇಬೇಕು ಎಂದು ಬೆಂಗಳೂರಿನಲ್ಲಿರುವ ಹಿರಿಯ ಅಧಿಕಾರಿಗಳೊಂದಿಗೆ ಮಾತನಾಡಿ ಹೆಚ್ಚಿನ ಪರಿಹಾರ ನೀಡುವ ವ್ಯವಸ್ಥೆ ಮಾಡಲಾಗುವುದು ಎಂದರು.
ಮೃತರ ಆತ್ಮಕ್ಕೆ ಶಾಂತಿ ಸಿಗಲಿ, ಕುಟುಂಬದವರಿಗೆ ದು:ಖವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುವುದಾಗಿ ತಿಳಿಸಿದರು.

  *ತುಮಕೂರಿನ ಪಾವಗಡದಲ್ಲಿ ಬಸ್ ಅಪಘಾತ: ಮೃತಪಟ್ಟವರ ಕುಟುಂಬದವರಿಗೆ ಪರಿಹಾರ* :
ತುಮಕೂರಿನ ಪಾವಗಡದಲ್ಲಿ ನಡೆದ ಇಂದು ಖಾಸಗಿ ಬಸ್ ಅಪಘಾತದಲ್ಲಿ 8 ಜನ ತೀರಿಹೋಗಿದ್ದು, 20 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಮೃತಪಟ್ಟವರ ಕುಟುಂಬಕ್ಕೆ ಪರಿಹಾರವನ್ನು ನೀಡುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು.

ಅವರು ಇಂದು ಯಾದಗಿರಿಯಲ್ಲಿ ಬಸ್ ದುರಂತದ ಬಗ್ಗೆ ಮಾಧ್ಯವದವರಿಗೆ ಪ್ರತಿಕ್ರಿಯೆ ನೀಡಿದರು.

ಗಾಯಾಳುಗಳಿಗೆ ತಕ್ಷಣ ಚಿಕಿತ್ಸೆಯ ವ್ಯವಸ್ಥೆ ಮಾಡುವಂತೆ ಸೂಚಿಸಲಾಗಿದೆ. ಈಗಾಗಲೇ ಸಾರಿಗೆ ಸಚಿವ ಶ್ರೀರಾಮುಲು ಅವರನ್ನು ಕಳುಹಿಸಲಾಗಿದೆ. ದುರಂತ ಯಾಕೆ ಆಗಿದೆ ಎಂದು ತನಿಖೆ ನಡೆಯುತ್ತಿದೆ, ಖಾಸಗಿ ವಾಹನಗಳ ಫಿಟ್‍ನೆಸ್ ಪ್ರಮಾಣಪತ್ರ ಇವುಗಳ ಬಗ್ಗೆ ಪರಿಶೀಲಿಸಲು ತಿಳಿಸಲಾಗಿದೆ. ದುರಂತಗಳು ಸಂಭವಿಸದಂತೆ ಇನ್ನಷ್ಟು ಕ್ರಮವಹಿಸಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಬಸ್ ದುರಂತ ಪ್ರಕರಣ; ಮೃತರ ಕುಟುಂಬಕ್ಕೆ ಪರಿಹಾರ ಘೋಷಣೆ

ಬೆಳಗಾವಿ : ಲಂಚ ಸ್ವೀಕರಿಸಿದ ಗಂಡ, ಹೆಂಡತಿ ಇಬ್ಬರಿಗೂ ಜೈಲು ಶಿಕ್ಷೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button