Latest

ಜಿಐಟಿ ಎಂಬಿಎ ಗೆ ವೀರಾಗ್ರಣಿ ಪ್ರಶಸ್ತಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ಬೆಳಗಾವಿಯ , ಕೆಎಲ್ಎಸ್ ಗೋಗಟೆ ತಾಂತ್ರಿಕ ಮಹಾವಿದ್ಯಾಲಯದ ಎಂ.ಬಿ.ಎ ವಿಭಾಗಕ್ಕೆ “ಗ್ಯಾಲಕ್ಟೊ” ವೀರಾಗ್ರಣಿ ಪ್ರಶಸ್ತಿ ದೊರಕಿದೆ. ಇತ್ತೀಚಿಗೆ ಹುಬ್ಬಳ್ಳಿಯ ಗ್ಲೋಬಲ್ ಬ್ಯುಸಿನೆಸ್ ಸ್ಕೂಲ್ ಆಯೋಜಿಸಿದ್ದ ಸ್ಪರ್ಧಾ ಮೇಳ  “ಗ್ಯಾಲಕ್ಟೊ”ದಲ್ಲಿ ಜಿ ಐ ಟಿ ವಿದ್ಯಾರ್ಥಿಗಳು ಭಾಗವಹಿಸಿದ್ದರು. ತಮ್ಮ ಪ್ರತಿಭೆ,

ಕುಮಾರಿ. ಸುಚೇತಾ ಕೌಜಲಗಿ ಅತ್ಯುತ್ತಮ ವ್ಯವಸ್ಥಾಪಕಿ ಪ್ರಶಸ್ತಿಯನ್ನು, ಕುಮಾರಿ ಯೋಜನ್ ಶಂಬುಚೆ ಮತ್ತು ಕುಮಾರಿ. ಫಿರ್ದೌಸ್ ಮಾರ್ಕೆಟಿಂಗ್ ಸ್ಪರ್ಧೆಯಲ್ಲಿ ಮೊದಲ ಸ್ಥಾನ ಪಡೆದರು, ಶ್ರೀ ಸಮೀರ್ ಸನದಿ ಔದ್ಯೋಗಿಕ ನೈತಿಕತೆ ಎಂಬ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದರು. ಕುಮಾರಿ ಸೋನಾಲಿ ಶೇಠ ಮತ್ತು ಪ್ರಜ್ವಲ್ ಬಿಸಿನೆಸ್-ಪ್ಲ್ಯಾನ್ ಸ್ಪರ್ಧೆಯಲ್ಲಿ ರನ್ನರ್ ಅಪ್ ಪ್ರಶಸ್ತಿಯನ್ನು ಗೆದ್ದುಕೊಂಡ ಜಿ ಐ ಟಿ ಹೆಚ್ಚಿನ ಅಂಕಗಳೊಂದಿಗೆ ಜನರಲ್ ಚಾಂಪಿಯನ್ ಪ್ರಶಸ್ತಿಯನ್ನು ಗೆದ್ದು ಕೊಂಡಿತು. ಈ ಸಾಧನೆಗೆ ಕೆ ಎಲ್ ಎಸ ಚೇರಮನ್ ಶ್ರೀ. ಎಂ ಆರ್ ಕುಲಕರ್ಣಿ. ಜಿ ಐ ಟಿ ಆಡಳಿತ ಮಂಡಳಿ ಅಧ್ಯಕ್ಷ ಶ್ರೀ ಯು ಏನ್ ಕಾಲಕುಂದ್ರಿಕರ್, ಪ್ರಾಚಾರ್ಯ ಡಾ. ಎ. ಎಸ. ದೇಶಪಾಂಡೆ, ಎಂ ಬಿ ಎ ಡೀನ್ ಡಾ. ಕೃಷ್ಣ ಶೇಖರ್ ಲಾಲ್ ದಾಸ್, ಸಾಂಸ್ಕೃತಿಕ ಚಟುವಟಿಕೆಗಳ ಸಂಯೋಜಕಿ ಪ್ರೊ. ವಾಣಿ ಹುಂಡೇಕರ್ ಮತ್ತು ಸಿಬ್ಬಂದಿ ವರ್ಗ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button