Latest

ಮತ್ತೆ ವಿವಾದದ ಕಿಡಿ ಹೊತ್ತಿಸಿದ ಆರ್ ಎಸ್ ಎಸ್ ಮುಖಂಡ

ಪ್ರಗತಿವಾಹಿನಿ ಸುದ್ದಿ; ದಕ್ಷಿಣ ಕನ್ನಡ: ಮುಂದೊಂದು ದಿನ ಕೇಸರಿ ಧ್ವಜವೇ ರಾಷ್ಟ್ರಧ್ವಜವಾಗಬಹುದು ಎಂದು ಹೇಳುವ ಮೂಲಕ ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಹೊಸ ವಿವಾದದ ಕಿಡಿ ಹೊತ್ತಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಕುತ್ತಾರಿನ ಕೊರಗಜ್ಜ ಕ್ಷೇತ್ರದಲ್ಲಿ ಭಾಷಣ ಮಾಡಿದ ಕಲ್ಲಡ್ಕ ಪ್ರಭಾಕರ್ ಭಟ್, ಮುಂದೊಂದು ದಿನ ರಾಷ್ಟ್ರಧ್ವಜವನ್ನು ಬದಲಿಸುವ ಕಾಲಬರಬಹುದು. ಕೇಸರಿ ಧ್ವಜವೇ ರಾಷ್ಟ್ರಧ್ವಜವಾಗಲುಬಹುದು. ರಾಷ್ತ್ರಧ್ವಜವನ್ನು ಬದಲಿಸಲಾಗದು ಅಂತ ಇಲ್ಲ, ರಾಜ್ಯಸಭೆಯಲ್ಲಿ ಬಹುಮತವಿದ್ದರೆ ಬದಲಿಸಬಹುದು ಎಂದು ಹೇಳಿದ್ದಾರೆ.

ಕಾಂಗ್ರೆಸ್ ನ ತುಷ್ಟೀಕರಣ ನೀತಿಯಿಂದ ದ್ವಜ ತುಂಡಾಯಿತು. ಈಗ ಇರುವ ರಾಷ್ಟ್ರಧ್ವಜವನ್ನು ಯಾರು ಮಾಡಿದ್ದು? ಈಗ ರಾಷ್ಟ್ರಧ್ವಜ ಅಂತಾ ಇದೆ, ಅದಕ್ಕೆ ನಾವು ಗೌರವ ಕೊಡೋಣ. ಆದರೆ ರಾಷ್ಟ್ರಧ್ವಜ ಬದಲಾಯಿಸಬಾರದು ಅಂತ ಇಲ್ಲ. ಈಗಿರುವ ರಾಷ್ಟ್ರಧ್ವಜಕ್ಕಿಂತ ಮೊದಲು ಬ್ರೀಟೀಷರ ಧ್ವಜ ಇತ್ತು. ಅದಕ್ಕೂ ಮೊದಲು ಹಸಿರು ನಕ್ಷತ್ರ, ಚಂದ್ರನ ಧ್ವಜ ಇತ್ತು. ಹಾಗೆ ಮುಂದೊಂದು ದಿನ ಈಗಿರುವ ರಾಷ್ಟ್ರಧ್ವಜವನ್ನು ಬದಲಿಸಲಬಹುದು. ಹಿಂದುಗಳೆಲ್ಲರೂ ಮುಂದೆ ಒಟ್ಟಾಗಿ ಸೇರಿದಾಗ ಕೇಸರಿ ಧ್ವಜವೆ ರಾಷ್ಟ್ರಧ್ವಜವನ್ನಾಗಿ ಮಾಡಬಹುದು. ರಾಜ್ಯಸಭೆ, ಸಂಸತ್ ನಲ್ಲಿ 2/3 ಬಹುಮತ ಬಂದರೆ ಈಗಿರುವ ರಾಷ್ಟ್ರಧ್ವಜವನ್ನು ಬದಲಿಸಬಹುದು ಎಂದು ಹೇಳಿದ್ದಾರೆ.

ಹಿಂದೆ ರಘುಪತಿ ರಾಘವ ರಾಜಾರಾಮ್ ಅಂತ ಗೀತೆ ಇತ್ತು ಅದನ್ನೂ ತುಂಡರಿಸಿ ಈಶ್ವರ ಅಲ್ಲಾ ತೇರೆ ನಾಮ್ ಅಂತ ಸೇರಿಸಿದರು. ಕಾಂಗ್ರೆಸ್ ನ ತುಷ್ಟೀಕರಣದಿಂದಾಗಿ ಇಂತಹ ಕೆಲಸಗಳು ನಡೆದಿವೆ ಎಂದು ಕಿಡಿಕಾರಿದ್ದಾರೆ.
ತಂದೆಯನ್ನೆ ಕೊಡಲಿಯಿಂದ ಕೊಚ್ಚಿ ಕೊಲೆಗೈದ ಮಗ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button