Latest

ತಂದೆಯನ್ನೆ ಕೊಡಲಿಯಿಂದ ಕೊಚ್ಚಿ ಕೊಲೆಗೈದ ಮಗ

ಪ್ರಗತಿವಾಹಿನಿ ಸುದ್ದಿ; ಉಡುಪಿ: ಕ್ಷುಲ್ಲಕ ಕಾರಣಕ್ಕೆ ಜಗಳವಾಡಿ ಮಗನೆ ತಂದೆಯನ್ನು ಬರ್ಬರವಾಗಿ ಹತ್ಯೆಗೈದ ಘಟನೆ ಉಡುಪಿ ಜಿಲ್ಲೆಯ ಗೋಪಾಡಿಯಲ್ಲಿ ನಡೆದಿದೆ.

ನರಸಿಂಹ ಮರಕಾಲ (74) ಕೊಲೆಯಾದ ವ್ಯಕ್ತಿ. ಮನೆಯ ಅಂಗಳದಲ್ಲಿ ಕಸಕ್ಕೆ ಬೆಂಕಿ ಹಾಕಿದ ವಿಚಾರವಾಗಿ ಅಪ್ಪ-ಮಗನ ನಡುವೆ ಜಗಳ ಆರಂಭವಾಗಿದೆ. ಕೋಪದ ಬರದಲ್ಲಿ ಮಗ ತಂದೆಯನ್ನೆ ಕೊಡಲಿಯಿಂದ ಕೊಚ್ಚಿ ಕೊಲೆಗೈದಿದ್ದಾನೆ.

Home add -Advt

ಆರೋಪಿ 36 ವರ್ಷದ ರಾಘವೇಂದ್ರ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಜಾಗದ ವಿಚಾರವಾಗಿ ತಂದೆಯೊಂದಿಗೆ ಜಗಳವಾಡಿದ್ದ ಮಗ ಕಳೆದ ಕೆಲ ವರ್ಷಗಳಿಂದ ಮನೆಯ ಒಂದು ಭಾಗದಲ್ಲಿ ಪ್ರತ್ಯೇಕವಾಗಿ ವಾಸವಾಗಿದ್ದ. ನಿನ್ನೆ ರಾತ್ರಿ ಮನೆಯ ಅಂಗಳದಲ್ಲಿ ಕಸದ ರಾಶಿಗೆ ರಾಘವೇಂದ್ರ ಬೆಂಕಿ ಹಾಕಿದ್ದ. ಪಕ್ಕದಲ್ಲಿಯೇ ದನದ ಕೊಟ್ಟಿಗೆ, ಒಣ ಹುಲ್ಲಿನ ರಾಶಿಯಿದೆ ಎಂಬ ಕಾರಣಕ್ಕೆ ತಂದೆ ನರಸಿಂಹ ಬೆಂಕಿಗೆ ನೀರು ಹಾಕಿ ನಂದಿಸಿದ್ದಾರೆ.

ಈ ವೇಳೆ ಇದ್ದಕ್ಕಿದ್ದಂತೆ ಕೊಡಲಿ ತೆಗೆದುಕೊಂಡು ಬಂದ ಮಗ ತಂದೆಯ ತಲೆ ಹಾಗೂ ಮುಖವನ್ನು ಕೊಡಲಿಯಿಂದ ಕಡಿದಿದ್ದಾನೆ. ತಪ್ಪಿಸಲು ಬಂದ ಸಹೋದರಿಗೂ ಕೊಡಲಿ ಬೀಸಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ನರಸಿಂಹರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ನರಸಿಂಹ ಮೃತಪಟ್ಟಿದ್ದಾರೆ.

ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸೆಕ್ಸ್ ವಿಡಿಯೋ ಇದೆ ಎಂದು ಶಿರಸ್ತೆದಾರನಿಗೆ ಬ್ಲ್ಯಾಕ್ ಮೇಲ್

Related Articles

Back to top button