ಪ್ರಗತಿವಾಹಿನಿಸುದ್ದಿ,; ಮಹಾಲಿಂಗಪುರ –
ಬೆಳಗಾವಿ ರಾಣಿ ಚನ್ನಮ್ಮ ವಿವಿ ಪದವಿ ಪರೀಕ್ಷೆಗಳು ಮಾ.22ರಿಂದ ಪ್ರಾರಂಭವಾಗಿವೆ. ಗುರುವಾರ ನಡೆಯಬೇಕಿದ್ದ ಪದವಿ ಮೂರನೇ ಸೆಮಿಸ್ಟರ್‌ನ ಪತ್ರಿಕೋದ್ಯಮ ವಿಭಾಗದ ಪತ್ರಿಕೋದ್ಯಮ ಮತ್ತು ಸಮೂಹ ಮಾಧ್ಯಮಗಳು ವಿಷಯದ ಪಶ್ನೆ ಪತ್ರಿಕೆ ಬಾರದೇ ಪರೀಕ್ಷೆ ರದ್ದಾಗಿದೆ. ಇದರಿಂದ ಕೋಪಗೊಂಡ ವಿದ್ಯಾರ್ಥಿಗಳು ಬೆಳಗಾವಿ ರಾಣಿ ಚನ್ನಮ್ಮ ವಿವಿ ವಿರುದ್ಧ ಪ್ರತಿಭಟನೆ ನಡೆಸಿದರು.
ಮಾ.28ರಂದು ನಡೆಯಬೇಕಿದ್ದ ಪತ್ರಿಕೋದ್ಯಮ ವಿಭಾಗದ ಬರವಣಿಗೆಯ ಕೌಶಲ್ಯಗಳು ವಿಷಯದ ಪ್ರಶ್ನೆ ಪತ್ರಿಕೆ ಬಾರದೇ ಒಂದು ಗಂಟೆ ಕಾಲ ಕಾಯ್ದು ಪರೀಕ್ಷೆ ರದ್ದಾಗಿ ವಿದ್ಯಾರ್ಥಿಗಳು ಮನೆಗೆ ಮರಳಿದ್ದರು. ಇಂದು (31 )ನಡೆಯಬೇಕಿದ್ದ ಪತ್ರಿಕೋದ್ಯಮ ಮತ್ತು ಸಮೂಹ ಮಾಧ್ಯಮಗಳು ವಿಷಯದ ಪ್ರಶ್ನೆ ಪತ್ರಿಕೆಯೂ ಬಂದಿಲ್ಲ ಹಾಗಾಗಿ ಎರಡು ಬಾರಿ ಪರೀಕ್ಷೆ ರದ್ದಾಗಿದೆ. ಇದರಿಂದ ಕೋಪಗೊಂಡ ಪತ್ರಿಕೋದ್ಯಮ ವಿದ್ಯಾರ್ಥಿಗಳು ಕಾಲೇಜಿನ ಆವರಣದ ಹೊರಗೆ ಪ್ರತಿಭಟನೆ ನಡೆಸಿದರು. ಚನ್ನಮ್ಮ ವಿವಿಯಿಂದ ಪರೀಕ್ಷೆ ಮುಂದೂಡಿರುವ ಸೂಚನಾ ಪತ್ರ ಬಂದ ನಂತರ ವಿದ್ಯಾರ್ಥಿಗಳು ಪ್ರತಿಭಟನೆ ಕೈಬಿಟ್ಟರು.
ಚನ್ನಮ್ಮ ವಿವಿ ಎಡವಟ್ಟುಗಳ ವಿವಿಯಾಗಿದೆ. ಮುಂಚಿತವಾಗಿ ವಿದ್ಯಾರ್ಥಿಗಳಿಗೆ ತಿಳಿಸಿದ್ದರೆ ಒಳ್ಳೆಯದಿತ್ತು. ನಮ್ಮ ವಿಭಾಗದ ಎರಡು ಪತ್ರಿಕೆಗಳು ರದ್ದಾಗಿವೆ. ಪರೀಕ್ಷೆ ಅರ್ಜಿ ಫಾರ್ಮ್ ತುಂಬುವಾಗ ಒಂದು ದಿನ ತಡವಾದರೆ ದಿನಕ್ಕೆ 100 ದಂಡ ಹಾಕುವ ವಿವಿ ಇಂದು ಪ್ರಶ್ನೆ ಪತ್ರಿಕೆ ತಲುಪಿಸುವಲ್ಲಿ ಯಡವಟ್ಟು ಮಾಡಿದೆ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ