Latest

ಪೊಲೀಸರ ಕಿರುಕುಳ ತಾಳಲಾರದೆ ಖ್ಯಾತ ವೈದ್ಯೆ ಆತ್ಮಹತ್ಯೆ

ಚಿಕಿತ್ಸೆ ಫಲಕಾರಿಯಾಗದೆ ರೋಗಿ ಮೃತಪಟ್ಟಿದ್ದಕ್ಕೆ ಕೊಲೆ ಕೇಸ್ ದಾಖಲಿಸಿದ್ದ ಪೊಲೀಸರು.

 

ಪ್ರಗತಿ ವಾಹಿನಿ ಸುದ್ದಿ ಜೈಪುರ –

ತೀವ್ರ ಅಸ್ವಸ್ಥತೆಯಿಂದ ಬಳಲುತ್ತಿದ್ದ ರೋಗಿಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದ ಕಾರಣಕ್ಕೆ ವೈದ್ಯೆಯ ವಿರುದ್ಧ ಐಪಿಸಿ ಸೆಕ್ಷನ್ ೩೦೨ರ ಅಡಿ ಪೊಲೀಸರು ಕೊಲೆ ಕೇಸ್ ದಾಖಲಿಸಿದ್ದು ಕಂಗಾಲಾದ ವೈದ್ಯೆ ಆತ್ಮಹತ್ಯೆಗೆ ಶರಣಾದ ದಾರುಣ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ.

ಡಾ. ಅರ್ಚನಾ ಶರ್ಮಾ ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟ ನತದೃಷ್ಟ ವೈದ್ಯೆ. ಪೊಲೀಸರು ಮತ್ತು ಸ್ಥಳೀಯ ಕೆಲ ರಾಜಕೀಯ ಮುಖಂಡರ ಕಿರುಕುಳದಿಂದ ವಿಪರೀತ ಹೆದರಿದ್ದ ಡಾ. ಅರ್ಚನಾ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Home add -Advt

ಗೋಲ್ಡ್ ಮೆಡಲಿಸ್ಟ್ ಆಗಿದ್ದ ಡಾ. ಅರ್ಚನಾ ಶರ್ಮಾ ರಾಜಸ್ಥಾನದ ಅತ್ಯಂತ ಖ್ಯಾತ ಪ್ರಸೂತಿ ತಜ್ಞ ವೈದ್ಯರಲ್ಲಿ ಒಬ್ಬರಾಗಿದ್ದರು. ಪತಿ ಮತ್ತು ಇಬ್ಬರು ಪುಟ್ಟ ಮಕ್ಕಳನ್ನು ಅಗಲಿರುವ ಡಾ. ಶರ್ಮಾ ತಮ್ಮ ಡೆತ್ ನೋಟ್‌ನಲ್ಲಿ ಮಕ್ಕಳು ಮತ್ತು ಪತಿಯ ಕಾಳಜಿ ವಹಿಸಿರುವುದು ಮನಕಲಕುವಂತಿದೆ.

ದೇಶಾದ್ಯಂತ ವೈದ್ಯರು ಮತ್ತು ಸಾರ್ವಜನಿಕರು ಡಾ. ಅರ್ಚನಾ ಶರ್ಮಾ ಅವರ ಸಾವಿಗೆ ತೀವ್ರ ಶೋಕ ವ್ಯಕ್ತಪಡಿಸಿದ್ದು ಸಂಬಂಧಪಟ್ಟ ಆರೋಪಿಗಳನ್ನು ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಸಹೋದರ ಸಂಬಂಧಿಯನ್ನೇ ಗುಂಡಿಟ್ಟು ಕೊಂದವನಿಗೆ ಜೀವಾವಧಿ ಶಿಕ್ಷೆ

Related Articles

Back to top button