Latest

ಎಂಬಿಎ ಮಾಡದಿರುವುದೇ ಒಳ್ಳೇದಾಯ್ತು ಎಂದ ಪ್ಯಾರಾಶೂಟ್ ತೈಲ ಕಂಪನಿಯ ಸಂಸ್ಥಾಪಕ

ಪ್ರಗತಿ ವಾಹಿನಿ ಸುದ್ದಿ; ಮುಂಬೈ: ಎಂಬಿಎ (ಮಾಸ್ಟರ್ಸ್ ಆಪ್ ಬ್ಯುಸಿನೆಸ್ ಅಡ್ಮಿನಿಸ್ಟ್ರೇಶನ್ ) ಓದಲು ಹೋಗಿದ್ದೆ. ಆದರೆ ಸೀಟ್ ಸಿಕ್ಕಿರಲಿಲ್ಲ. ಎಂಬಿಎ ಓದದಿರುವದೇ ನನ್ನ ಜೀವನದ ಯಶಸ್ಸಿಗೆ ಸಹಕಾರಿ ಆಯ್ತು ಎಂಬ ಭಾವನೆ ಮೂಡಿದೆ ಎಂದು ಖ್ಯಾತ ಪ್ಯಾರಾಶೂಟ್ ಕೊಬ್ಬರಿ ಎಣ್ಣೆ ಉತ್ಪಾದಿಸುವ ಮಾರಿಕೊ ಕಂಪನಿಯ ಸಂಸ್ಥಾಪಕ ಹರ್ಷ ಮಾರಿವಾಲಾ ಹೇಳಿಕೊಂಡಿದ್ದಾರೆ.

ಈ ಕುರಿತು ಟ್ವಿಟರ್‌ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿರುವ 72 ವರ್ಷದ ಬ್ಯಸಿನೆಸ್ ದಿಗ್ಗಜ, ನಾನು ಚಿಕ್ಕವನಿದ್ದಾಗ ಸಾಧಾರಣ ಬುದ್ಧಿಮತ್ತೆಯ ವಿದ್ಯಾರ್ಥಿ. ಅಲ್ಲದೇ ಬಹಳ ನಾಚಿಕೆ ಸ್ವಭಾವದವನೂ ಆಗಿದ್ದೆ. ಬಿ ಸ್ಕೂಲ್‌ಗೆ ಅಡ್ಮಿಷನ್ ಪಡೆಯಲು ಹೋದಾಗ ಸೀಟ್ ಸಿಕ್ಕಿರಲಿಲ್ಲ. ಇನ್ನು ನನ್ನ ಮುಂಚಿನ ಸ್ವಭಾವ ಸಹ ವ್ಯಾಪಾರ ಕ್ಷೇತ್ರಕ್ಕೆ ಹೇಳಿ ಮಾಡಿಸಿದ್ದಾಗಿರಲಿಲ್ಲ.

ಆದರೆ ಅನುಭವ ಕಲಿಸಿದಷ್ಟು ಪಾಠವನ್ನು ಯಾವ ಎಂಬಿಎ ಡಿಗ್ರಿಯೂ ಕಲಿಸುವುದಿಲ್ಲ. ಒಂದೊಮ್ಮೆ ಎಂಬಿಎ ಮಾಡಿದ್ದರೆ ನಾನು ಏನಾಗಿರುತ್ತಿದ್ದೆನೊ ಗೊತ್ತಿಲ್ಲ. ಆದರೆ ಈ ಮಟ್ಟಕ್ಕೆ ಬೆಳೆಯಲು ನನಗೆ ಅನುಭವವೇ ಸಹಕಾರಿಯಾಯಿತು ಎಂದಿದ್ದಾರೆ.

ಕಿರುಕುಳದಿಂದ ವೈದ್ಯೆಯ ಆತ್ಮಹತ್ಯೆ; ಘಟನೆ ಖಂಡಿಸಿ ಕಪ್ಪುಪಟ್ಟಿ ಪ್ರತಿಭಟನೆಗೆ ಸಂಘಟನೆಗಳ ನಿರ್ಧಾರ

Home add -Advt

Related Articles

Back to top button