ಪ್ರಗತಿವಾಹಿನಿ ಸುದ್ದಿ,
ಬೆಳಗಾವಿ: ಬೆಳಗಾವಿ ಸಮೀಪದಲ್ಲಿರುವ ಚಿನ್ಹಾಪಪಟ್ಟಣ (ಪೀರಣವಾಡಿ) ಗ್ರಾಮದಲ್ಲಿ ನೂತನವಾಗಿ ಸ್ಥಾಪಿಸಲಾದ ಶ್ರೀ. ನೇಮಿನಾಥ ತೀರ್ಥಂಕರರ ಹಾಗೂ ಮಾನಸ್ಥಂಭೋಪರಿ ಚರ್ತುಮುಖ ಜಿನಬಿಂಬ ಪಂಚಕಲ್ಯಾಣ ಮಹೋತ್ಸವ ಏ. ೨ ರಿಂದ ಆರಂಭಗೊಂಡಿದ್ದು, ಮಹಾಮಹೋತ್ಸವಕ್ಕೆ ಏ. ೨ ರಂದು ಅದ್ದೂರಿಯ ಚಾಲನೆ ನೀಡಲಾಯಿತು.
ಶ್ರೀ ಧರ್ಮಸೇನ ಮುನಿಮಹಾರಾಜರು ಮತ್ತು ಶ್ರೀ ೧೦೮ ವೃಷಭಸಾಗರ ಮುನಿ ಮಹಾರಾಜರ ಸಾನಿಧ್ಯದಲ್ಲಿ ಈ ಪಂಚಕಲ್ಯಾಣ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು. ಏ. ೨ ರಂದು ಬೆಳಿಗ್ಗೆ ಅನಿಲ ಪಾಟೀಲ ದಂಪತಿಗಳು ಧ್ವಜಾರೋಹಣ ಮಾಡುವುದರ ಮೂಲಕ ಮಹೋತ್ಸವಕ್ಕೆ ಚಾಲನೆ ನೀಡಿದರು. ತದನಂತರ , ಬಾಹುಬಲಿ ಸಂಗಮಿ ದಂಪತಿಗಳು ಮಂಟಪ ಉದ್ಘಾಟನೆ ನೇರವೆರಿಸಿದರೆ, ಶಿವಾನಂದ ಅಲಿಯಾಸ ರಾಜು ಪಾಟೀಲ ದಂಪತಿಗಳು ಮಂಗಳ ಕಳಶಗಳ ಮೂಲಕ ಮಂಟಪದಲ್ಲಿ ಪ್ರವೇಶ ಮಾಡಿ ಮಹೋತ್ಸವಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಿದರು.
ಏ.೨ ರಂದು ಗರ್ಭ ಕಲ್ಯಾಣ ಕಾರ್ಯಕ್ರಮ ನಡೆಯಿತು. ಬೆಳಿಗ್ಗೆ ನಾಂದಿಮಂಗಲ, ಯಜಮಾಣ ಆಗಮನ, ಆಚಾರ್ಯ ನಿಮಂತ್ರಣ, ಇಂದ್ರ ಪ್ರತಿಷ್ಠಾ, ಕಂಕಣ ಬಂಧನ ಧ್ವಜಾರೋಹಣ, ಮಂಟಪ ಉದ್ಘಾಟನೆ, ದ್ವೀಪ ಪ್ರಜ್ವಲನೆ, ನವಗ್ರಹ ಹೋಮ, ಮಂಗಲ ಕಳಶ ತುರುವುದು, ಪಂಚಾಮೃತ ಅಭಿಷೇಕ, ಶಾಂತಿಧಾರಾ, ಗರ್ಭ ಕಲ್ಯಾಣಕ ವಿಧಾನ, ಧಾಂ ಸಂಪ್ರೋಕ್ಷಣ, ವಾಸ್ತು ವಿಧಾನ, ಶ್ರೀ.ಗಳಿಂದ ಮಂಗಲ ಪ್ರವಚನ, ಮೃತ್ತಿಆಕಾ ಸಂಗ್ರಹ, ಅಂಕುರಾರೋಪಣ, ಶಾಂತಿಹೋಮ, ತೀರ್ಥಂಕರರ ಮಾತಾ ಪಿತಾ ಆಗಮನ, ಬಧ್ರ Pಕುಂಭ ತುರುವುದು ಇಂದ್ರಸಭೆ, ಗರ್ಭಾವತರಣ ಕಲ್ಯಾಣ, ೧೬ ಸ್ವಪ್ನ ದರ್ಶನ, ರತ್ನ ವೃಷ್ಟಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಏ. ೨ ರಂದು ಕೊಲ್ಪಾಊರ ಜಿಲ್ಲೆಯ ಮಜಲೆ ಗ್ರಾಮದ ಸುಮ ಆರು ೨೫ ಯುವಕರು ಸೈಕಲ ಮೂಲಕ ಪೀರನವಾಡಿ ಗ್ರಾಮಕ್ಕೆ ಸುಮಾರು ೧೫೦ ಕಿ.ಮಿ. ಅಂತರದ ಸೈಕಲ ಮೂಲಕ ಪ್ರವಾಸ ಕೈಗೊಂಡು ಭ. ಮಹಾವೀರರ ಎರಡು ಪ್ರತಿಮೆಗಳು, ಭ.ಧರ್ಮನಾಥ ತೀರ್ಥಂಕರರ ಪ್ರತಿಮೆಯನ್ನು ಬೆನ್ನಿನ ಮೇಲೆ ಹೊತ್ತುಕೊಂಡು ಪೀರಣವಾಡಿ ಗ್ರಾಮಕ್ಕೆ ಆಗಮಿಸಿ ಎಲ್ಲ ಪ್ರತಿಮೆಗಳನ್ನು ಇಲ್ಲಿಯ ಪಂಚಕಲ್ಯಾಣ ಮಹೋತ್ಸವ ಸಮಿತಿಗೆ ಹಸ್ತಾಂತರಿಸಿದರು. ಈ ಸಂದರ್ಬದಲ್ಲಿ ಸೈಕಲ ಪ್ರವಾಸ ಕೈಗೊಂಡಿರುವ ಎಲ್ಲ ಯುವಕರನ್ನು ಸನ್ಮಾನಿಸಿ ಗೌರವಿಸಲಾಯಿತು.
ಏ. ೩ರಂದು ಭಗವತ್ ಜನ್ಮಕಲ್ಯಾಣ ಕೋಟಿವಾದ್ಯ ಘೋಷ, ಜನ್ಮಕಲ್ಯಾಣ ವಿಧಾಣ, ಪಾಡುಂಕಶೀಲೆಯ ಮೇಲೆ ಜನ್ಮಾಭಿಷೇಕ, ನಾಮಕರಣ, ಬಾಲಲೀಲೆ, ಕುಮಾರ ಕ್ರೀಡೆ, ಮತ್ತು ಸಾಂಸ್ಕೃತಿಕ ಕಾಯಕ್ರಮಗಳು ನಡೆದವು. ಪ್ರತಿಷ್ಠಾಚಾರ್ಯ ವಿದ್ಯಾಸಾಗರ ಉಪಾಧ್ಯೆ, ವಿಧಾನ ಆಚಾರ್ಯರಾದ ಭೂಷಣ ಉಪಾಧ್ಯೆ, ಸಹ ಪ್ರತಿಷ್ಠಾಚಾರ್ಯ ಪ್ರವೀಣ ಉಪಾಧ್ಯೆ ಇವರು ಎಲ್ಲ ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸಿಕೊಟ್ಟರು. ಪಂಚಕಲ್ಯಾಣ ಮಹೋತ್ಸವವು ಏ. ೬ ರವರೆಗೆ ನಡೆಯಲಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ