Kannada NewsKarnataka NewsLatest

IPS ಹೇಮಂತ ನಿಂಬಾಳಕರ್ 2 ವರ್ಷ ಸುದೀರ್ಘ ರಜೆ, ಕಾರಣ ಬಹಿರಂಗಪಡಿಸಿದ MLA ಅಂಜಲಿ ನಿಂಬಾಳಕರ್

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಹಿರಿಯ ಐಪಿಎಸ್ ಅಧಿಕಾರಿ ಹೇಮಂತ ನಿಂಬಾಳಕರ್ 2 ವರ್ಷ ಸುದೀರ್ಘ ರಜೆ ಮೇಲಿದ್ದಾರೆ. ಅವರು ಕಾನೂನು ಪದವಿ ಓದುತ್ತಿದ್ದು ಅದಕ್ಕಾಗಿ ಸ್ಟಡಿ ಲೀವ್ ತೆಗೆದುಕೊಂಡಿದ್ದಾರೆ ಎಂದು ಪತ್ನಿ, ಶಾಸಕಿ ಅಂಜಲಿ ನಿಂಬಾಳಕರ್ ಮಾಹಿತಿ ನೀಡಿದ್ದಾರೆ.

ಬೆಂಗಳೂರಿನಲ್ಲಿ ಕೆಎಲ್ಇ ಕಾನೂನು ಕಾಲೇಜಿನಲ್ಲಿ ಈಗಾಗಲೆ ಒಂದು ವರ್ಷಕಾನೂನು ಪದವಿ ಮುಗಿಸಿರುವ ಹೇಮಂತ ನಿಂಬಾಳಕರ್ ಇನ್ನೂ 2 ವರ್ಷ ಅಧ್ಯಯನ ಮಾಡಲಿದ್ದಾರೆ ಎಂದು ಅವರು ತಿಳಿಸಿದರು.

ಹೇಮಂತ ನಿಂಬಾಳಕರ್ ಸ್ವಯಂ ನಿವೃತ್ತಿ ಪಡೆದು ರಾಜಕೀಯಕ್ಕೆ ಬರುವ ಸಾಧ್ಯತೆ ಏನಾದರೂ ಇದೆಯೇ ಎನ್ನುವ ಪ್ರಶ್ನೆಗೆ, ನಿತ್ಯ ಅವರು ನನ್ನೊಂದಿಗೆ 2 -3 ಬಾರಿ ಪೋನ್ ನಲ್ಲಿ ಮಾತನಾಡುತ್ತಾರೆ. ಈ ಬಗ್ಗೆ ನನಗೆ ಏನೂ ತಿಳಿಸಿಲ್ಲ. ನಿಮಗೇನಾದರೂ ತಿಳಿಸಿದ್ದಾರಾ ಎಂದು ಪತ್ರಕರ್ತರಿಗೆ ಪ್ರಶ್ನಿಸಿದರು.

ರಾಜಕೀಯಕ್ಕೆ ಯಾವುದೇ ಡಿಗ್ರಿ ಪಡೆದವರೂ ಬರಬಹುದು. ಅದಕ್ಕೆ ಸಮಸ್ಯೆಯೇನಿಲ್ಲ. ವೈದ್ಯಕೀಯ ಪದವಿ ಪಡೆದ ನಾನು ಬಂದಿಲ್ಲವೇ ಎಂದೂ ಪ್ರಶ್ನಿಸಿದರು.

ಅರಗ ಜ್ಞಾನೇಂದ್ರ ವಜಾ ಮಾಡಿ

ಬೆಂಗಳೂರಿನಲ್ಲಿ ನಡೆದ ಕೊಲೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಬೇಜವಾಬ್ದಾರಿ ಹೇಳಿಕೆ ನೀಡಿರುವ ಗೃಹ ಸಚಿವ ಅರಗ ಜ್ಞಾನೇಂದ್ರ ಅವರನ್ನು ಸಂಪುಟದಿಂದ ವಜಾ ಮಾಡಬೇಕು ಎಂದು ಅಂಜಲಿ ನಿಂಬಾಳಕರ್ ಆಗ್ರಹಿಸಿದರು.

ಅರಗ ಹೇಳಿಕೆ ಹಿಂದೆ ಆರ್ ಎಸ್ಎಸ್ ಹಿಡನ್ ಅಜೆಂಡಾ ಇದೆ. ರಾಜ್ಯದಲ್ಲಿ ಕೋಮು ಸಂಘರ್ಷ ಸೃಷ್ಟಿ ಮಾಡುವ ಉದ್ದೇಶದಿಂದಲೇ ಇಂತಹ ಹೇಳಿಕೆ ನೀಡಿದ್ದಾರೆ ಎಂದೂ ಅವರು ಆರೋಪಿಸಿದರು.

ಅರಗ ಜ್ಞಾನೇಂದ್ರ ವಿರದ್ಧ ಪ್ರಕರಣ ದಾಖಲಿಸುವಂತೆ ಬೆಳಗಾವಿ ಪೊಲೀಸ್ ಆಯುಕ್ತರ ಮೂಲಕ ಮನವಿ ಸಲ್ಲಿಸಲಾಯಿತು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ, ನಗರಾಧ್ಯಕ್ಷ ರಾಜು ಸೇಠ್ ಮೊದಲಾದವರಿದ್ದರು.

ಶಿಶುಪಾಲನಾ ರಜೆ: ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ ಎಂದ ಹೊರಟ್ಟಿ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button