Latest

ಐಪಿಎಲ್‌ನಲ್ಲಿ ಹೊಸ ದಾಖಲೆ ಬರೆದ ರಾಬಿನ್ ಉತ್ತಪ್ಪ

 

 ಉತ್ತಪ್ಪ- ದುಬೆ ಜತೆಯಾಟದಲ್ಲಿ ಸಿಡಿಯಿತು ೧೭ ಸಿಕ್ಸರ್ !

 

ಪ್ರಗತಿ ವಾಹಿನಿ ಸುದ್ದಿ ಮುಂಬೈ –

ಐಪಿಎಲ್‌ನಲ್ಲಿ ಚೆನ್ಮೈ ಸೂಪರ್ ಕಿಂಗ್ಸ್ ಪರ ಆಡುತ್ತಿರುವ ರಾಬಿನ್ ಉತ್ತಪ್ಪ ಮಂಗಳವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಹೊಸ ದಾಖಲೆ ಬರೆದಿದ್ದಾರೆ.

ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ೯ ಸಿಕ್ಸರ್ ಸಿಡಿಸುವ ಮೂಲಕ ಐಪಿಎಲ್‌ನ ಇನ್ನಿಂಗ್ಸ್ ಒಂದರಲ್ಲಿ ಅತೀ ಹೆಚ್ಚು ಸಿಕ್ಸರ್ ಬಾರಿಸಿದ ಆಟಗಾರ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.

ಇದೇ ಪಂದ್ಯದಲ್ಲಿ ರಾಬಿನ್ ಉತ್ತಪ್ಪ ಜತೆ ಆಟಗಾರ ಶಿವಂ ದುಬೆ ಸಹ ೮ ಸಿಕ್ಸರ್ ಸಿಡಿಸಿದ್ದು ಪಂದ್ಯವನ್ನು ಸಿಕ್ಸರ್ ಮ್ಯಾಚ್ ಎಂದು ಕ್ರಿಕೇಟ್ ಪ್ರೇಮಿಗಳು ಬಣ್ಣಿಸಿದ್ದಾರೆ. ರಾಬಿನ್ ಉತ್ತಪ್ಪ ಮತ್ತು ಶಿವಂ ದುಬೆ ಜತೆಯಾಟದ ನೆರವಿನಿಂದ ಸಿಎಸ್‌ಕೆ ೨೦ ಓವರ್ ಗಳಲ್ಲಿ ೪ ವಿಕೇಟ್ ನಷ್ಟಕ್ಕೆ ೨೧೬ ರನ್ ಗಳಿಸಿತು.

ಐಪಿಎಲ್‌ನಲ್ಲಿ ಹೊಸ ದಾಖಲೆ ಬರೆದ ಹಾರ್ದಿಕ್ ಪಾಂಡ್ಯ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button