
ಪ್ರಗತಿ ವಾಹಿನಿ ಸುದ್ದಿ ಪಾಟ್ನಾ –
ಬರೋಬ್ಬರಿ ೧೭೦೦ ಕೋಟಿ ಖರ್ಚು ಮಾಡಿ ನಿರ್ಮಿಸಲಾಗುತ್ತಿದ್ದ ಬೃಹತ್ ಸೇತುವೆಯೊಂದು ನಿರ್ಮಾಣ ಹಂತದಲ್ಲೇ ಕುಸಿದು ಬಿದ್ದಿರುವ ಘಟನೆ ಬಿಹಾರದ ಸುಲ್ತಾನ್ ಗಂಜ್ನಲ್ಲಿ ನಡೆದಿದೆ.
ಕಗಾರಿಯಾ ಮತ್ತು ಭಗಲ್ಪುರ್ ನಡುವೆ ಸಂಪರ್ಕಕ್ಕಾಗಿ ಗಂಗಾ ನದಿಗೆ ಅಡ್ಡಲಾಗಿ ಈ ಬೃಹತ್ ಸೇತುವೆ ನಿರ್ಮಾಣವಾಗುತ್ತಿದೆ. ಚತುಷ್ಪಥ ರಸ್ತೆಗೆ ನಿರ್ಮಿಸಲಾಗುತ್ತಿರುವ ಸೇತುವೆ ನಿರ್ಮಾಣ ಹಂತದಲ್ಲಿದ್ದಾಗಲೇ ಶನಿವಾರ ಮುರಿದು ಬಿದ್ದಿದೆ.
ಸೇತುವೆ ನಿರ್ಮಾಣ ಹಂತದಲ್ಲೇ ಕುಸಿದು ಬಿದ್ದಿರುವುದರಿಂದ ಕಾಮಗಾರಿಯ ಗುಣಮಟ್ಟದ ಕುರಿತು ಸ್ಥಳೀಯ ಜೆಡಿ (ಯು ) ಶಾಸಕ ಆರೋಪಿಸಿದ್ದಾರೆ. ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಸೇತುವೆ ಕುಸಿದು ಬಿದ್ದಿರುವ ಕುರಿತು ತನಿಖೆಗೆ ಆದೇಶ ಮಾಡಿದ್ದಾರೆ.
ಐಪಿಎಲ್ನಲ್ಲಿ ಅತೀ ವೇಗದ ಬೌಲ್ ಎಸೆದು ಹೊಸ ದಾಖಲೆ ಬರೆದ ಉಮ್ರಾನ್ ಮಲಿಕ್ ; ಆ ಬಾಲ್ನ ವೇಗ ಎಷ್ಟಿತ್ತು ಗೊತ್ತೆ ?