Kannada NewsKarnataka News

ಬೆಳಗಾವಿ ನಗರದಲ್ಲಿ 2 ದಿನ ಸಂಚಾರ ಮಾರ್ಗ ಬದಲಾವಣೆ

 

 ಬಸವೇಶ್ವರ ಜಯಂತಿ &  ಶಿವಾಜಿ ಜಯಂತಿ ಮೆರವಣಿಗೆಗಳ ನಿಮಿತ್ಯ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬಸವೇಶ್ವರ ಮತ್ತು ಶಿವಾಜಿ ಜಯಂತಿ ಮೆರವಣಿಗೆಗಳ ಹಿನ್ನೆಲೆಯಲ್ಲಿ ಬೆಳಗಾವಿ ನಗರದಲ್ಲಿ ಸಂಚಾರ ಮಾರ್ಗಗಳನ್ನು ಬದಲಾವಣೆ ಮಾಡಿ ಪೊಲೀಸ್ ಆಯುಕ್ತರು ಆದೇಶ ಹೊರಡಿಸಿದ್ದಾರೆ.

ಮೇ 3 ಮತ್ತು 4ರಂದು ಸಂಚಾರ ಮಾರ್ಗಗಳ ಬದಲಾವಣೆ ಮಾಡಲಾಗಿದೆ.

೧. ದಿನಾಂಕ: ೦೩/೦೫/೨೦೨೨ ರಂದು ಬಸವೇಶ್ವರ ಜಯಂತಿ

ದಿನಾಂಕ: ೦೩/೦೫/೨೦೨೨ ರಂದು ಬೆಳಗಾವಿ ನಗರದಲ್ಲಿ ಜಗಜ್ಯೋತಿ ಶ್ರೀ ಬಸವೇಶ್ವರ ಜಯಂತಿ ಭಾವಚಿತ್ರ ಹಾಗೂ ರೂಪಕ ವಾಹನಗಳ ಮೆರವಣೆಗೆಯು ಚನ್ನಮ್ಮಾ ಸರ್ಕಲ್‌ದಿಂದ ಪ್ರಾರಂಭವಾಗಿ ಕಾಕತಿ ವೇಸ, ಶನಿವಾರ ಖೂಟ, ಗಣಪತಿ ಗಲ್ಲಿ, ಕಂಬಳಿ ಖೂಟ, ಮಾರುತಿ ಗಲ್ಲಿ, ರಾಮದೇವ ಗಲ್ಲಿ, ಸಮಾದೇವಿ ಗಲ್ಲಿ, ಯಂಡೆಖೂಟ, ಕಾಲೇಜ್ ರಸ್ತೆ ಮೂಲಕ ಜಿ. ಎ. ಹೈಸ್ಕೂಲ್ (ಲಿಂಗರಾಜ ಕಾಲೇಜ್) ಆವರಣದಲ್ಲಿ ಮುಕ್ತಾಯವಾಗುತ್ತದೆ.

ಈ ಸಮಯದಲ್ಲಿ ಸಾರ್ವಜನಿಕ ಸುಗಮ ಸಂಚಾರ ವ್ಯವಸ್ಥೆಗೆ ಅನುಗುಣವಾಗಿ ದಿನಾಂಕ: ೦೩/೦೫/೨೦೨೨ ರಂದು ಮುಂಜಾನೆ 8 ಗಂಟೆಯಿಂದ ಮೆರವಣಿಗೆ ಮುಕ್ತಾಯದವರೆಗೆ ಈ ಕೆಳಗೆ ನಮೂದಿಸಿದ ಮಾರ್ಗಗಳಲ್ಲಿ ಎಲ್ಲ ಮಾದರಿಯ ವಾಹನಗಳ ಸಂಚಾರವನ್ನು ನಿರ್ಬಂಧಿಸಿ ಮಾರ್ಗಗಳನ್ನು ಬದಲಿಸಲಾಗಿದೆ.

೧) ಕೆಎಲ್‌ಇ ರಸ್ತೆ, ಕೃಷ್ಣದೇವರಾಯ (ಕೋಲ್ಹಾಪೂರ) ಸರ್ಕಲ್ ಮುಖಾಂತರ ಚನ್ನಮ್ಮಾ ಸರ್ಕಲ್ ಕಡೆಗೆ ಸಂಚರಿಸುವ ಎಲ್ಲ ಮಾದರಿಯ ವಾಹನಗಳ ಚಾಲಕ/ಸವಾರರು ವಾಯ್-ಜಂಕ್ಷನ್ ಹತ್ತಿರ ಬಲತಿರುವು ಪಡೆದು ಲಕ್ಷ್ಮೀ ಕಾಂಪ್ಲೆಕ್ಸ್, ಸದಾಶಿವ ನಗರ, ಬ್ಯಾಂಕ್ ಆಫ್ ಮಹಾರಾಷ್ಟ್ರ, ವಿಶ್ವೇಶ್ವರಯ್ಯ ನಗರ ಬಾಚಿ ಕ್ರಾಸ್, ಕ್ಲಬ್ ರಸ್ತೆ ಮಾರ್ಗವಾಗಿ ಗಾಂಧಿ ಸರ್ಕಲ್ (ಅರಗನ ತಲಾಬ), ಶೌರ್ಯ ಸರ್ಕಲ್ (ಮಿಲ್ಟ್ರಿ ಆಸ್ಪತ್ರೆ), ಗ್ಲೋಬ್ ಥಿಯೇಟರ್ ಸರ್ಕಲ್ ಮುಖಾಂತರ ಮುಂದೆ ಸಾಗುವುದು.

೨) ಚನ್ನಮ್ಮಾ ಸರ್ಕಲ್ ಮುಖಾಂತರ ಕಾಲೇಜ್ ರಸ್ತೆ ಮಾರ್ಗವಾಗಿ ಬೋಗಾರವೇಸ್ ಕಡೆಗೆ ಸಂಚರಿಸುವ ಎಲ್ಲ ಮಾದರಿಯ ವಾಹನಗಳನ್ನು ಚನ್ನಮ್ಮ ಸರ್ಕಲ್ ಗಣೇಶ ಮಂದಿರ ಹಿಂದೆ ಸಾಗಿ ಕ್ಲಬ್ ರಸ್ತೆ, ಗಾಂಧಿ ಸರ್ಕಲ್ (ಅರಗನ ತಲಾಬ), ಶೌರ್ಯ ಚೌಕ (ಎಮ್.ಎಚ್. ಸರ್ಕಲ್), ಶರ್ಕತ ಪಾರ್ಕ, ಗ್ಲೋಬ್ ಥಿಯೇಟರ್ ಸರ್ಕಲ್ ಮುಖಾಂತರ ಮುಂದೆ ಸಾಗುವುದು.

೩) ಕೇಂದ್ರ ಬಸ್ ನಿಲ್ದಾಣ ಕಡೆಯಿಂದ ಖಡೇಬಜಾರ ರಸ್ತೆ ಮೂಲಕ ಶನಿವಾರ ಖೂಟ ಕಡೆಗೆ ಸಂಚರಿಸುವ ಎಲ್ಲ ಮಾದರಿಯ ವಾಹನಗಳನ್ನು ಕೇಂದ್ರ ಬಸ್ ನಿಲ್ದಾಣ ಹತ್ತಿರ ಬಲ/ಎಡ ತಿರುವು ಪಡೆದು ಆರ್‌ಟಿಓ ಸರ್ಕಲ್/ಹಳೆ ಪಿಬಿ ರಸ್ತೆ ಮುಖಾಂತರ ಸಾಗುವುದು.

೪) ಜೀಜಾಮಾತಾ ಸರ್ಕಲ್, ದೇಶಪಾಂಡೆ ಪೆಟ್ರೋಲ್ ಪಂಪ್ ಕಡೆಗಳಿಂದ ನರಗುಂದಕರ ಭಾವೆ ಚೌಕ/ಕಂಬಳಿ ಖೂಟ ಕಡೆಗೆ ಸಂಚರಿಸುವ ಎಲ್ಲ ಮಾದರಿಯ ವಾಹನಗಳು ರವಿವಾರ ಪೇಠ ಪಿಂಪಲ ಕಟ್ಟಾ ಹತ್ತಿರ ಎಡತಿರುವು ಪಡೆದುಕೊಂಡು ಪಾಟೀಲ ಗಲ್ಲಿ, ಸ್ಟೇಶನ್ ರಸ್ತೆ ಮಾರ್ಗವಾಗಿ ಖಾನಾಪೂರ ರಸ್ತೆಗೆ ಸೇರಿ ಮುಂದೆ ಸಾಗುವುದು.

೫) ಮೆರವಣೆಗೆ ಸಾಗುವ ಮಾರ್ಗವಾದ ಚನ್ನಮ್ಮಾ ಸರ್ಕಲ್‌ದಿಂದ ಕಾಕತಿವೇಸ, ಶನಿವಾರ ಖೂಟ, ಗಣಪತಿ ಗಲ್ಲಿ, ಕಂಬಳಿ ಖೂಟ, ಮಾರುತಿ ಗಲ್ಲಿ, ರಾಮದೇವ ಗಲ್ಲಿ, ಸಮಾದೇವಿ ಗಲ್ಲಿ, ಯಂಡೆಖೂಟ, ಕಾಲೇಜ್ ರಸ್ತೆಯ ಎರಡೂ ಬದಿಯ ರಸ್ತೆಗಳಲ್ಲಿ ಮುಂಜಾನೆ ೦೮.೦೦ ಗಂಟೆಯಿಂದ ರಾತ್ರಿ ೧೦.೦೦ ಗಂಟೆಯವರೆಗೆ ಎಲ್ಲ ಮಾದರಿಯ ವಾಹನ ನಿಲುಗಡೆ ನಿಷೇಧಿಸಲಾಗಿದೆ.

೬) ಮೆರವಣಿಗೆ ಮಾರ್ಗದಲ್ಲಿ ಎರಡು ಕ್ಯಾರೇಜ್ ವೇ ಇದ್ದ ಕಡೆಗಳಲ್ಲಿ ಒಂದು ಮಾರ್ಗವನ್ನು ಹಾಗೂ ಒಂದು ಕ್ಯಾರೇಜ್ ವೇ ಇದ್ದ ರಸ್ತೆಯನ್ನು ಸಂಪೂರ್ಣವಾಗಿ ಮೆರವಣಿಗೆಗೆ ಉಪಯೋಗಿಸಲಾಗುತ್ತದೆ.

೨. ದಿನಾಂಕ: ೦೪/೦೫/೨೦೨೨ ರಂದು  ಶಿವಾಜಿ ಜಯಂತಿ 

ದಿನಾಂಕ: ೦೪/೦೫/೨೦೨೨ ರಂದು ಛತ್ರಪತಿ  ಶಿವಾಜಿ ಮಹಾರಾಜರ ಜಯಂತಿ ಮೆರವಣಿಗೆಯು ನಗರದ ನರಗುಂದಕರ ಭಾವೆ ಚೌಕದಿಂದ ಪ್ರಾರಂಭವಾಗಿ ಮಾರುತಿ ಗಲ್ಲಿ, ಹುತಾತ್ಮ ಚೌಕ, ರಾಮದೇವ ಗಲ್ಲಿ, ಸಮಾದೇವಿ ಗಲ್ಲಿ, ಕಾಲೇಜ ರಸ್ತೆ, ಶ್ರೀ ಧರ್ಮವೀರ ಸಂಭಾಜಿ ಚೌಕ, ರಾಮಲಿಂಗಖಿಂಡಿ ಗಲ್ಲಿ ರಸ್ತೆ, ಸಮ್ರಾಟ ಅಶೋಕ ಚೌಕ, ಟಿಳಕ ಚೌಕ, ಹೇಮುಕಲಾನಿ ಚೌಕ, ಶನಿ ಮಂದಿರ, ಕಪಿಲೇಶ್ವರ ಓವರ ಬ್ರಿಜ್ ಮೂಲಕ ಕಪಿಲೇಶ್ವರ ಮಂದಿರದ ಬಳಿ ಮುಕ್ತಾಯಗೊಳ್ಳಲಿದೆ.
ಸದರಿ ದಿನ ಮದ್ಯಾಹ್ನ ೦೨-೦೦ ಗಂಟೆಯಿಂದ ಮೆರವಣಿಗೆ ಮುಕ್ತಾಯದವರೆಗೆ ಈ ಕೆಳಗಿನ ಮಾರ್ಗಗಳಲ್ಲಿ ಎಲ್ಲ ಮಾದರಿಯ ವಾಹನಗಳ ಸಂಚಾರವನ್ನು ನಿರ್ಬಂಧಿಸಿ ಮಾರ್ಗಗಳನ್ನು ಬದಲಿಸಲಾಗಿರುತ್ತದೆ.

೧) ಚನ್ನಮ್ಮಾ ಸರ್ಕಲ್ ಮಾರ್ಗವಾಗಿ ಕಾಲೇಜ್ ರಸ್ತೆ ಮುಖಾಂತರ ಖಾನಾಪೂರ ಕಡಗೆ ಸಾಗುವ ಎಲ್ಲ ಮಾದರಿಯ ವಾಹನಗಳ ಚಾಲಕ/ಸವಾರರು ಚನ್ನಮ್ಮಾ ಸರ್ಕಲ್ ಗಣೇಶ ಮಂದಿರ ಹಿಂದೆ ಬಲತಿರುವ ಪಡೆದುಕೊಂಡು ಕ್ಲಬ್ ರಸ್ತೆ ಮೂಲಕ, ಗಾಂಧಿ ಸರ್ಕಲ್ (ಅರಗನ ತಲಾಬ), ಶೌರ್ಯ ಚೌಕ (ಮಿಲ್ಟ್ರಿ ಆಸ್ಪತ್ರೆ). ಕೇಂದ್ರಿಯ ವಿದ್ಯಾಲಯ ನಂ.೨, ಶರ್ಕತ್ ಪಾರ್ಕ, ಗ್ಲೋಬ್ ಥಿಯೇಟರ್ ಸರ್ಕಲ್ ಮೂಲಕ ಖಾನಾಪೂರ ರಸ್ತೆಗೆ ಸೇರಿ ಮುಂದೆ ಸಾಗುವುದು.

೨) ಜೀಜಾಮಾತಾ ಸರ್ಕಲ್ ದಿಂದ ದೇಶಪಾಂಡೆ ಪೆಟ್ರೋಲ್ ಪಂಪ್, ನರಗುಂದಕರ ಭಾವೆ ಚೌಕ, ಕಂಬಳಿ ಖೂಟ, ಪಿಂಪಲ ಕಟ್ಟಾ, ಪಾಟೀಲ ಗಲ್ಲಿ ಕಡೆಗೆ ಸಂಚರಿಸುವ ಎಲ್ಲ ಮಾದರಿಯ ವಾಹನಗಳು ಜೀಜಾ ಮಾತಾ ಸರ್ಕಲ್‌ದಿಂದ ನೇರವಾಗಿ ಹಳೆ ಪಿಬಿ ರಸ್ತೆಯ ಮೂಲಕ ಮುಂದೆ ಸಾಗುವುದು.

೩) ಮೆರವಣೆಗೆ ಸಾಗುವ ಮಾರ್ಗವಾದ ನರಗುಂದಕರ ಭಾವೆ ಚೌಕ, ಮಾರುತಿ ಗಲ್ಲಿ, ಹುತಾತ್ಮ ಚೌಕ, ರಾಮದೇವ ಗಲ್ಲಿ, ಸಮಾದೇವಿ ಗಲ್ಲಿ, ಕಾಲೇಜ ರಸ್ತೆ, ಧರ್ಮವೀರ ಸಂಭಾಜಿ ಚೌಕ, ರಾಮಲಿಂಗಖಿಂಡ ಗಲ್ಲಿ ರಸ್ತೆ, ಟಿಳಕಚೌಕ, ಹೇಮುಕಾಲನಿ ಚೌಕ, ಶನಿಮಂದಿರ, ಕಪಿಲೇಶ್ವರ ಓವರ ಬಿಜ್, ಕಪಿಲೇಶ್ವರ ಮಂದಿರದ ಎರಡೂ ಬದಿಯ ರಸ್ತೆಗಳಲ್ಲಿ ಮದ್ಯಾಹ್ನ ೦೨-೦೦ ಗಂಟೆಯಿಂದ ಮೆರವಣಿಗೆ ಮುಕ್ತಾಯದವರೆಗೆ ಎಲ್ಲ ರೀತಿಯ ವಾಹನ ನಿಲುಗಡೆಯನ್ನು ನಿಷೇಧಿಸಲಾಗಿದೆ.

೪) ನಾಥಪೈ ಸರ್ಕಲ್ ಕಡೆಯಿಂದ ಬ್ಯಾಂಕ ಆಫ್ ಇಂಡಿಯಾ ಮಾರ್ಗವಾಗಿ ಕಪಿಲೇಶ್ವರ ರೇಲ್ವೆ ಓವರ್ ಬ್ರಿಜ್ ಮುಖಾಂತರ ಸಂಚರಿಸುವ ಎಲ್ಲ ಮಾದರಿಯ ವಾಹನಗಳು ಎಸ್‌ಪಿಎಮ್ ರಸ್ತೆ ಭಾತಖಾಂಡೆ ಸ್ಕೂಲ್ ಕ್ರಾಸ್‌ದಲ್ಲಿ ಬಲತಿರುವು ಪಡೆದುಕೊಂಡು ಕಪಿಲೇಶ್ವರ ಕಾಲನಿ ಮುಖಾಂತರ ವಿಆರ್‌ಎಲ್ ಲಾಜಿಸ್ಟಿಕ್ ಸೇರಿ ಮುಂದೆ ಸಾಗುವುದು.

೫) ಹಳೆ ಪಿಬಿ ರಸ್ತೆ, ವ್ಹಿ.ಆರ್.ಎಲ್ ಲಾಜಿಸ್ಟಿಕ್, ಭಾತಖಾಂಡೆ ಸ್ಕೂಲ್ ಮಾರ್ಗವಾಗಿ ಕಪಿಲೇಶ್ವರ ರೇಲ್ವೆ ಓವರ್ ಬ್ರಿಜ್ ಮುಖಾಂತರ ಸಂಚರಿಸುವ ಎಲ್ಲ ಮಾದರಿಯ ವಾಹನಗಳು ಭಾತಖಾಂಡೆ ಸ್ಕೂಲ್ ಕ್ರಾಸ್ ಹತ್ತಿರ ಎಡತಿರುವ ಪಡೆದುಕೊಂಡು ಶಿವಾಜಿ ಗಾರ್ಡನ, ಬ್ಯಾಂಕ್ ಆಫ್ ಇಂಡಿಯಾ ಕ್ರಾಸ್, ಮಹಾತ್ಮಾ ಫುಲೆ ರಸ್ತೆ ಮಾರ್ಗವಾಗಿ ಮುಂದೆ ಸಾಗುವದು.

೬) ಹಳೆ ಪಿಬಿ ರಸ್ತೆ, ಯಶ ಆಸ್ಪತ್ರೆ, ಮಹಾದ್ವಾರ ರಸ್ತೆ, ಕಪಿಲೇಶ್ವರ ಮಂದಿರ ಮೂಲಕ ರೇಲ್ವೆ ಓವರ್ ಬ್ರಿಜ್ ಕಡೆಗೆ ಸಾಗುವ ಎಲ್ಲ ಮಾದರಿಯ ವಾಹನಗಳು ಯಶ್ ಆಸ್ಪತ್ರೆ ಹತ್ತಿರ ಎಡ/ಬಲ ತಿರುವು ಪಡೆದುಕೊಂಡು ಭಾತಕಾಂಡೆ ಸ್ಕೂಲ್/ತಾನಾಜಿ ಗಲ್ಲಿ ರೇಲ್ವೆ ಗೇಟ ಮೂಲಕ ಮುಂದೆ ಸಾಗುವದು.

೭) ಗೂಡ್ಸ್ ಶೆಡ್ ರಸ್ತೆ ಮೂಲಕ ಕಪಿಲೇಶ್ವರ ಓವರ್ ಬ್ರಿಜ್ ಕಡೆಗೆ ಸಂಚರಿಸುವ ಎಲ್ಲ ಮಾದರಿಯ ವಾಹನಗಳು ಎಸ್‌ಪಿಎಮ್ ರಸ್ತೆ ಕಡೆಗೆ ಸಂಚರಿಸದೇ ಮರಾಠಾ ಮಂದಿರ ಗೋವಾ ವೇಸ್ ಸರ್ಕಲ್ ಕಡೆಗೆ ಸಂಚರಿಸುವುದು.

೮) ಖಾನಾಪೂರ ರಸ್ತೆ, ಬಿಎಸ್‌ಎನ್‌ಎಲ್ ಕಚೇರಿ ಕ್ರಾಸ್, ಸ್ಟೇಶನ್ ರಸ್ತೆ ಹಾಗೂ ಗೋಗಟೆ ಸರ್ಕಲ್ ಕಡೆಯಿಂದ ರೇಲ್ವೆ ಸ್ಟೇಶನ, ಹೆಡ್ ಪೋಸ್ಟ್ ಆಫೀಸ್ ಸರ್ಕಲ್ ಮೂಲಕ ಶನಿ ಮಂದಿರ ಕಡೆಗೆ ಸಂಚರಿಸುವ ಎಲ್ಲ ಮಾದರಿ ವಾಹನಗಳು ಗ್ಲೋಬ್ ಸರ್ಕಲ್ ಹತಿರ ಎಡ ತಿರುವ ಪಡೆದುಕೊಂಡು, ಶರ್ಕತ್ ಪಾರ್ಕ, ಕೇಂದ್ರಿಯ ವಿದ್ಯಾಲಯ ನಂ.೨, ಶೌರ್ಯ ಚೌಕ (ಮಿಲ್ಟ್ರಿ ಆಸ್ಪತ್ರೆ). ಗಾಂಧಿ ಸರ್ಕಲ್ (ಅರಗನ ತಲಾಬ), ಕ್ಲಬ್ ರಸ್ತೆ, ಚನ್ನಮ್ಮಾ ಸರ್ಕಲ್ ಸೇರಿ ಮುಂದೆ ಸಾಗುವುದು.
ಸಂಪೂರ್ಣ ವಿವರಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ –
Traffic Diversion Press Note 02.05.22

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button