ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಇಂದು ಅಕ್ಷಯ ತೃತೀಯ. ಈ ಶುಭ ದಿನದಂದು ಆಭರಣ ಖರೀದಿಗಾಗಿ ಜನರು ಕಾತರರಾಗಿದ್ದಾರೆ. ಶುಭದಿನದಂದೆ ಚಿನ್ನ-ಬೆಳ್ಳಿ ದರದಲ್ಲಿಯೂ ಕೊಂಚ ಇಳಿಕೆಯಾಗಿರುವುದು ಇಂದು ಬಂಗಾರ ಖರೀದಿಸುವವರಿಗೆ ಶುಭ ಸುದ್ದಿಯಾಗಿದೆ.
ಇಂದು ಚಿನ್ನ ಖರೀದಿಸುವವರ ಸಂಖ್ಯೆ ಹೆಚ್ಚಿರುತ್ತದೆ. ಈ ನಡುವೆ ಬಂಗಾರದ ಬೆಲೆ ಕುಸಿತಗೊಂಡಿರುವುದು ಸಂತಸದ ವಿಚಾರ. ಇಂದು ಚಿನ್ನದ ದರ 1280 ರೂ ಕುಸಿತಗೊಂಡಿದ್ದರೆ, ಬೆಳ್ಳಿ ದರ 800 ರೂ ಕುಸಿತಗೊಂಡಿದೆ.
ದೇಶದಲ್ಲಿ 22 ಕ್ಯಾರೆಟ್ 10ಗ್ರಾ ಚಿನ್ನ ಇಂದು 47,200 ರೂ ಆಗಿದೆ. 24 ಕ್ಯಾರೆಟ್ ಚಿನ್ನ 51,510 ರೂ ಆಗಿದೆ.
ರಾಜಧಾನಿ ಬೆಂಗಳೂರಿನಲ್ಲಿ 22 ಕ್ಯಾರಟ್ 10 ಗ್ರಾಂ ಚಿನದ ದರ 47,200 ರೂ ಆಗಿದೆ. 24 ಕ್ಯಾರೆಟ್ ಚಿನ್ನದ ದರ 51,510 ರೂ ಆಗಿದೆ.
ಇನ್ನು ಹಲವು ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಇಂದಿನ ದರ ಚೆನ್ನೈ- 48,160 ರೂ. ದೆಹಲಿ- 47,200 ರೂ, ಹೈದರಾಬಾದ್- 47,200 ರೂ, ಪುಣೆ – 47,280 ರೂ ಆಗಿದೆ. ಮೈಸೂರು 47,200 ರೂ ಆಗಿದೆ.
24 ಕ್ಯಾರೆಟ್ ಚಿನ್ನ ಚೆನ್ನೈ- 52,540 ರೂ, ದೆಹಲಿ- 51,510 ರೂ, ಕೊಲ್ಕತ್ತಾ- 51,510 ರೂ, ಹೈದರಾಬಾದ್- 51,510 ರೂ, ಪುಣೆ- 51,590 ರೂ.ಆಗಿದೆ. ಮೈಸೂರು-51,510 ರೂ ಆಗಿದೆ.
ಇಂದು ಭಾರತದಲ್ಲಿ ಬೆಳ್ಳಿದರ ಕೆಜಿಗೆ 63,500 ರೂ ಆಗಿದೆ. ಇಂದು ಭಾರತದಲ್ಲಿ ಬೆಳ್ಳಿದರ ಕೆಜಿಗೆ 63,500 ರೂ ಆಗಿದೆ. ದೇಶದ ಮಹಾನಗರಳಲ್ಲಿ ಬದಲಾವಣೆ ಕಂಡುಬಂದಿದ್ದು, ಬೆಂಗಳೂರಿನಲ್ಲಿ ಕೆಜಿ ಬೆಳ್ಳಿಗೆ 67,000 ರೂ ಆಗಿದೆ. ಮುಂಬೈ 62,300 ರೂ, ಚೆನ್ನೈನಲ್ಲಿ 67,000 ರೂ, ಮಂಗಳೂರು 67,600 ರೂ ಇದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ