Kannada NewsKarnataka NewsLatest

ಅಭಿವೃದ್ಧಿ ಕೆಲಸಗಳ ಮೂಲಕ ಜನರ ಋುಣ ತೀರಿಸುವ ಪ್ರಯತ್ನ ಮಾಡುತ್ತಿದ್ದೇನೆ – ಲಕ್ಷ್ಮಿ ಹೆಬ್ಬಾಳಕರ್​

ಪ್ರಗತಿವಾಹಿನಿ ಸುದ್ದಿ, ​ಬೆಳಗಾವಿ – ಮರಡಿನಾಗಲಾಪೂರ ಗ್ರಾಮದ ಗ್ರಾಮದೇವಿ ಜಾತ್ರಾ ನಿಮಿತ್ತವಾಗಿ ಬುಧವಾರ ಆಯೋಜಿಸಲಾಗಿದ್ದ ಉಡಿ ತುಂಬುವ ಕಾರ್ಯಕ್ರಮದಲ್ಲಿ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಭಾಗವಹಿಸಿದ್ದರು.
 ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮರಡಿನಾಗಲಾ​ಪು​ರ ಜನರ ಪ್ರೀತಿ, ಅಭಿಮಾನವನ್ನು ನೋಡಿದರೆ ನಾನು ನನ್ನ ತವರೂರಿಗೆ ಬಂದಿ​ದ್ದೇನೆ ಎಂಬಂತೆ ಭಾಸವಾಗುತ್ತಿ​ದೆ​ ನಿಮ್ಮ ಪ್ರೀತಿ, ಪ್ರೋತ್ಸಾಹ, ಆಶೀರ್ವಾದಕ್ಕೆ ಬೆಲೆ ಕಟ್ಟಲಾಗದು. ಕ್ಷೇತ್ರದೆಲ್ಲೆಡೆ ಜನರು ನನ್ನನ್ನು ಮನೆ ಮಗಳಂತೆ ಕಾಣುತ್ತಿದ್ದಾರೆ. ಎಲ್ಲೇ ಹೋದರೂ ಜನರ ಪ್ರೀತಿ, ಸತ್ಕಾರ, ಆಶಿರ್ವಾದ ಕಂಡು ನಾನು ಮೂಖವಿಸ್ಮಿತನಾಗಿದ್ದೇನೆ. ಅಭಿವೃದ್ಧಿ ಕೆಲಸಗಳ ಮೂಲಕ ಜನರ ಋಣ ತೀರಿಸುವ ಪ್ರಯತ್ನ ಮಾಡುತ್ತಿದ್ದೇನೆ ಎಂದು ಭಾವುಕರಾಗಿ ನುಡಿದರು.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ದೇವಸ್ಥಾನದ ಟ್ರಸ್ಟ್ ಕಮೀಟಿಯ ಅಧ್ಯಕ್ಷ ಕರಬಸಪ್ಪ ಚಿನ್ನಪ್ಪಗೌಡರ, ಗ್ರಾಮ ಜಾಗೃತ ನೌಕರ ವೇದಿಕೆಯ ಅಧ್ಯಕ್ಷ ಗುರುಸಿದ್ದಪ್ಪ ಸತ್ಯಣ್ಣವರ, ಶಿಕ್ಷಕರಾದ ಉಮೇಶ ಚಿನ್ನಪ್ಪಗೌಡರ, ಶಿವಾನಂದ ಪಾಟೀಲ, ಬಸಲಿಂಗಪ್ಪ ಹುಲಿಕಟ್ಟಿ, ಶಿಕ್ಷಕರ ಸಂಘದ ಜಿಲ್ಲಾ ಕಾರ್ಯದರ್ಶಿ ರಮೇಶ ಗೋಣಿ, ಮೋಹನ ಕರೆಣ್ಣವರ, ಭೀಮಪ್ಪ ನರಸಣ್ಣವರ, ಮಾಜಿ ಸೈನಿಕರಾದ ರಾಮಪ್ಪ ವಿಭೂತಿ, ಮಲ್ಲೇಶಪ್ಪ ಮಾಟಿ, ಮಾರುತಿ ವಿಭೂತಿ, ಎಲ್ಲ ಸಂಘಗಳ ಪದಾಧಿಕಾರಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button