Kannada NewsLatest

ಹುಕ್ಕೇರಿ ಹಿರೇಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದ ಹಿರಿಯ ನಟ ದೊಡ್ಡಣ್ಣ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಹುಕ್ಕೇರಿ ಹಿರೇಮಠ ಸರ್ವಧರ್ಮದವರನ್ನು ಅಪ್ಪಿಕೊಳ್ಳುವ ಮಠ. ಮಾನವ ಧರ್ಮಕ್ಕೆ ಜಯವಾಗಲಿ ಎನ್ನುವ ದೊಡ್ಡತನ ಇದಕ್ಕೆ ಇದೆ ಎಂದು ಹಿರಿಯ ನಟ ದೊಡ್ಡಣ್ಣ ಅಭಿಪ್ರಾಯ ಪಟ್ಟರು.

ನಗರದ ಲಕ್ಷ್ಮೀ ಟೆಕಡಿಯಲ್ಲಿರುವ ಹುಕ್ಕೇರಿ ಹಿರೇಮಠದ ಶಾಖಾ ಮಠಕ್ಕೆ 860 ಚಲನ ಚಿತ್ರಗಳಲ್ಲಿ ನಟಿಸಿರುವ ಹಾಸ್ಯ ಕಲಾವಿದ, ನಟ ದೊಡ್ದಣ್ಣ ಅವರು ಆಗಮಿಸಿ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹಾಗೂ ಕನ್ನಡ ಸಂಘಟನೆಗಳ ಕ್ರೀಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಅವರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಎಲ್ಲಾ ಮಠಗಳೆ ಬೇರೆ ಹುಕ್ಕೇರಿ ಹಿರೇಮಠ ಬೇರೆ. ಹುಕ್ಕೇರಿ ಹಿರೇಮಠದ ಒಂದು ಅಪರೂಪದ ಘೋಷಣೆ ಮಾನವ ಧರ್ಮಕ್ಕೆ ಜಯವಾಗಲಿ ಎನ್ನುವುದು.

ಇಲ್ಲಿ ಬಂದಾಗ ನನಗೆ ಸಂತೃಪ್ತಿಯಾಯಿತು. ಗುರುಗಳ ಆಶೀರ್ವಾದ ಪಡೆದು ನಾನು ಇನ್ನೂ ಹೆಚ್ಚಿನ ಕಾರ್ಯ ಮಾಡಬಲ್ಲೆ ಎಂಬ ದೈರ್ಯ ಬಂದಿತು ಎಂದರು.

ಬೆಳಗಾವಿಯಲ್ಲಿ ಕನ್ನಡ ಸಂಘಟನೆಯೊಂದಿಗೆ ಹುಕ್ಕೇರಿ ಹಿರೇಮಠ ಬೆರೆತು ನಾಡು, ನುಡಿ, ಸಂಸ್ಕೃತಿಯ ಬಗ್ಗೆ ನಿರಂತರವಾಗಿ ಶ್ರಮಿಸುತ್ತಿರುವ ಶ್ರೀಗಳ ಕಾರ್ಯ ಮೆಚ್ವಲೆ ಬೇಕು ಎಂದರು.

ಪ್ರಸ್ತಾವಿಕವಾಗಿ ಮಾತನಾಡಿದ ಕನ್ನಡ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ, ದೊಡಣ್ಣನವರು ಬೆಳಗಾವಿಗೆ ಬರಬೇಕು. ನಮ್ಮ ಆಥಿತ್ಯವನ್ನು ಸ್ವೀಕರಿಸಬೇಕು ಎನ್ನುವ ಇಚ್ಚೆ ತುಂಬಾ ದಿನದಿಂದ ಇತ್ತು. ಇವತ್ತು ಹುಕ್ಕೇರಿ ಹಿರೇಮಠದಲ್ಲಿ ನೆರವೆರಿರುವುದು ನಮಗೆ ಸಂತೋಷ ತಂದಿದೆ ಎಂದರು.

ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಹಿರಿಯ ನಟ ದೊಡ್ಡಣ್ಣನವರು ಕೇವಲ ಚಲನಚಿತ್ರದಲ್ಲಿ ಮಾತ್ರ ನಟಿಸಿ ಕುಳಿತಿಲ್ಲ. ಅವರು, ಎಲ್ಲರೊಂದಿಗೆ ಬೆರೆತು ಸಾಮಾಜಿಕ ಕೆಲಸವನ್ನು ಮಾಡುತ್ತಿದ್ದಾರೆ. ಆಧ್ಯಾತ್ಮ ಜೀವಿಯೂ ಕೂಡ ಎಂದರು.

ಬೆಳಗಾವಿ ಯುವ ಕಾಂಗ್ರೆಸ್ ಉಪಾಧ್ಯಕ್ಷ ಮೃಣಾಲ್ ಹೆಬ್ಬಾಳ್ಕರ್ ಮಾತನಾಡಿ, ಇವತ್ತು ನಾವು ಹುಕ್ಕೇರಿ ಹಿರೇಮಠದಲ್ಲಿ ಸೇರಿದ್ದೇವೆ. ಕಾರಣ ಹುಕ್ಕೇರಿಯ ಹಿರೇಮಠ ಎಲರನ್ನೂ ಒಪ್ಪಿಕೊಳ್ಳುವ ಅಪರೂಪದ ಮಠ ಎಂದರು.

ಅಲ್ಪ ಅಸಂಖ್ಯಾತರ ನಿಗಮ ಮಂಡಳಿ ಅಧ್ಯಕ್ಷ ಮುಕ್ತಾರ ಹುಸೇನ್ ಪಠಾಣ ಮಾತನಾಡಿ, ನಟ ಡೊಡ್ಡಣ್ಣನವರು ಸುವಿಚಾರ ಚಿಂತನ ಬಳಗದ ೫೪ನೇ ಸುವಿಚಾರದ ಸವಿ ನೆನಪಿನಲ್ಲಿ ಸನ್ಮಾನ ಸ್ವೀಕರಿಸಿ ಬೆಳಗಾವಿಗೆ ಸಂತೃಪ್ತಿ ನೀಡಿದ್ದಾರೆ ಎಂದರು.

ನಟ ಅಂಬರೀಶ್ ಅವರ ಒಡನಾಡಿ ನಾರಾಯಣ ಕಲಾಲ್ ಅವರಿಗೆ ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಪ್ರಾಸ್ತಾವಿಕವಾಗಿ ವೀರುಪಾಕ್ಷಯ್ಯ ನೀರಲಗಿಮಠ, ಕಾರ್ಯಕ್ರಮವನ್ನು ಶಂಕರ ಬಾಗೇವಾಡಿ ನಿರೂಪಿಸಿದರು.

50 ಲಕ್ಷ ರೂ. ವೆಚ್ಚದಲ್ಲಿ ಗಾರ್ಡನ್ ಅಭಿವೃದ್ಧಿ – ಮೃಣಾಲ ಹೆಬ್ಬಾಳಕರ್

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button