Kannada NewsLatest

ಶಿವ-ಬಸವ ಜಯಂತಿ; ಭವ್ಯ ಶೋಭಾಯಾತ್ರೆಯಲ್ಲಿ ಚೆಂಡಿವಾದ್ಯ ಭಾರಿಸಿದ ಸಚಿವೆ ಶಶಿಕಲಾ ಜೊಲ್ಲೆ

ಪ್ರಗತಿವಾಹಿನಿ ಸುದ್ದಿ; ನಿಪ್ಪಾಣಿ: ಶಿವ-ಬಸವ ಜಯಂತಿ ಅಂಗವಾಗಿ ಜೊಲ್ಲೆ ಉದ್ಯೋಗ ಸಮೂಹವು ನಗರದಲ್ಲಿ ಶನಿವಾರ ಆಯೋಜಿಸಿದ್ದ ಭವ್ಯ ಶೋಭಾಯಾತ್ರೆಯಲ್ಲಿ ನಗರವು ಕೇಸರಿಮಯಗೊಂಡು ಕಂಗೋಳಿಸುತ್ತಿತ್ತು. ಈ ಅಭುತಪೂರ್ವ ಕ್ಷಣಕ್ಕೆ ನಗರ ಮತ್ತು ಹಳ್ಳಿ ಹಳ್ಳಿಗಳಿಂದ ಆಗಮಿಸಿದ ಸಾವಿರಾರು ಶಿವ-ಬಸವ ಭಕ್ತರು ಸಾಕ್ಷಿಯಾದರು. ಶೋಭಾಯಾತ್ರೆ ಹಿನ್ನಲೆಯಲ್ಲಿ ನಗರದ ಛತ್ರಪತಿ ಶಿವಾಜಿ ವೃತ್ತ ಮತ್ತು ಪ್ರಮುಖ ಬೀದಿಗಳಲ್ಲಿ ಸಂಭ್ರಮ ಸಡಗರ ಮನೆಮಾಡಿತ್ತು.

ಶಿವ-ಬಸವ ಜಯಂತಿ ನಿಮಿತ್ಯ ಆಯೋಜಿಸಿರುವ ಭವ್ಯ ಶೋಭಾಯಾತ್ರೆಗೆ ಸಂಸದ ಅಣ್ಣಾಸಾಹೇಬ ಜೊಲ್ಲೆ, ಮುಜರಾಯಿ, ಹಜ್ ಮತ್ತು ವಕ್ಫ ಸಚಿವೆ ಶಶಿಕಲಾ ಜೊಲ್ಲೆ, ಮ್ಯಾಗ್ನಮ್ ಟಫ್ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ಬಸವಪ್ರಸಾದ ಜೊಲ್ಲೆ ಶಿವ-ಬಸವ ಪ್ರತಿಮೆಗಳಿಗೆ ವಿಧಿ-ವಿಧಾನಗಳ ಮೂಲಕ ಪೂಜೆ ಸಲ್ಲಿಸಿ ಚಾಲನೆ ನೀಡಿದರು.

ಸಂಜೆ ಆರಂಭಗೊಂಡ ಈ ಐತಿಹಾಸಿಕ ಶೋಭಾಯಾತ್ರೆಯ ವಿಶೇಷ ಅಲಂಕೃತ ವಾಹನದಲ್ಲಿ ಸ್ಥಾಪಿಸಲಾಗಿದ್ದ ಶಿವ-ಬಸವ ಪ್ರತಿಮೆಗಳು ನೆರೆದವರ ಕಣ್ಮನ ಸೆಳೆದವು. ಆನೆ, ಕುದುರೆಗಳು ಮತ್ತು 20ಕ್ಕೂ ಅಧಿಕ ರೂಪಕಗಳ ಮೆರವಣಿಗೆ ಸಾಗುವಾಗ ರಸ್ತೆಯ ಇಕ್ಕೆಲಗಳಲ್ಲಿ ನಗರದ ಜನತೆ ವೈಭವವನ್ನು ಕಣ್ತುಂಬಿಕೊಂಡು ಪುಷ್ಪವೃಷ್ಟಿ ಮಾಡಿದರು.

ಸುಮಾರು 200ಕ್ಕೂ ಅಧಿಕ ಮಹೀಳೆಯು ತಮ್ಮ ತಮ್ಮ ಮನೆಗಗಳ ಮುಂದೆ ಬಣ್ಣ ಬಣ್ಣದ ರಂಗೋಲಿಗಳನ್ನು ಬಿಡಿಸಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಮೆರವಣಿಗೆಯಲ್ಲಿ ಸ್ಥಳೀಯ ಸೇರಿದಂತೆ ರಾಜ್ಯ, ಕೇರಳ, ತಾಮಿಳನಾಡು, ಆಂದ್ರಪ್ರದೇಶ ಮೊದಲಾದ ರಾಜ್ಯಗಳಲ್ಲಿಯ ಸ್ಥಬ್ಧಚಿತ್ರನಗಳು ಸೇರಿದಂತೆ ಚೆಂಡಿ ವಾದ್ಯ, ನವಿಲು ಕುಣಿತ, ಕುದುರೆ ಕುಣಿತ, ಪಾತರಗಿತ್ತಿ ಕುಣಿತ, ಝಾಂಜ ಪಥಕ, ಡೊಳ್ಳು ಪಥಕಗಳು ನೋಡುಗರನ್ನು ಮನಸುರೆಗೊಳಿಸಿದರವು.

ಭವ್ಯ ಶೋಭಾಯಾತ್ರೆಯಲ್ಲಿ ಸಚಿವೆ ಶಶಿಕಲಾ ಜೊಲ್ಲೆ ಚೆಂಡಿವಾದ್ಯವನ್ನು ಬಾರಿಸಿದರು. ಶೋಭಾಯಾತ್ರೆಯಲ್ಲಿ ಪಾತರಗಿತ್ತಿ ಕುಣಿತ ಗಮನ ಸೆಳೆಯಿತು.

ಶಾಲಾ ಮಕ್ಕಳುಗಳ ಬಸವೇಶ್ವರ, ಅಕ್ಕಮಹಾದೇವಿ, ಶಿವಾಜಿ ಮಹಾರಾಜರ ರೂಪಕಗಳು ಸಹ ಗಮನ ಸೆಳೆದವು. ಮಹಾತ್ಮ ಬಸವೇಶ್ವರ ಹಾಗೂ ಛತ್ರಪತಿ ಶಿವಾಜಿ ಮಹಾರಾಜರ ವೇಶಧರಿಸಿ ಆನೆಯ ಅಂಬಾರಿ ಮೇಲೆ ಸವಾರರಾಗಿದ್ದ ಪುಟಾಣಿಗಳು ಜನಾಕರ್ಷಣೆಯ ಕೇಂದ್ರಬಿಂದುವಾಗಿದ್ದರು.

ಶೋಭಾಯಾತ್ರೆಯಲ್ಲಿ ವಿರುಪಾಕ್ಷಲಿಂಗ ಸಮಾಧಿ ಮಠದ ಪ್ರಾಣಲಿಂಗ ಸ್ವಾಮೀಜಿ, ಸ್ಥಳಿಯ ಶ್ರೀ ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆಯ ಚೇರ್ಮನ್ ಸಹಕಾರ ರತ್ನ ಚಂದ್ರಕಾಂತ ಕೋಠಿವಾಲೆ, ಮಲಗೊಂಡ ಪಾಟೀಲ, ರಾಮಗೋಂಡ ಪಾಟೀಲ, ಜ್ಯೋತಿಪ್ರಸಾದ ಜೊಲ್ಲೆ, ನಗರಸಭೆ ಅಧ್ಯಕ್ಷ ಜಯವಂತ ಭಾಟಲೆ, ಉಪಾಧ್ಯಕ್ಷೆ ನೀತಾ ಬಾಗಡೆ, ಸ್ಥಾಯಿ ಸಮಿತಿ ಚೇರ್ಮನ್ ರಾಜೇಂದ್ರ ಗುಂಡೆಶಾ ಮತ್ತು ಸದಸ್ಯರು, ಚಂದ್ರಕಾಂತ ತಾರಳೆ, ಸುರೇಶ ಶೆಟ್ಟಿ, ದೀಲಿಪ ಚವ್ಹಾಣ, ಪ್ರಣವ ಮಾನವಿ, ಬಂಡಾ ಘೋರ್ಪಡೆ ಮತ್ತು ಬಿಜೆಪಿ ಕಾರ್ಯಕರ್ತರು ಪಾಲ್ಗೊಂಡಿದ್ದರು.

ಪಂ.ಪುಟ್ಟರಾಜರ ಮಾಸದ ನೆನಪಿನಲ್ಲಿ ಸಂಗೀತ ಶಿವಾನುಭವ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button