Kannada NewsLatest

ಬೆಳಗಾವಿ: ಶ್ರೀನಗರ ಹಾಗೂ ವಂಟಮುರಿ ಅರಣ್ಯ ಪ್ರದೇಶ ಐಟಿ, ಬಿಟಿಗೆ ಹಸ್ತಾಂತರಕ್ಕೆ ಸ್ಥಳೀಯರ ವಿರೋಧ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಮಾಳಮಾರುತಿ ವ್ಯಾಪ್ತಿಯಲ್ಲಿ ಬರುವ ವಂಟಮುರಿ ಕಾಲೋನಿ , ಶ್ರೀನಗರ ಹಾಗೂ ಕಾಕತಿಯಲ್ಲಿರುವ 745 ಎಕರೆ ಅರಣ್ಯ ಪ್ರದೇಶವು ರಕ್ಷಣಾ ಇಲಾಖೆಗೆ ಸಂಬಂಧಪಟ್ಟ ಪ್ರದೇಶವನ್ನು ಐಟಿ. ಮತ್ತು ಬಿ.ಟಿ. ಖಾಸಗಿ ಕಂಪನಿಗಳಿಗೆ ಹಸ್ತಾಂತರ ಮಾಡಬಾರದೆಂದು ಆಗ್ರಹಿಸಿ ಇಲ್ಲಿನ ಸ್ಥಳೀಯರು ಸೋಮವಾರ ಶ್ರೀನಗರ ಸಾಯಿ ಬಾಬಾ ಮಂದಿರದಿಂದ ಪಾದಯಾತ್ರೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ಮನವಿ ಸಲ್ಲಿಸಿದರು.

745 ಎಕರೆ ಪ್ರದೇಶದಲ್ಲಿ ಸರ್ಕಾರದವರು ಕೊಟ್ಯಾಂತರ ರೂ . ಖರ್ಚು ಮಾಡಿ ವಿವಿಧ ರೀತಿಯ ಮರಗಳನ್ನು ನೆಟ್ಟು ಸಂರಕ್ಷಿಸಿ ಬೆಳೆಸಿದ್ದು , ಸದರಿ ಮರಗಳು ಈಗ ಮುಗಿಲೆತ್ತರಕ್ಕೆ ಬೆಳೆದಿರುತ್ತವೆ . 745 ಎಕರೆ ಅರಣ್ಯ ಪ್ರದೇಶವು ಬೆಳಗಾವಿ ನಾಗರಿಕರಿಗೆ ಸುಂದರ ನಿಸರ್ಗ ಪ್ರದೇಶವಾಗಿದ್ದು , ಅರಣ್ಯ ಪ್ರದೇಶವು ಸುತ್ತಮುತ್ತನ ನಾಗರಿಕರಿಗೆ ಒಳ್ಳೆಯ ಆಮ್ಲಜನಕ ಒದಗಿಸಿಸುತ್ತಿವೆ . ಅದು ಅಲ್ಲದೇ ಪ್ರತಿ ವರ್ಷ ಸರ್ಕಾರದವರು ಕಾಡು ಉಳಿಸಿ ನಾಡು – ಬೆಳಸಿ ಕಾರ್ಯಕ್ರಮಕ್ಕೆ ಕೊಟ್ಯಾಂತರ ಹಣ ಖರ್ಚು ಮಾಡುತ್ತಿದೆ . ಕಾಯ್ದಿಟ್ಟ ಅರಣ್ಯ ಪ್ರದೇಶವು ಸುತ್ತಮುತ್ತಲಿನ ರಹವಾಸಿಗಳಿಗೆ ಒಳ್ಳೆಯ ಅಹ್ಲಾದಕರ ಪರಿಸರವಾಗಿದ್ದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಕಳೆದ 10-05-2022 ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೇಂದ್ರದ ರಕ್ಷಣಾ ಸಚಿವ ರಾಜನಾಥಸಿಂಗ್ ಇವರನ್ನು ಬೇಟಿಯಾಗಿ ಬೆಳಗಾವಿಯ ಶ್ರೀನಗರ ಹಾಗೂ ವಂಟಮುರಿ , ಇತ್ಯಾದಿ ಪ್ರದೇಶಗಳ ವ್ಯಾಪ್ತಿಯಲ್ಲಿ ಬರುವ 745 ಎಕರೆ ಕಾಯ್ದಿಟ್ಟ ಅರಣ್ಯ ಪ್ರದೇಶವನ್ನು ಐ.ಟಿ. ಮತ್ತು ಬಿ.ಟಿ. ಖಾಸಗಿ ಕಂಪನಿಗಳಿಗೆ ಹಸ್ತಾಂತರಿಸಲು ಒಪ್ಪಿಗೆ ಸೂಚಿಸಿದ್ದನ್ನು ಖಂಡಿಸಿದ್ದಾರೆ.

ಸರ್ಕಾರ ಈಗಾಗಲೇ ಬೆಳಗಾವಿಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಆಯ್.ಟಿ ಮತ್ತು ಬಿ.ಟಿ. ಕಂಪನಿಗಳಿಗೆ ಜಮೀನನ್ನು ಕಾಯ್ದಿರಿಸಿದ್ದು ಇರುತ್ತದೆ . ಐಟಿ ಮತ್ತು ಬಿ.ಟಿ. ಕಂಪನಿಗಳಿಗೆ ಕಾಯ್ದಿರಿಸಿದ ಜಾಗೆಯನ್ನು ಹಸ್ತಾಂತರಿಸಿ ಕಾರ್ಯಗತಗೊಳಿಸಲು ನಮ್ಮ ವಿರೋಧ ಇಲ್ಲ. ಆದರೆ ಮೇಲ್ದಾಣಿಸಿದ 745 ಎಕರೆ ಅರಣ್ಯ ಪ್ರದೇಶವು ವಸತಿ ಏರಿಯಾದಲ್ಲಿ ಬರುತ್ತದೆ . ಒಂದು ವೇಳೆ ಸರ್ಕಾರ 745 ಎಕರೆ ಅರಣ್ಯ ಪ್ರದೇಶವನ್ನು ಐಟಿ ಮತ್ತು ಬಿ.ಟಿ. ಕಂಪನಿಗಳಿಗೆ ಹಸ್ತಾಂತರಿಸಿದರೆ ಈಗಾಗಲೇ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಬೆಳೆಸಿದ ಗಿಡ ಮರಗಳು ನಾಶವಾಗುತ್ತವೆ .

ಈ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ವನ್ಯಜೀವಿಗಳು , ಪಶು – ಪಕ್ಷಿಗಳು ಮೌಲ್ಯಭರಿತ ವೃಕ್ಷಗಳು ಹಾಗೂ ಅನೇಕ ಧಾರ್ಮಿಕ ಸ್ಥಳಗಳು ಹಾಗೂ ಭಕ್ತಿ ಕೇಂದ್ರಗಳು ಇರುತ್ತವೆ . ಈ ಕಾಯ್ದಿಟ್ಟ ಅರಣ್ಯ ಪ್ರದೇಶವನ್ನು ಹೊರತುಪಡಿಸಿ ಸುತ್ತ – ಮುತ್ತಲಿನ ಸಾರ್ವಜನಿಕರಿಗೆ ಉಸಿರಾಡುವುದಕ್ಕೆ ಸ್ವಸ್ತ ಗಾಳಿ , ಹಾಗೂ ವಾಯುವಿಹಾರ ಮಾಡುವುದಕ್ಕೆ ಬೇರೆ ಪ್ರದೇಶಗಳು ಇರುವುದಿಲ್ಲ .  ಒಂದೊಮ್ಮೆ ಈ ಕಾಯ್ದಿಟ್ಟ ಅರಣ್ಯ ಪ್ರದೇಶದ ವ್ಯಾಪ್ತಿಯ 745 ಎಕರೆ ಜಮೀನನ್ನು ಆಯ್.ಟಿ ಮತ್ತು ಬಿ.ಟಿ. ಕಂಪನಿಗಳಿಗೆ ಹಸ್ತಾಂತರಿಸಿದರೆ ಸಾರ್ವಜನಿಕರ ಹಾಗೂ ಹಿರಿಯ ನಾಗರಿಕರ ಆರೋಗ್ಯದ ಮೇಲೆ ಹಾಗೂ ವನ್ಯಜೀವಿಗಳು , ಪಶು – ಪಕ್ಷಿಗಳು ಮೌಲ್ಯಭರಿತ ವೃಕ್ಷಗಳಿಗೆ ತುಂಬಲಾರದಷ್ಟು ನಷ್ಟ ಉಂಟಾಗುತ್ತದೆ . ಆದ್ದರಿಂದ  ತಕ್ಷಣವೆ ಈ ಪೂರ್ವ ನಿಯೋಜಿತ ಯೋಜನೆಯನ್ನು ಕೈಬಿಡಬೇಕೆಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.

ರಾಜಕುಮಾರ ಟೋಪಣ್ಣವರ, ಆರ್.ಪಿ.ಪಾಟೀಲ, ಎನ್.ಆರ್.ಲಾತೂರ, ಸುಜೀತ ಮುಳಗುಂದ, ಶಂಕರ ಹೆಗಡೆ, ಅಖಿಲಾ ಪಠಾಣ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ತಮ್ಮನನ್ನೇ ಇರಿದು ಕೊಂದ ಅಣ್ಣ; ಗೋಕಾಕಲ್ಲಿ ಘೋರ ಕೃತ್ಯ

ಭಾರಿ ಮಳೆ; 5 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button