Kannada NewsLatest
ತಮ್ಮನನ್ನೇ ಇರಿದು ಕೊಂದ ಅಣ್ಣ; ಗೋಕಾಕಲ್ಲಿ ಘೋರ ಕೃತ್ಯ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಅಣ್ಣನೊಬ್ಬ ತನ್ನ ಒಡಹುಟ್ಟಿದ ತಮ್ಮನನ್ನೇ ಬರ್ಬರವಾಗಿ ಹತ್ಯೆಗೈದ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನಲ್ಲಿ ನಡೆದಿದೆ.
ಮುನಾಫ್ ದೇಸಾಯಿ (24) ಕೊಲೆಯಾದ ಸಹೋದರ. ರಮಜಾನ್ ದೇಸಾಯಿ (26) ತಮ್ಮನನ್ನೇ ಕೊಂದ ಅಣ್ಣ. ಮುನಾಫ್ ಯುವತಿಯೊಬ್ಬಳ ವಿಚಾರವಾಗಿ ತಂದೆ-ತಾಯಿಯೊಂದಿಗೆ ದಿನವೂ ಜಗಳವಾಡುತ್ತಿದ್ದ ಎನ್ನಲಾಗಿದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಅಣ್ಣ ರಮಜಾನ್ ಮುನಾಫ್ ಗೆ ಬೈದಿದ್ದಾನೆ. ಇಬ್ಬರ ನಡುವೆ ಜಗಳ ವಿಕೋಪಕ್ಕೆ ತಿರುಗಿದೆ.
ಸಿಟ್ಟಿನ ಬರದಲ್ಲಿ ಅಣ್ಣ ರಮಜಾನ್ ತಮ್ಮನಿಗೆ ಚಾಕುವಿನಿಂದ ಇರಿದಿದ್ದಾನೆ. ರಕ್ತದ ಮಡುವಲ್ಲಿ ಬಿದ್ದ ಮುನಾಫ್ ನನ್ನು ತಕ್ಷಣ ಗೋಕಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆಯಾದರೂ ತೀವ್ರ ರಕ್ತಸ್ರಾವದಿಂದ ಮುನಾಫ್ ಸಾವನ್ನಪ್ಪಿದ್ದಾನೆ.
ಆರೋಪಿ ರಮಜಾನ್ ನನ್ನು ಗೋಕಾಕ್ ನಗರ ಪೊಲೀಸರು ಬಂಧಿಸಿದ್ದಾರೆ.
ನ್ಯಾಯ ಕೊಡಿಸದಿದ್ದರೆ ಉಗ್ರರ ಜತೆ ಕೈಜೊಡಿಸುತ್ತೇವೆ; ಪ್ರಧಾನಿಗೆ ರಕ್ತದಲ್ಲಿ ಪತ್ರ ಬರೆದ ಪಿಎಸ್ ಐ ಅಭ್ಯರ್ಥಿಗಳು




