ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಪತ್ನಿಗೆ ಹಿಂಸೆ, ಕಿರುಕುಳ ನೀಡಿದ ಆರೋಪದಡಿ ಐಪಿಎಸ್ ಅಧಿಕಾರಿ ರವಿ.ಡಿ.ಚೆನ್ನಣ್ಣವರ್ ಸಹೋದರ ರಾಘವೇಂದ್ರ ಚನ್ನಣ್ಣವರ್ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.
ಬೆಂಗಳೂರಿನ ಚಂದ್ರಾಲೇಔಟ್ ಠಾಣೆಯಲ್ಲಿ ರಾಘವೇದ್ರ ಚನ್ನಣ್ಣವರ್ ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪದಡಿ ಎಫ್ ಐ ಆರ್ ದಾಖಲಾಗಿದೆ.
ರಾಘವೇಂದ್ರ ಚನ್ನಣ್ಣವರ್ ರೋಜಾ ಎಂಬುವವರನ್ನು 2015ರಲ್ಲಿ ವಿವಾಹವಾಗಿದ್ದರು. ರವಿ ಡಿ.ಚನ್ನಣ್ಣವರ್ ಮುಂದೆ ನಿಂತು ಮದುವೆ ಮಾಡಿಸಿದ್ದರು. ಆದರೆ ಮದುವೆಯಾದ ಒಂದೇ ವರ್ಷಕ್ಕೆ ರಾಘವೇಂದ್ರ ಚನ್ನಣ್ಣವರ್ ಬೇರೊಂದು ಮಹಿಳೆ ಜತೆ ಅಕ್ರಮ ಸಂಬಂಧ ಹೊಂದಿದ್ದಲ್ಲದೇ ಬಳಿಕ ಆಕೆಯೊಂದಿಗೆ ವಿವಾಹ ಮೊದಲೇ ಆಗಿತ್ತು ಎಂದು ಹೇಳಿದ್ದರಂತೆ. ಈ ಬಗ್ಗೆ ರೋಜಾ ಪ್ರಶ್ನಿಸಿದಾಗ ಮನೆಯವರೆಲ್ಲ ನಂಬಿಸಿ ಸಮಯಾವಕಾಶ ಕೊಡು ಆತ ಸರಿಹೋಗುತ್ತಾನೆ, ನೀನು ಉನ್ನತ ಶಿಕ್ಷಣದತ್ತ ಗಮನ ಹರಿಸು ಎಂದು ಹೇಳಿ ಕಳುಹಿಸಿದ್ದರು ಎಂದು ರೋಜಾ ಆರೋಪಿಸಿದ್ದಾರೆ.
ಈಗ ಮನೆಯವರು ರಘವೇಂದ್ರನ ಮತ್ತೋರ್ವ ಪತ್ನಿಯ ಜತೆ ಹೊಂದಿಕೊಂಡು ಹೋಗು ಎಂದು ಹೇಳುತ್ತಿದ್ದಾರೆ. ಅಲ್ಲದೇ ರಾಘವೇಂದ್ರ ಚೆನ್ನಣ್ಣವರ್ ಕಿರುಕುಳ ನೀಡುತ್ತಿದ್ದಾರೆ ಎಂದು ಪತ್ನಿ ಆರೋಪಿಸಿದ್ದಾರೆ. ನ್ಯಾಯಕ್ಕಾಗಿ ಚಂದ್ರಾ ಲೇಔಟ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪತ್ನಿಗೆ ವರದಕ್ಷಿಣೆ ಕಿರುಕುಳ ಆರೋಪದಲ್ಲಿ ರಾಘವೇಂದ್ರ ಚನ್ನಣ್ಣವರ್ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.
ಗ್ರಾಹಕರಿಗೆ ಬಿಗ್ ಶಾಕ್; ಅಡುಗೆ ಅನಿಲ ದರ ಮತ್ತಷ್ಟು ಏರಿಕೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ