Kannada NewsKarnataka NewsLatest

ಮಿನಿ ಓಲಂಪಿಕ್ಸ್ ನಲ್ಲಿ ಸಾಧನೆ ಮೆರೆದ ಬೆಳಗಾವಿ ಬಾಲಕಿಯರಿಗೆ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಅಭಿನಂದನೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಂಗಳೂರಿನಲ್ಲಿ ನಡೆದ ಮಿನಿ ಓಲಂಪಿಕ್ಸ್ ನಲ್ಲಿ ವಿಜೇತರಾದ ಬೆಳಗಾವಿ ಬಾಲಕಿಯರ ತಂಡವನ್ನು ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಶನಿವಾರ ಅಭಿನಂದಿಸಿ, ಶುಭ ಹಾರೈಸಿದ್ದಾರೆ.
 
 ಬೆಂಗಳೂರಿನಲ್ಲಿ ಮೇ 16-22 ವರೆಗೆ ನಡೆದ ಎರಡನೆಯ ಮಿನಿ ಒಲಿಂಪಿಕ್ಸ್ ನಲ್ಲಿ ಬೆಳಗಾವಿಯ ಸಾನ್ವಿ ಮಾಂಡೇಕರ್ ನಾಯಕತ್ವದಲ್ಲಿ, ಆಯುಷಿ ಗೊಡ್ಸೆ, ತನಿಷ್ಕಾ ಕಾಲಭೈರವ್ ಹಾಗೂ ಸಾನ್ವಿ ರಾಯ್ಕರ್ ತಂಡ ಟೆಬಲ್ ಟೆನ್ನಿಸ್ ನಲ್ಲಿ ಗೋಲ್ಡ್ ಮೆಡಲ್ ಪಡೆದಿದ್ದಾರೆ.
ಅಲ್ಲದೆ, ಸಿಂಗಲ್ಸ್ ಈವೆಂಟ್ ನಲ್ಲಿ ಸಾನ್ವಿ ಮಾಂಡೇಕರ್ ಗೋಲ್ಡ್ ಮೆಡಲ್, ಆಯುಷಿ ಗೋಡ್ಸೆ ಸಿಲ್ವರ್ ಮೆಡಲ್, ತನಿಷ್ಕಾ ಕಾಲಭೈರವ್ ಬ್ರೊಂಜ್ ಮೆಡಲ್ ಪಡೆದಿದ್ದಾರೆ. 
ಡಬಲ್ಸ್ ಈವೆಂಟ್ ನಲ್ಲಿ ಸಾನ್ವಿ ಮಾಂಡೇಕರ್ ಹಾಗೂ ಆಯುಷಿ ಗೋಡ್ಸೆ ಗೊಲ್ಡ್ ಮೆಡಲ್ ಪಡೆದಿದ್ದಾರೆ.
 
ಬಾಲಕಿಯರ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ ಲಕ್ಷ್ಮೀ ಹೆಬ್ಬಾಳಕರ್, ಮುಂದಿನ ದಿನಗಳಲ್ಲಿ ಹೆಚ್ಚಿನ ಸಾಧನೆ ಮಾಡುವಂತೆ ಶುಭ ಹಾರೈಸಿದರು. ಅಲ್ಲದೆ, ಯಾವುದೇ ರೀತಿಯ ಸಹಕಾರ ಬೇಕಿದ್ದರೂ ನೀಡಲು ಸಿದ್ಧ ಎಂದು ಭರವಸೆ ನೀಡಿದರು.

Related Articles

Back to top button