Kannada NewsLatest

ಅಹಿಂಸಾ ಪರಮೋಧರ್ಮ ತತ್ವವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು; ಶಾಸಕ ಶ್ರೀಮಂತ ಪಾಟೀಲ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಶೇಡಬಾಳ ಪಟ್ಟಣದಲ್ಲಿ ಶ್ರೀ ಆದಿನಾಥ ದಿಗಂಬರ ಜೈನ ಮಂದಿರದ ವತಿಯಿಂದ ಆಯೋಜಿಸಿದ ಪಂಚಕಲ್ಯಾಣ ಪ್ರತಿಷ್ಠಾ ಮಹೋತ್ಸವದಲ್ಲಿ ಕಾಗವಾಡ ಮತಕ್ಷೇತ್ರದ ಶಾಸಕ, ಮಾಜಿ ಸಚಿವರಾದ ಶ್ರೀಮಂತ (ತಾತ್ಯಾ) ಪಾಟೀಲ ಅವರು ಭಾಗವಹಿಸಿ, ತೀರ್ಥಂಕರಿಗೆ ವಿಶೇಷ ಪೂಜೆ ಸಲ್ಲಿಸಿ, ಮುನಿ ಮಹಾರಾಜರ ಆಶೀರ್ವಾದ ಪಡೆದರು.

ಈ ವೇಳೆ ಮಾತನಾಡಿದ ಶಾಸಕರು, ಶೇಡಬಾಳ ಪಟ್ಟಣದಲ್ಲಿ ಎಲ್ಲರೂ ಒಂದಾಗಿ ಈ ಒಂದು ಪಂಚಕಲ್ಯಾಣ ಮಹೋತ್ಸವ ಕಾರ್ಯಕ್ರಮವನ್ನು ಆಯೋಜಿಸಿದ್ದು ಸಂತೋಷದ ವಿಷಯ. ವಿಶ್ವದಲ್ಲಿ ಜೈನಧರ್ಮವು ಒಂದು ಅಹಿಂಸಾ ಪರಮೋಧರ್ಮವಾಗಿದ್ದು ಅವುಗಳ ತತ್ವ ಮತ್ತು ಸಿದ್ಧಾಂತಗಳ ಮೇಲೆ ವಿಶ್ವವ್ಯಾಪ್ತಿ ಶಾಂತಿ ಹಾಗೂ ಸಾಮರಸ್ಯದ ಜೀವನಕ್ಕೆ ದಾರಿಯಾಗಿದೆ. ಆ ತತ್ವಗಳನ್ನು ನಾವೆಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳೋಣ ಎಂದರು.

ಈ ಸಮಯದಲ್ಲಿ ಜೈನ ಸಮಾಜದ ಮುನಿ ಮಹಾರಾಜರು, ಸ್ವಾಮೀಜಿಗಳು, ಸ್ಥಳೀಯ ಮುಖಂಡರು, ಕಾರ್ಯಕರ್ತರು, ಜೈನ ಸಮಾಜದ ಶ್ರಾವಕ ಶ್ರಾವಕಿಯರು ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.
ಬೆಳಗಾವಿ: ಬೀರೇಶ್ವರ ದೇವರ ವಿಗ್ರಹವನ್ನೇ ಕದ್ದೊಯ್ದ ಕಳ್ಳರು

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button