Kannada NewsLatest

ಗಚ್ಚಿನ ಮಠದ ಶಿವಬಸವ ಸ್ವಾಮೀಜಿಗಳ ನೇತೃತ್ವದಲ್ಲಿ ಅಥಣಿ ಪಟ್ಟಣ ಅಭಿವೃದ್ಧಿ ಪಥದಲ್ಲಿ ಸಾಗಲಿ: ಶಾಸಕ ಶ್ರೀಮಂತ ಪಾಟೀಲ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಅಥಣಿಯ ಗಚ್ಚಿನಮಠದ ಮಹಾತಪಸ್ವಿ ಮುರುಘೇಂದ್ರ ಶಿವಯೋಗಿಗಳು ಲಿಂಗೈಕ್ಯ ಶತಮಾನೋತ್ಸವ ಹಾಗೂ ಶಿವಬಸವ ಸ್ವಾಮೀಜಿಗಳ ನಿರಂಜನ ಚರ ಪಟ್ಟಾಧಿಕಾರ ಸಮಾರಂಭದಲ್ಲಿ ಕಾಗವಾಡ ಮತಕ್ಷೇತ್ರದ ಶಾಸಕ ಶ್ರೀಮಂತ (ತಾತ್ಯಾ) ಪಾಟೀಲ ಅವರು ಭಾಗವಹಿಸಿ, ಪರಮಪೂಜ್ಯ ಶಿವಬಸವ ಸ್ವಾಮಿಜಿಯವರ ಆಶೀರ್ವಾದವನ್ನು ಪಡೆದು, ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

ಶಾಸಕರು ಗಚ್ಚಿನಮಠದ ಶಿವಬಸವ ಸ್ವಾಮೀಜಿಗಳ ಆಶೀರ್ವಾದ ಪಡೆದು, ಅವರಿಗೆ ಸತ್ಕರಿಸಿ ಗೌರವಿಸಿದರು. ಇದೇ ಸಮಯದಲ್ಲಿ ಪರಮಪೂಜ್ಯ ಶಿವಬಸವ ಸ್ವಾಮೀಜಿಗಳು ಪ್ರೀತಿಯಿಂದ ಮಾಡಿದ ಸನ್ಮಾನವನ್ನು ಶಾಸಕರು ಸ್ವೀಕರಿಸಿದರು.

ಮಹಾತಪಸ್ವಿ ಜಂಗಮ ಜ್ಯೋತಿ ಅಥಣಿಯ ಮುರುಘೇಂದ್ರ ಶಿವಯೋಗಿಗಳು ಲಿಂಗೈಕ್ಯ ಶತಮಾನೋತ್ಸವದ ನಿಮಿತ್ಯ ಶ್ರೀಗಳಿಗೆ ಸಾಷ್ಟಾಂಗ ಗೌರವ ನಮನ ಸಲ್ಲಿಸಿ, ಮಹಾತಪಸ್ವಿ ಮುರುಘೇಂದ್ರ ಶಿವಯೋಗಿಗಳ ಲಿಂಗೈಕ್ಯ ಶತಮಾನೋತ್ಸವ ಹಾಗೂ ಗಚ್ಚಿನ ಮಠದ ಶ್ರೀ ಶಿವಬಸವ ಸ್ವಾಮೀಜಿಗಳ ನಿರಂಜನ ಚರಪಟ್ಟಾಧಿಕಾರ ದೀಕ್ಷ ಸಮಾರಂಭದಲ್ಲಿ ಭಾಗವಹಿಸಿದ್ದು ನನಗೆ ಅತೀವ ಸಂತೋಷವಾಗಿದೆ, ಇಂತಹ ಮಹಾನ್ ಪುರುಷರ ನಾಡಿನಲ್ಲಿ ನಾವೆಲ್ಲರೂ ಹುಟ್ಟಿರುವುದು ನಮ್ಮೆಲ್ಲರ ಸೌಭಾಗ್ಯ ಎಂದರು.

ನಮ್ಮ ಅಥಣಿಯ ಗಚ್ಚಿನ ಮಠದ ಪರಮಪೂಜ್ಯ ಶಿವಬಸವ ಸ್ವಾಮೀಜಿಗಳು ಮಹಾತಪಸ್ವಿ ಮುರುಘೇಂದ್ರ ಶಿವಯೋಗಿಗಳ ಲಿಂಗೈಕೆ ಶತಮಾನೋತ್ಸವ ದಿನದಂದು ಇವತ್ತು ಪಟ್ಟಾಧಿಕಾರವನ್ನು ವಹಿಸಿಕೊಂಡಿರುವುದು ಸಂತೋಷದ ವಿಷಯ. ಅಥಣಿಯ ಗಚ್ಚಿನ ಮಠದ ಶ್ರೀ ಶಿವಬಸವ ಸ್ವಾಮೀಜಿಗಳು ಯಾವುದೇ ಒಂದು ಮಠದ ಅಧಿಪತಿಯಾಗದೇ, ಎಲ್ಲ ಸ್ವಾಮೀಜಿಗಳಲ್ಲಿ ಒಬ್ಬರು ಆದರ್ಶವಾಗಿದ್ದು, ಎಲ್ಲ ಸಮುದಾಯವನ್ನು ಸಹೋದರ ಭಾವದಿಂದ ಕಾಣುವ ಸಮಾನತೆಯ ಆದ್ಯತೆಯನ್ನು ನೀಡಿ ಯಾವುದೇ ಭೇದ ಭಾವವಿಲ್ಲದೇ ಗಚ್ಚಿನಮಠವನ್ನು ಉತ್ತುಂಗಕ್ಕೆ ಕೊಂಡೊಯ್ಯುತ್ತಿರುವ ಶಿವಬಸವ ಸ್ವಾಮೀಜಿಗಳು ಇವತ್ತು ಪಟ್ಟಾಧಿಕಾರವನ್ನು ವಹಿಸಿಕೊಂಡಿದ್ದು, ಅವರಿಗೆ ಮುರಗೇಂದ್ರ ಶಿವಯೋಗಿಗಳ ಸವಿನೆನಪಿಗಾಗಿ ಶ್ರೀಗುರು ಮುರಘರಾಜೇಂದ್ರ ಸ್ವಾಮೀಜಿ ಎಂಬ ನಾಮಾಂಕಿತವನ್ನು ನೀಡಿ ಗೌರವಿಸಿದ್ದಾರೆ.

ಗಚ್ಚಿನ ಮಠದ ಶಿವಬಸವ ಸ್ವಾಮೀಜಿಗಳ ನೇತೃತ್ವದಲ್ಲಿ ಅಥಣಿ ಪಟ್ಟಣವು ಹಾಗೂ ಗಚ್ಚಿನಮಠ ಅಭಿವೃದ್ಧಿ ಪಥದಲ್ಲಿ ಸಾಗಲಿ ಎಂದು ಸ್ವಾಮೀಜಿಗಳಿಗೆ ಶುಭ ಕೋರಿದರು.

ಈ ಸಮಾರಂಭದಲ್ಲಿ ಹಲವಾರು ಸ್ವಾಮೀಜಿಗಳು, ರಾಜಕೀಯ ಧುರೀಣರು, ಸ್ಥಳೀಯ ಗಣ್ಯ ಮಾನ್ಯರು, ಚಲನಚಿತ್ರ ಹಾಸ್ಯ ಕಲಾವಿದರು, ಸಮಸ್ತ ಅಥಣಿ ಪಟ್ಟಣದ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಸಾರ್ವಜನಿಕರು ಉಪಸ್ಥಿತರಿದ್ದರು.
ದಾವೋಸ್ ನಲ್ಲಿ ಹೂಡಿಕೆ ಆಕರ್ಷಣೆಗೆ ರಾಜ್ಯದ ಯಶಸ್ವಿ ಪ್ರಯತ್ನ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button