ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರೈಲ್ವೆ ಸ್ಟೇಷನ್ ಮಾಸ್ಟರ್ ಗಳು ಮುಷ್ಕರಕ್ಕೆ ಕರೆ ನೀಡಿದ್ದು, ರೈಲ್ವೆ ಸಂಚಾರದಲ್ಲಿ ಭಾರಿ ವ್ಯತ್ಯಯವಾಗುವ ಸಾಧ್ಯತೆ ದಟ್ಟವಾಗಿದೆ.
ಅಖಿಲ ಭಾರತ ಸ್ಟೇಷನ್ ಮಾಸ್ಟರ್ ಗಳ ಒಕ್ಕೂಟ ಮೇ 31ರಂದು ಸಾಮೂಹಿಕ ಮುಷ್ಕರಕ್ಕೆ ಮುಂದಾಗಿದೆ. ಎಲ್ಲರೂ ಒಗ್ಗಟ್ಟಿನಿಂದ ರಜೆ ಹಾಕುವ ಮೂಲಕ ಪ್ರತಿಭಟನೆ ನಡೆಸಲಿದ್ದು, ರೈಲು ಸಂಚಾರದಲ್ಲಿ ಭಾರಿ ವ್ಯತ್ಯಯವಾಗಲಿದೆ.
ಖಾಲಿ ಇರುವ ಸ್ಟೇಷನ್ ಮಾಸ್ಟರ್ ಹುದ್ದೆಗಳಿಗೆ ಭರ್ತಿಗೆ ಕ್ರಮ ಕೈಗೊಳ್ಳಬೇಕು. ರಾತ್ರಿ ಪಾಳಿ ಭತ್ಯೆ ನೀಡುವುದು, ಸಂಬಳ ಹೆಚ್ಚಳ, ಬಾಕಿ ಬಡ್ತಿ ವಿತರಣೆ, ಭದ್ರತೆ ಹಾಗೂ ಮಾನಸಿಕ ಒತ್ತಡ ಭ್ಯತ್ಯೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮುಷಕರಕ್ಕೆ ಕರೆ ಕೊಟ್ಟಿದೆ.
ಅನಿಲ ಬೆನಕೆ ಬಿಜೆಪಿ ಅಧ್ಯಕ್ಷ: ಹಲವು ರೀತಿಯ ಚರ್ಚೆಗೆ ಅವಕಾಶ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ