
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ನೀರಿನ ಟ್ಯಾಂಕರ್ ಗೆ ಮೂರು ವರ್ಷದ ಬಾಲಕ ಬಲಿಯಾಗಿರುವ ಹೃದಯ ವಿದ್ರಾವಕ ಘಟನೆ ಬೆಂಗಳೂರಿನ ಸರ್ಜಾಪುರ ರಸ್ತೆಯ ಶ್ವೇತಾ ರೆಸಿಡೆನ್ಸಿ ಎದುರು ನಡೆದಿದೆ.
ಅಪಾರ್ಟ್ ಮೆಂಟ್ ಗೆ ನೀರು ಪೂರೈಕೆ ಮಾಡುತ್ತಿದ್ದ ವಾಟರ್ ಟ್ಯಾಂಕರ್ ಬಾಲಕನ ಮೇಲೆ ಹರಿದಿದೆ. 3 ವರ್ಷದ ಬಾಲಕ ಪ್ರತಿಷ್ಠ ಟ್ಯಾಂಕರ್ ಚಕ್ರಕ್ಕೆ ಸಿಲುಕಿ ಬಲಿಯಾಗಿದ್ದಾನೆ.
ನೀರನ್ನು ಅನ್ ಲೋಡ್ ಮಾಡಿದ್ದ ವಾಟರ್ ಟ್ಯಾಂಕರ್ ಚಾಲಕ, ಬಾಲಕ ವಾಹನದ ಹಿಂದೆ ಇರುವುದನ್ನು ಗಮನಿಸದೇ ವಾಹನ ರಿವರ್ಸ್ ತೆಗೆದುಕೊಂಡಿದ್ದಾನೆ. ಈ ವೇಳೆ ಬಾಲಕ ನೀರಿನ ಟ್ಯಾಂಕರ್ ಚಕ್ರದ ಕೆಳಗೆ ಸಿಲುಕಿ ಸಾವನ್ನಪ್ಪಿದ್ದಾನೆ.
ಹೆಚ್ ಎಸ್ ಆರ್ ಲೇಔಟ್ ಠಾಣೆ ಪೊಲೀಸರು ಸ್ಥಳಕ್ಕೆ ಭೆಟಿ ನೀಡಿದ್ದು, ವಾಟರ್ ಟ್ಯಾಂಕರ್ ಚಾಲಕನ್ನು ವಶಕ್ಕೆ ಪಡೆದಿದ್ದಾರೆ.
ಶಾಲಾ ಬಸ್ ಹರಿದು ಬಾಲಕಿ ದುರ್ಮರಣ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ